ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೈನ್ಯೆ; ಪ್ರತಿದಾಳಿಯಲ್ಲಿ 12 ಪಾಕ್ ಸೈನಿಕರ ಹತ್ಯೆಗೈದ ಭಾರತೀಯ ಸೈನಿಕರು..

0
203

ಪುಲ್ವಾಮ ದಾಳಿಯ ನಂತರ ಪಾಕ್ ಕದನ ವಿರಾಮ ಉಲ್ಲಂಘನೆ ಮಾಡುತಲೇ ಇದೆ ಇದಕ್ಕೆ ಪ್ರತಿದಾಳಿ ಮಾಡುತ್ತಾ ಭಾರತದ ಯೋಧರು ಪಾಪಿಗಳನ್ನು ಹೆದರಿಸುತ್ತಲೇ ಇದ್ದಾರೆ ಇಷ್ಟಾದರೂ ತಮ್ಮ ನಾಯಿ ಬುದ್ದಿ ಬಿಡದ ಪಾಕಿಸ್ತಾನಿಗಳು ಮತ್ತೆ ಮತ್ತೆ ಭಾರತದ ತಂಟೆಗೆ ಬರುತ್ತಿರುವುದು. ಅವರ ಅಂತ್ಯದ ದಿನಗಳು ಹತ್ತಿರವಾಗುತ್ತಿರುವುದಕ್ಕೆ ಎನ್ನುವುದು ಭಾತರ ತಿಳಿಸಿದೆ. ನಿನ್ನೆಯೂ ಮತ್ತೆ ಅದೇ ಸಂಚು ರೂಪಿಸಿದ ಪಾಕ್ ಯೋಧರು ಭಾರತದ ಗಡಿಗೆ ನುಗ್ಗಲು ಪ್ರಯತ್ನಿಸಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಪಾಕ್ ಸೈನಿಕರೇ ಸತ್ತುಹೋಗಿದ್ದಾರೆ.

Also read: ಮತ್ತೆ ಭಾರತದ ತಂಟೆಗೆ ಹೋದ್ರೆ ಪರಿಣಾಮ ನೆಟ್ಟಗಿರಲ್ಲ; ಪಾಕಿಸ್ತಾನಕ್ಕೆ ಅಮೆರಿಕದಿಂದ ಮತ್ತೊಂದು ಎಚ್ಚರಿಕೆ..

ಹೌದು ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ತಾನದ ಸೈನಿಕರ ಮೇಲೆ ಭಾರತೀಯ ಯೋಧರು ಗುಂಡಿನ ಮಳೆಗೈದಿದ್ದು ಪರಿಣಾಮ 12 ಮಂದಿ ಪಾಕ್ ಸೈನಿಕರು ಮೃತಪಟ್ಟಿದ್ದಾರೆ. ಇದು ಜಮ್ಮು-ಕಾಶ್ಮೀರದ ಜಮ್ಮು ಮತ್ತು ಕಾಶ್ಮೀರದ ಸುಂದರ್ ಬನಿ ವಲಯದಲ್ಲಿ ಗುರುವಾರ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ ಪಾಕ್ ನ ಇಬ್ಬರು ಸೇನಾ ಅಧಿಕಾರಿಗಳು ಸೇರಿದಂತೆ 12 ಸೈನಿಕರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜೊತೆಗೆ ಈ ದಾಳಿಯಲ್ಲಿ 22 ಜನ ಪಾಕ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

Also read: ನರೇಂದ್ರ ಮೋದಿಯವರ ಪ್ರಶಸ್ತಿಯ ಮೇಲೆ ಪಾಕ್ ಕರಿನೆರಳು; ವಿಶ್ವಸಂಸ್ಥೆಯಿಂದ ‘ಚಾಂಪಿಯಲ್‌ ಆಫ್‌ ಅರ್ಥ್’| ಪ್ರಶಸ್ತಿ ಹಿಂಪಡೆಯಲು ಪಾಕ್ ಕೋರಿಕೆ..

