Demonitization-ನಿಂದ ನಿಜಕ್ಕೂ ಎಷ್ಟು ಅನುಕೂಲವಾಯಿತು? ನಿಮ್ಮ ಅನಿಸಿಕೆ ಏನು??

0
680
ನವೆಂಬರ್ 8 , ದೊಡ್ಡ ಮುಖ ಬೆಲೆಯ ನೋಟು Demonitization ಮಾಡಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ.ಈ ದಿನ  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಪ್ಪು ಹಣದ ವಿರುದ್ಧ ದಿಟ್ಟ ನಡೆ ತೋರಿದ ದಿನ. ಇದರಿಂದ ಆದ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ತಿಳಿಯೋಣ.
500 ಹಾಗು 1000 ರೂ ನೋಟುಗಳ್ಳನ್ನು Demonitization ಮೂಲಕ ಕಪ್ಪು ಹಣ ಹೊಂದಿದವರ ನಿದ್ದೆಗೆಡಿಸಿದ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಭಾರತದ ನೆಲದಲ್ಲಿ ಅಕ್ರಮವಾಗಿ ಹಣ ಶೇಖರಣೆ ಸಾಧ್ಯವಿಲ್ಲ ಎಂಬುವ ಸಂದೇಶವನ್ನು ರವಾನಿಸಿದ್ದರು.
ಆದರೆ ಈ ನಿರ್ಧಾರ ತೆಗೆದುಕೊಂಡ ಮರುದಿನವೇ ಶೇರು ಮೌಲ್ಯ ತುಂಬ ಕುಸಿತ ಕಂಡವು,ಇದರಿಂದ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟುಬಿದ್ದಿತು. ದೇಶದಲ್ಲಿ ಹಣದ ಕೊರತೆ ಕಾಣತೊಡಗಿದ್ದರಿಂದ ಜನರಲ್ಲಿದ್ದ ಸಣ್ಣ ಮುಖ ಬೆಲೆಯ ನೋಟುಗಳು ಮುಗಿಯುತ್ತಿದ್ದಂತೆ ಜನ ಆತಂಕಗೊಂಡರು. ಸಣ್ಣ ಹಾಗು ದೊಡ್ಡ ವ್ಯವಹಾರಗಳು ಕೆಲ ದಿನಗಳವರೆಗೆ ಸ್ಥಗಿತಗೊಂಡವು.
ಜನ ತಮ್ಮ ಹಳನೋಟುಗಳ್ಳನ್ನು ಬದಲಿಸಲು ಬ್ಯಾಂಕಿನ ಎದುರಿಗೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಬಂದಿತು. ಈ ವಿಷಯದ ಬಗ್ಗೆ ಸಧನದಲ್ಲಿ ದೊಡ್ಡ ಕೋಲಾಹಲ ಉಂಟುಮಾಡಿದ್ದಲದೆ ಟೀವಿ, ದಿನ ಪತ್ರಿಕೆ, ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ದೊಡ್ಡ ಸಂಚಲನ ಸೃಷ್ಟಿಮಾಡಿತ್ತು. ಅದರೂ ದೇಶದ ಜನ ಮೋದಿಯವರ ಈ ನಡೆಯನ್ನು ಸ್ವಾಗತಿಸಿ ತಮಗೆ ಸ್ವಲ್ಪ ದಿನ ಕಷ್ಟವಾದರೂ ಪರ್ವಾಗಿಲ್ಲ ದೇಶಕ್ಕೆ ಒಳಿತಾದರೆ ಸಾಕು ಅನ್ನೋ ಮನೋಭಾವನೆ ಸಾಮಾನ್ಯ ಜನರಲ್ಲಿ ಕಾಣಿಸಿದ್ದು, ಜನರಿಗೆ ಭ್ರಷ್ಟಾಚಾರ ಹಾಗು ಕಪ್ಪು ಹಣದ ಮೇಲಿನ ತೀವ್ರ ಬೇಸರಕ್ಕೆ ಹಿಡಿದ ಕನ್ನಡಿಯಂತಿತ್ತು.
ಹಳೇ ನೋಟು ಬದಲಾವಣೆಗಾಗಿ ನಿಂತ ಜನರಿಗಾಗಿ ಜಾತಿ ಮತ ಎನ್ನದೇ ನೀರು ಮತ್ತು ಇತರೆ ವಸ್ತುಗಳ್ಳನ್ನು ನೀಡುವ ಮೂಲಕ ಮಾನವೀಯತೆ ಮೆರೆದರು. ಜನರ ಈ ನಡೆಯನ್ನು ಪ್ರಧಾನಿ ಸೇರಿ ಹಲವಾರು ರಾಜಕೀಯ ನಾಯಕರು ಮೆಚ್ಚಿಕೊಂಡಿದ್ದರು.
