ನಿಮ್ಮ ಮಕ್ಕಳಲ್ಲಿ ನಮ್ಮ ರಾಷ್ಟ್ರಪ್ರೇಮವನ್ನು ಬೆಳಸಬೇಕು ಅಂದ್ರೆ ಈ ಲೇಖನ ಓದಿ ಖಂಡಿತ ನಿಮಗೆ ಅರ್ಥವಾಗುತ್ತೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ…!

0
1002

ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಮತ್ತು ಈ ದಿನ ಅಂದ್ರೆ ಏನು ಅನ್ನೋದು ನಮ್ಮ ಮಕ್ಕಳಿಗೆ ತಿಳಿಸಬೇಕು ಇಲ್ಲ ಅಂದ್ರೆ ಮಕ್ಕಳಿಗೆ ಈ ದಿನ ಅಂದ್ರೆ ಬರಿ ರಜಾ ದಿನ ಅಂದುಕೊಳ್ಳುತ್ತವೆ. ಈ ದಿಂದ ವಿಚಾರವಾಗಿ ಒಂದು ಪುಟ್ಟ ೫ ವರ್ಷದ ಮಗು ಮತ್ತು ತಾಯಿಯ ನಡುವೆ ನಡೆಯುವ ಒಂದು ಸಂಭಾಷಣೆ ಅಥವಾ ಕಥೆ ಇಲ್ಲಿದೆ ನೋಡಿ.

ಮಗು: ಅಮ್ಮನಲ್ಲಿ ಕೇಳುತ್ತದೆ ಅಮ್ಮೋ ಸ್ವಾತಂತ್ರ್ಯ ದಿನಾಚರಣೆ ಎಂದರೇನು
ಅಮ್ಮ:ಅದು ನಿನಗೆ ಈಗ ಅರ್ಥವಾಗುವುದಿಲ್ಲ ಮಗು ದೊಡ್ಡ ಕ್ಲಾಸಿಗೆ ಹೋದ ಮೇಲೆ ಗೊತ್ತಾಗುತ್ತದೆ. ಇವತ್ತು ನಿಂಗೆ ಶಾಲೆಗೆ ರಜೆ, ಹೋವಂರ್ಕ್ ಇದ್ರೆ ಮಾಡಿ ಮುಗಿಸು. ಇಲ್ಲಾಂದ್ರೆ ಫ್ರೆಂಡ್ಸ್ ಜೊತೆ ಆಟವಾಡು ಹೋಗು’ ಎಂದು ಸಮಾಧಾನ ಮಾಡುತ್ತಾಳೆ.

ಆದರೆ, ಸ್ವಾತಂತ್ರ್ಯದ ಬಗ್ಗೆ ಮಗು ಕೇಳಿದ ಪ್ರಶ್ನೆ ಮಾತ್ರ ಅದರ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ.
ನಗರ ಪ್ರದೇಶಗಳಲ್ಲಿ ಕೆಲವು ಪೋಷಕರು ಸ್ವಾತಂತ್ರ್ಯ ದಿನಾಚರಣೆಯಂದು ತಮ್ಮ ಕಚೇರಿಗೆ ರಜೆ, ಮಗುವಿಗೂ ಶಾಲೆಗೆ ರಜೆ ಇದೆ ಎಂದು ಹೊರಗೆ ಸುತ್ತಾಡುವುದಕ್ಕೆ ಹೋಗಲು ನಾಲ್ಕು ದಿನ ಮೊದಲೇ ಯೋಜನೆ ಹಾಕಿಕೊಳ್ಳುತ್ತಾರೆ.

ವಾರಾಂತ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಬಂದರಂತೂ ಒಟ್ಟಿಗೇ ಎರಡು ಮೂರು ದಿನ ರಜೆ ಹಾಕಿ ಪ್ರವಾಸ ಹೊರಟುಬಿಡುತ್ತಾರೆ.
ಎಲ್ಲ ಶಾಲೆಗಳಲ್ಲೂ ಆ ದಿನ ಧ್ವಜಾರೋಹಣ ಕಾರ್ಯಕ್ರಮ ಇದ್ದರೂ ಹಲವು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಇಲ್ಲ. ಆ ದಿನ ರಜೆ ಎಂದೇ ಹಲವರ ಅಭಿಪ್ರಾಯ. ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ನಮ್ಮ ದೇಶದ ಸ್ವಾತಂತ್ರ್ಯದಿನಾಚರಣೆಯ
ಮಹತ್ವ, ಅದರ ಇತಿಹಾಸ, ಆಚರಣೆಯ ಅಗತ್ಯದ ಬಗ್ಗೆ ಗೊತ್ತಾಗುವುದೇ ಇಲ್ಲ.

