ವಿಮಾನಕ್ಕೆ ಹಕ್ಕಿಗಳ ಹಿಂಡೊಂದು ಡಿಕ್ಕಿ; ಮೆಕ್ಕೆಜೋಳದ ಹೊಲದಲ್ಲಿ ತುರ್ತು ಲ್ಯಾಂಡ್ 233 ಪ್ರಯಾಣಿಕರ ಜೀವ ಉಳಿಸಿದ ಪೈಲೆಟ್!!

0
216

ಇತ್ತೀಚಿನ ದಿನಮಾನಗಳಲ್ಲಿ ವಿಮಾನ ದುರಂತಗಳು ಹೆಚ್ಚು ಕೇಳಿಬರುತ್ತಿದ್ದು, ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಕೆಲವು ದುರಂತಗಳಲ್ಲಿ ಪೈಲಟ್ ಮುನ್ನೆಚ್ಚರಿಕೆ ಇಂದ ನೂರಾರು ಜನರು ಬದುಕಿದ್ದಾರೆ. ಇಂತಹದೆಯೊಂದು ಘಟನೆ ನಿನ್ನೆ ನಡೆದಿದ್ದು 233 ಜನರಿರುವ ವಿಮಾನಯೊಂದು ಕುದಲೆಳೆಯ ಅಂತರದಲ್ಲಿ ಪಾರಾಗಿದೆ. ಅಷ್ಟೇ ಅಲ್ಲದೆ ಆಶ್ಚರ್ಯಕರ ರೀತಿಯಲ್ಲಿ ಲ್ಯಾಂಡ್ ಆಗಿದ್ದು, ಮೆಕ್ಕೆಜೋಳದ ಹೊಲದಲ್ಲಿ ಪೈಲೆಟ್ ವಿಮಾನವನ್ನು ತುರ್ತು ಲ್ಯಾಂಡ್ ಮಾಡಿ ಪ್ರಯಾಣಿಕರನ್ನು ಕಾಪಾಡಿದ್ದಾನೆ.

ಏನಿದು ಘಟನೆ?

ರಷ್ಯಾದ ವಿಮಾನವೊಂದಕ್ಕೆ ಹಕ್ಕಿಗಳ ಹಿಂಡೊಂದು ಢಿಕ್ಕಿ ಹೊಡೆದು ವಿಮಾನ ಟೇಕ್ ಆಫ್ ಆದ ಸ್ವಲ್ಪ ಹೊತ್ತಲ್ಲೇ ತೊಂದರೆಗೆ ಸಿಲುಕಿದೆ. ಒಟ್ಟು 226 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿಯಿದ್ದ ವಿಮಾನ ಇನೇನು ಇಳಿಯಬೇಕು ಎನ್ನುವುದರಲ್ಲಿ ಈ ಅವಘಡ ಸಂಭವಿಸಿದ್ದು, ಪೈಲೆಟ್ ಮಾಸ್ಕೋದ ಹೊರವಲಯದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದು, ಮೆಕ್ಕೆಜೋಳದ ಹೊಲದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಓರ್ವ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಉಳಿದವರೆಲ್ಲರೂ ಸುಕ್ಷಿತವಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಅದರಂತೆ ಘಟನೆಯಲ್ಲಿ 23 ಮಂದಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಉರಲ್​ ಏರ್​ಲೈನ್ಸ್​ 321 ವಿಮಾನ ಹಾರಿದ ಕೇವಲ ಹೊತ್ತಿನಲ್ಲಿ ಗುಲ್ಸ್​ ಹಕ್ಕಿಗಳ ಹಿಂಡು ವಿಮಾನದ ರೆಕ್ಕೆಗೆ ಡಿಕ್ಕಿ ಹೊಡೆದಿವೆ. ಇದರಿಂದ ಎಂಜಿನ್​ ಸಮಸ್ಯೆಗೆ ಈಡಾಗಿದೆ ಎಂದು ತಿಳಿದುಬಂದಿದೆ. ವಿಮಾನ ತಾಂತ್ರಿಕ ಸಮಸ್ಯೆಗೆ ಗುರಿಯಾದಾಗ ವಿಮಾನವನ್ನು ಸುಮಾರು ಒಂದು ಕಿ.ಮೀ. ಕೆಳಮಟ್ಟದಲ್ಲಿ ಚಲಾಯಿಸಿ, ಜೋಳದ ಹೊಲದಲ್ಲಿ ಯಶಸ್ವಿಯಾಗಿ ಇಳಿಸಿರುವ ಪೈಲಟ್​ ನನ್ನು ಅಲ್ಲಿನ ಮಾಧ್ಯಮಗಳು ಹಿರೋ ಎಂದು ಬಿಂಬಿಸಿವೆ. ಅಲ್ಲದೇ, ಘಟನೆಯಲ್ಲಿ ಒಬ್ಬರಿಗೆ ತೀವ್ರ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ವರದಿಯಾಗಿದೆ.