ಆಗಸ್ಟ್ 2017 ರ ಅಂತ್ಯದ ವೇಳೆಗೆ ಸುಮಾರು 14000 ಸಾವಿರ ಕೋಟಿ ರೂಪಾಯಿಗಳಷ್ಟು ನೋಟುಗಳ್ಳನ್ನು ಬ್ಯಾಂಕ್ನಲ್ಲಿ ಜಮಾ ಇರಿಸಲಾಗಿದೆ. ಭಾರತದ ಜನ ದೇಶದ ಒಟ್ಟು ಹಣದಲ್ಲಿನ ಶೇಕಡಾ 33ರಷು ಹಣ ತಮ್ಮ ಬ್ಯಾಂಕ್-ಗಳ್ಳಲ್ಲಿ ಜಮಾ ಮಾಡಿದರು.
 ಕಾಶ್ಮೀರದಲ್ಲಿ ಶೇ 75ರಷ್ಟು ಕಲ್ಲು ತೂರಾಟ ಮತ್ತು ಗಲಭೆ ಸಮಸ್ಯೆಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು ವಿಶೇಷ. ಇದರ ಜೊತೆ Demoetization ಇಂದ ಭಯೋತ್ಪಾದಕರಿಗೆ ಹಾಗು ನಕ್ಸಲರಿಗೆ ತೀವ್ರ ಹೊಡೆತ ಬಿದ್ದಿದ್ದು, ಕಳೆದ ಒಂದು ವರ್ಷದಲ್ಲಿ ಅವರ ಅಟ್ಟಹಾಸ ಕಡಿಮೆಯಾಗಿದೆ.
1.1ಕೋಟಿಯಷ್ಟು ಹೊಸತಾಗಿ epfo ಗೆ ಸೇರ್ಪಡೆಯಾದರು, 6ಲಕ್ಷ ಕೋಟಿಗಳಷ್ಟು ದೊಡ್ಡ ಮುಖ ಬೆಲೆಯ ನೋಟುಗಳ್ಳನ್ನು ಕಡಿಮೆ ಮಾಡಲಾಗಿದೆ. ಶೇ 80ರಷ್ಟು’ ಡಿಜಿಟಲ್ ಪೇಮೆಂಟ್ ಪ್ರಗತಿ ಕಂಡಿದೆ. ಗ್ರಾಮೀಣ ಜನರು ಕೂಡ BHIM APP,UPI,USSD,PAYTM ಮತ್ತು ಇತರೆ ನಗದು ರಹಿತ ವ್ಯವಹಾರಗಳ್ಳನ್ನು ಬಹಳ ಸರಳವಾಗಿ ಮಾಡುತ್ತಿದ್ದಾರೆ.
ಇದರಿಂದ ಕೇಂದ್ರದ Digital India ಯೋಜನೆಗೆ ತುಂಬ ಉತ್ತೇಜನ ಸಿಕ್ಕಿದೆ. ಇಂತಹ ಒಂದು ಮಹತ್ತರ ದಿಟ್ಟ ನಿಲುವಿನಲ್ಲಿ ಅನೇಕ ಸಾಧಕ ಬಾಧಕಗಳು ಇದ್ದೆ ಇರುತ್ತವೆ. ಒಂದಷ್ಟು ದಿನ ಜನರಿಗೆ ಸಂಕಷ್ಟವಿದ್ದರೂ ಒಂದು ವರ್ಷದ ನಂತರ ಪರಿಸ್ಥಿತಿ ಮೊದಲಿನ ಸ್ಥಿತಿಗೇ ಮರಳುತ್ತಿದೆ. ಸಧ್ಯಕ್ಕೆ ಅಷ್ಟೇನೂ ಕಪ್ಪು ಹಣ ಸರ್ಕಾರಕ್ಕೆ ಸಿಗದಿದ್ದರೂ, ಬರುವ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆ ಕಪ್ಪು ಹಣ ಇದ್ದವರ ಮೇಲೆ ಗದಾ ಪ್ರಹಾರ ಮಾಡುವುದಂತೂ ಖಚಿತ.
ನಿಮ್ಮ ಅನಿಸಿಕೆ ಏನು??