ನೀವು ಏನು ಮಾಡಬೇಕು ಅನ್ನೋದು ಇಲ್ಲಿದೆ ನೋಡಿ:
ಇದೆಲ್ಲವನ್ನೂ ಮಕ್ಕಳಿಗೆ ತಿಳಿಸಿ ಅವರಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸುವುದು ಈ ದಿನಾಚರಣೆಯ ಹಿಂದಿನ ಉದ್ದೇಶ. ಹೀಗಾಗಿ
ಸ್ವಾತಂತ್ರ್ಯ ದಿನವನ್ನು ಆಚರಿಸುವುದರಲ್ಲಿ ಶಾಲೆಗಳು ಮತ್ತು ಶಿಕ್ಷಕರಿಗೆ ಎಷ್ಟು ಜವಾಬ್ದಾರಿ ಇರುತ್ತದೋ ಪೋಷಕರಿಗೂ ಅಷ್ಟೇ ಕಾಳಜಿ ಇರಬೇಕಾಗುತ್ತದೆ.

source:The Indian Express

ಸ್ವಾತಂತ್ರ್ಯ ದಿನಾಚರಣೆ ಎಂಬುದು ಪ್ರತಿ ದೇಶದ ರಾಷ್ಟ್ರೀಯ ಹಬ್ಬ, ಒಂದು ಐತಿಹಾಸಿಕ ದಿನ. ಇದರ ಹಿಂದೆ ದೀರ್ಘ ಇತಿಹಾಸ ಇರುತ್ತದೆ. ಆ ದೇಶದಲ್ಲಿ ಹುಟ್ಟಿದ ಎಲ್ಲ ಪ್ರಜೆಗೂ ಸ್ವಾತಂತ್ರ್ಯ ದಿನಾಚರಣೆ ಎಂದರೇನು, ಅದನ್ನು ಏಕೆ, ಯಾವಾಗ ಆಚರಿಸುತ್ತಾರೆ, ಅದರ ಹಿಂದಿನ ಕಥೆಯೇನು ಎಂಬುದು ತಿಳಿದಿರಬೇಕಾಗುತ್ತದೆ. ನಾಲ್ಕೈದು ವರ್ಷದ ಮಗು ಸ್ವಾತಂತ್ರ್ಯದಿನಾಚರಣೆ ಬಂದಾಗ `ಹಾಗೆಂದರೇನು ಎಂದು ಕೇಳಿಯೇ ಕೇಳುತ್ತದೆ.

ಆಗ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಘಟನೆಯನ್ನು ವಿವರಿಸಲು ಹೊರಟರೆ ಪುಟ್ಟ ಮಕ್ಕಳಿಗೆ ಅರ್ಥವಾಗುವುದಿಲ್ಲ. ಅವರ
ವಯೋಮಾನಕ್ಕೆ ತಕ್ಕಂತೆ ಅರ್ಥವಾಗುವ ರೀತಿಯಲ್ಲಿ ಅವರ ಭಾಷೆಯಲ್ಲೇ ಸುತ್ತಮುತ್ತಲಿನ ವಿದ್ಯಮಾನಗಳನ್ನು ಇಟ್ಟುಕೊಂಡು
ಸರಳವಾಗಿ ಅರ್ಥ ಮಾಡಿಸಬೇಕಾದದ್ದು ಹೆತ್ತವರ, ಪೋಷಕರ ಕರ್ತವ್ಯ.

ರಜೆಯದಿನ ನಿನಗೆ ಇಷ್ಟ ಬಂದಂತೆ ಇರಲು ಅವಕಾಶ ಕೊಡುತ್ತಾರಲ್ಲವೇ? ಅದು ಸ್ವಾತಂತ್ರ್ಯ. ನಮಗೆ ಹೊರಗೆ ಓಡಾಡಲು ಯಾರ ಭಯವೂ, ಯಾರ ಹಂಗೂ ಇಲ್ಲದಿರುವುದೇ ಸ್ವಾತಂತ್ರ್ಯ’ ಎಂದು ಹೇಳಿದರೆ ಮಗುವಿಗೆ ಅರ್ಥವಾಗುತ್ತದೆ. ಈ ಮೂಲಕ ಮಕ್ಕಳಿಗೆ ನಮ್ಮ ದೇಶದ ಸ್ವಾತಂತ್ರ್ಯ ಎಂದರೇನು, ಅದು ಹೇಗೆ ಸಿಕ್ಕಿತು ಎಂದು ವಿವರಿಸಿದರೆ ಅರ್ಥವಾಗಬಹುದು.

ಸ್ವಾತಂತ್ರ್ಯದ ಮಹತ್ವ ಸಾರುವ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಕ್ರಿಯಾತ್ಮಕ ಚಿತ್ರಗಳನ್ನು ಬಿಡಿಸಿ ಅದನ್ನು ಶಾಲೆಗೆ ತೆಗೆದುಕೊಂಡು ಹೋಗಲು ಮಕ್ಕಳಿಗೆ ಪೋಷಕರು ಪ್ರೇರಣೆ ನೀಡಬೇಕು. ಆಗ ಶಾಲೆಯಲ್ಲಿ ಶಿಕ್ಷಕರು ಸಹ ಅಂತಹ
ಮಕ್ಕಳನ್ನು ಗುರುತಿಸಿ ಅವರ ಪ್ರತಿಭೆ ಬೆಳೆಯಲು ಅವಕಾಶ ನೀಡುತ್ತಾರೆ.

ಈ ರೀತಿಯಾಗಿ ನಿಮ್ಮ ಮಕ್ಕಳಿಗೆ ಸ್ವಾತಂತ್ರ್ಯದ ಮಹತ್ವ ಮತ್ತು ಹಿನ್ನೆಲೆಯನ್ನು ನಿದಾನವಾಗಿ ಮತ್ತು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬಿಡಿಸಿ ಹೇಳಿ. ನಿಮ್ಮ ಮಕ್ಕಳನ್ನು ರಾಷ್ಟ್ರಪ್ರೇಮಿಗಳನ್ನಾಗಿ ಮಾಡಿ.

ಮೂಲ:ಸುಮನಾ ಉಪಾಧ್ಯಾಯ