ಬೆಳಗ್ಗೆ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ ಪಾಕ್. ಮಧ್ಯಾಹ್ನ 2:45ರ ವರೆಗೂ ಗುಂಡಿನ ದಾಳಿ ನಡೆಸಿತ್ತು. ಇದನ್ನು ಭಾರತೀಯ ಸೇನೆಯು ಸಮರ್ಥವಾಗಿ ಎದುರಿಸಿತ್ತು. ಆದರೆ ಈ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿ, ಮೂವರು ನಾಗರಿಕರು ಗಾಯಗೊಂಡಿದ್ದರು. ಈ ಕದನದಲ್ಲಿ ಮೃತಪಟ್ಟ ಪಾಕ್ ಯೋಧರನ್ನು ಯಾರಿಗೂ ತಿಳಿಯದಂತೆ ಪಾಕಿಸ್ತಾನದ ಮಿ-17 ಹೆಲಿಕಾಪ್ಟರ್ ಮೂಲಕ ಪಾಕ್ ಸೇನೆ ಮೃತ ಸೈನಿಕರ ಮೃತದೇಹವನ್ನು ಸುಂದರಬನಿ ವಲಯದಿಂದ ರಾವಲ್ಪಿಂಡಿಗೆ ಸಾಗಿಸಿದೆ.
ಕಾಶ್ಮೀರ ಕಣಿವೆಯಲ್ಲಿ ಉಗ್ರರ ಬೇಟೆ.

Also read: ಭಾರತ ನಡೆಸಿದ ಬಾಲಕೋಟ್ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರ ಹತ್ಯೆ ಒಪ್ಪಿಕೊಂಡ ಪಾಕ್ ಸೇನಾಧಿಕಾರಿ; ದಾಳಿಯ ಸಾಕ್ಷ್ಯವನ್ನು ಬಿಡುಗಡೆ ಮಾಡಿದ ಉಪಗ್ರಹ..

ಕಣಿವೆಯಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಇದರನ್ನು ಹೊಸೆದು ಹಾಕಲು ಕಾರ್ಯಾಚರಣೆಯನ್ನು ಮುಂದುವರೆಸಿರುವ ಭದ್ರತಾ ಪಡೆಗಳು ಬಂಡಿಪೋರಾ, ಶೋಪಿಯಾನ್‌ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ಎನ್‌ಕೌಂಟರ್‌ಗಳನ್ನು ನಡೆಸಿ ಐವರು ಉಗ್ರರನ್ನು ಕೊಂದುಹಾಕಿವೆ. ಹತ ಉಗ್ರರಲ್ಲಿ ಇಬ್ಬರು ಪಾಕಿಸ್ತಾನ ಪ್ರಜೆಗಳು. ಗುರುವಾರ ತಡರಾತ್ರಿಯ ಕಾರ್ಯಾಚರಣೆ ವೇಳೆ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದ 12 ಬಾಲಕನನ್ನು ಗುಂಡಿಟ್ಟು ಹತ್ಯೆ ಮಾಡಿ ಕ್ರೌರ್ಯ ಮೆರೆದಿದ್ದಾರೆ.
ಗುಪ್ತಚರ ದಳದ ಮಾಹಿತಿ ಅರಸಿ ಭದ್ರತಾ ಪಡೆಗಳು ಗುರುವಾರ ರಾತ್ರಿಯಿಂದಲೇ ಬಂಡಿಪೋರಾ ಜಿಲ್ಲೆಯ ಹಾಜಿನ್‌ ಪ್ರದೇಶದಲ್ಲಿ ಕಾರ್ಯಾಚರಣೆಗೆ ಇಳಿದಿದ್ದವು. ಒಂದು ಹಂತದಲ್ಲಿ ಉಗ್ರರು ಇಬ್ಬರು ನಾಗರಿಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರಿಂದ ಕಾರ್ಯಾಚರಣೆ ತ್ವರಿತಗೊಳಿಸಲು ಸಾಧ್ಯವಾಗಲಿಲ್ಲ. ಸೇನೆ ಒಬ್ಬ ಪ್ರಜೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು. ಆದರೆ 12 ವರ್ಷದ ಬಾಲಕನನ್ನು ಉಗ್ರರು ಕೊಂದು ಹಾಕಿದರು. ಮೃತ ಬಾಲಕನನ್ನು ಅತೀಫ್‌ ಅಹ್ಮದ್‌ ಎಂದು ಗುರುತಿಸಲಾಗಿದೆ.ಶುಕ್ರವಾರ ನಸುಕಿನವರೆಗೂ ನಡೆದ ಈ ಕಾಳಗದಲ್ಲಿ ಕೊನೆಗೂ ಯೋಧರು ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾದರು.