ದಾಲ್ಚಿನ್ನಿಯನ್ನು ಹಾಲಿನೊಂದಿಗೆ ಸೇರಿಸಿ ಕುಡಿಯುವುದರಿಂದಾಗುವ 6 ಲಾಭಗಳು.

0
1365

ಪಲಾವ್‍ಗೆ ಮೂಗು ಅರಳಿಸುವ ಘಮಘಮ ಪರಿಮಳ ಬೇಕೆಂದಾದರೆ ದಾಲ್ಚಿನ್ನಿಯ (ಚಕ್ಕೆ) ಎಲೆ ಮತ್ತು ತೊಗಟೆಯ ಚೂರುಗಳನ್ನೂ ಅದಕ್ಕೆ ಹಾಕಬೇಕು. ಅಡಿಗೆಗೆ ಬಳಕೆಯಾಗುವ ದಾಲ್ಚಿನ್ನಿ ಮನೆ ಮದ್ದಾಗಿಯೂ ಹಲವು ವಿಧದಲ್ಲಿ ಪರಿಣಾಮಕಾರಿ. ದಾಲ್ಚಿನ್ನಿ ಪುಡಿಯನ್ನು ಜೇನಿನ ಜೊತೆ ಬೆರೆಸಿ ಸೇವಿಸುವುದು ಉತ್ತಮ ಆರೋಗ್ಯಕ್ಕೆ ಸಹಕಾರಿ. ಅಷ್ಟೇ ಅಲ್ಲದೆ ಹಾಲಿನೊಂದಿಗೆ ದಾಲ್ಚಿನ್ನಿ ಬೆರೆಸಿ ಕುಡಿದರೆ ಆರೋಗ್ಯಕ್ಕೆ ತುಂಬಾ ಲಾಭಕರ.

ದಾಲ್ಚಿನ್ನಿ ಹಲವು ರೋಗಗಳನ್ನು ತಡೆಗಟ್ಟುವ ಮತ್ತು ಆರೋಗ್ಯವನ್ನು ಸುಧಾರಿಸುವಂತಹ ಗುಣವನ್ನು ಹೊಂದಿದೆ. ದಾಲ್ಚಿನ್ನಿಯನ್ನು ಹಾಲಿನೊಂದಿಗೆ ಸೇರಿಸಿ ಕುಡಿದರೆ ಎರಡರಲ್ಲಿನ ಔಷಧೀಯ ಗುಣಗಳು ಆರೋಗ್ಯವನ್ನು ವೃದ್ಧಿಸುವುದರಲ್ಲಿ ಸಂಶಯವೇ ಇಲ್ಲ. ಉರಿಯೂತ ಶಮನಕಾರಿ ಗುಣ ಹೊಂದಿರುವ ದಾಲ್ಚಿನ್ನಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ಹಾಲನ್ನು ಮಿಶ್ರಣ ಮಾಡಿದಾಗ ಸಿಗುವ ಫಲಿತಾಂಶ ಅದ್ಭುತವಾಗಿರುತ್ತದೆ. ದಾಲ್ಚಿನ್ನಿ ಹಾಲನ್ನು ತಯಾರಿಸುವುದು ತುಂಬಾ ಸುಲಭ. ಎರಡು ಚಮಚ ದಾಲ್ಚಿನ್ನಿ ಹುಡಿಯನ್ನು ಹಾಲಿನೊಂದಿಗೆ ಬೆರೆಸಿಕೊಂಡು ಕುಡಿಯಬೇಕು.

ಹಾಗಾದರೆ ಬನ್ನಿ ಹಾಲಿನೊಂದಿಗೆ ದಾಲ್ಚಿನ್ನಿ ಬೆರೆಸಿ ಕುಡಿಯುವುದರಿಂದಾಗುವ ಹಲವು ಉಪಯೋಗಗಳನ್ನು ತಿಳಿಯೋಣ.

ಸೂಚನೆ: ಇದನ್ನು ಸೇವಿಸುವ ಮೊದಲು ನಿಮ್ಮ ವೈದ್ಯರಿಂದ ಸಲಹೆ ಪಡೆದುಕೊಂಡರೆ ಒಳ್ಳೆಯದು.

  1. ಶೀತ ಮತ್ತು ಜ್ವರಕ್ಕೆ ಉತ್ತಮ ಮನೆಮದ್ದು:
  2. ಸುಂದರ ಕೂದಲು ಮತ್ತು ತ್ವಚೆಗೆ :
  3. ಜೀರ್ಣಕ್ರಿಯೆಗೆ ಉತ್ತಮ:
    ದಾಲ್ಚಿನ್ನಿ ಹಾಲು ಉತ್ತಮ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದರಲ್ಲಿನ ಕೆಲವೊಂದು ಅಂಶಗಳು ಕರುಳಿನ ಕಾರ್ಯವನ್ನು ಸುಲಭಗೊಳಿಸಿ ಅಜೀರ್ಣದಿಂದ ಆಗುವಂತಹ ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುತ್ತದೆ.
  4. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ :
    ದಾಲ್ಚಿನ್ನಿಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಂತಹ ಅಂಶಗಳಿವೆ. ಪ್ರತಿದಿನವೂ ಈ ಹಾಲನ್ನು ಸೇವನೆ ಮಾಡಿದರೆ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
  5. ಸುಖ ನಿದ್ರೆಗಾಗಿ:
    ದಾಲ್ಚಿನ್ನಿ ಮತ್ತು ಹಾಲಿನಲ್ಲಿನ ಕೆಲವೊಂದು ಅಂಶಗಳು ಒಳ್ಳೆಯ ನಿದ್ರೆ ನೀಡುವುದು. ಮಲಗುವ ಮೊದಲು ಒಂದು ಲೋಟ ದಾಲ್ಚಿನ್ನಿ ಹಾಲು ಕುಡಿಯಿರಿ ಮತ್ತು ಉತ್ತಮ ನಿದ್ರೆ ಪಡೆಯಿರಿ.
  6. ಸದೃಢ ಮೂಳೆಗಳಿಗೆ:
    ದಾಲ್ಚಿನ್ನಿ ಹಾಲಿನಲ್ಲಿ ಮೂಳೆಗಳನ್ನು ಬಲಪಡಿಸುವಂತಹ ಗುಣಗಳು ಇವೆ. ದಾಲ್ಚಿನ್ನಿ ಹಾಲನ್ನು ನಿಯಮಿತವಾಗಿ ಕುಡಿಯುತ್ತಾ ಇದ್ದರೆ ಅರ್ಥಟೀಸ್ ನಂತಹ ಮೂಳೆಗಳ ಸಮಸ್ಯೆಯನ್ನು ಹೋಗಲಾಡಿಸಬಹುದು.