2009ರಲ್ಲಿ ಅಮೆರಿಕ ವಿಮಾನವೊಂದು ಇದೇ ರೀತಿಯಾಗಿ ಲ್ಯಾಂಡ್​ ಮಾಡಲಾಗಿತ್ತು. ಅಮೆರಿಕದ 1549 ವಿಮಾನಕ್ಕೆ ಗೀಸ್​ ಹಕ್ಕಿಗಳ ಹಿಂಡು ಡಿಕ್ಕಿ ಹೊಡೆದಿದ್ದರಿಂದ ತಾಂತ್ರಿಕ ಸಮಸ್ಯೆಗೆ ಈಡಾದ ವಿಮಾನವನ್ನು ಹುಡ್ಸನ್​ ನದಿಯ ಮೇಲೆ ಲ್ಯಾಂಡಿಂಗ್​ ಮಾಡಲಾಗಿತ್ತು. ಸ್ಥಳೀಯ ಮಾಧ್ಯಮವೊಂದು ಪ್ರಯಾಣಿಕರೊಬ್ಬರ ಸಂದರ್ಶನ ಮಾಡಿದ್ದು, ಅದರಲ್ಲಿ ಅವರು, ವಿಮಾನ ಟೇಕ್​ ಆಫ್​ ಆದ ಐದು ಸೆಕೆಂಡ್​ಗಳ ನಂತರ ವಿಮಾನದ ಬಲಭಾಗದ ದೀಪಗಳು ಉರಿದಂತೆ ಕಂಡುಬಂತು, ಆನಂತರ ಸುಟ್ಟವಾಸನೆ ಬರಲಾರಂಭಿಸಿತು. ತಕ್ಷಣವೇ ವಿಮಾನವನ್ನು ಲ್ಯಾಂಡ್​ ಮಾಡಲಾಯಿತು. ಆನಂತರ ನಾವು ಅಲ್ಲಿಂದ ಓಡಲಾರಂಭಿಸಿದೋ ಎಂದು ತಿಳಿಸಿದ್ದಾರೆ.

ವಿಮಾನ ಎಮರ್ಜೆನ್ಸಿ ಲ್ಯಾಂಡ್ ಆಗಿರುವುದನ್ನು ಅಲ್ಲಿನ ಟಿವಿ ವಾಹಿನಿಗಳು ಪವಾಡ ಎಂದು ಬಣ್ಣಿಸುತ್ತಿವೆ. ವಿಮಾನವು ಝುಕೋವಸ್ಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿ ಸುಮಾರು 1 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿದ ನಂತರ ತುರ್ತು ಲ್ಯಾಂಡ್ ಆಗಿದೆ. 2009ರಲ್ಲಿ ಯು.ಎಸ್.ಏರ್‌ವೇಸ್‌ನ 1549 ವಿಮಾನಕ್ಕೆ ಇದೇ ರೀತಿ ಹಕ್ಕಿಗಳು ಅಪ್ಪಳಿಸಿದ್ದವು. ಆಗ ವಿಮಾನವನ್ನು ಹಡ್ಸನ್ ನದಿಯಲ್ಲಿ ಲ್ಯಾಂಡ್ ಮಾಡಲಾಗಿತ್ತು. ಈಗ ಅದಕ್ಕಿಂತ ಸಾಹಸಮಯ ವಿಮಾನ ಲ್ಯಾಂಡ್ ಆಗಿದೆ ಹೇಳಲಾಗಿದೆ.