ಇನ್ಮೇಲೆ ಇಂದಿರಾ ಕ್ಯಾಂಟೀನ್-ನಲ್ಲಿ ಊಟದ ಜೊತೆ ಕನ್ನಡದ ಪಾಠಾನೂ ಸಿಗುತ್ತೆ!! ಏನಪ್ಪಾ ಅಂತೀರಾ ಮುಂದೆ ಓದಿ..

0
544

 

ಇಂದಿರಾ ಕ್ಯಾಂಟಿನ್​ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸ. ಈ ಯೋಜನೆಯಿಂದ ಹಸಿದವರಿಗೆ ಅನ್ನ ಹಾಕುವ ಕನಸು ಸರ್ಕಾರದ್ದು. ಆದ್ರೆ ಈ ಯೋಜನೆಗೆ ಪರ, ವಿರೋಧಗಳು ಕೇಳಿ ಬಂದಿವೆ. ಆದ್ರೆ ಈಗ ಈ ಕ್ಯಾಂಟಿನ್​ ಬಳಸಿಕೊಂಡು ಸರ್ಕಾರ, ಕನ್ನಡದ ಕಂಪನ್ನು ಹರಡಲು ಪ್ಲಾನ್​ ಮಾಡಿಕೊಂಡಿದೆ.

ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠಗಳು ಬಂದಿವೆ. ಅಲ್ಲದೆ ತನ್ನದೆ ಆದ ಇತಿಹಾವನ್ನು ಹೊಂದಿರುವ ಭಾಷೆ ಕನ್ನಡ. ಈ ಭಾಷೆಯ ಉಳಿವಿಗಾಗಿ ಅದೆಷ್ಟೋ ಮಹನಿಯರು ದುಡಿದಿದ್ದಾರೆ. ಈಗ ಈ ಭಾಷೆಗೆ ಪ್ರಚಾರ ಬೇಕಿದೆ. ಇದನ್ನು ಅರಿತು ಕೊಂಡ ಸರ್ಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಂದಹಾಗೆ ಬೃಹತ್​ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಬರುವ 100 ಇಂದಿರಾ ಕ್ಯಾಟಿನ್​​ಗಳಲ್ಲಿ ಕನ್ನಡ ಭಾಷೆ ನಡೆದು ಬಂದ ದಾರಿ ಹಾಗೂ ಘನತೆಯ ಬಗ್ಗೆ ಅರಿವು ಮೂಡಿಸುವ ಪ್ಲಾನ್​ ಸರ್ಕಾರದ್ದಾಗಿದೆ. ಪ್ರತಿ ಕ್ಯಾಂಟೀನ್ನಲ್ಲೂ ದಿನಕ್ಕೆ 1,500 ಮಂದಿಗೆ ಊಟ-ಉಪಾಹಾರ ಒದಗಿಸುವುದಾಗಿ ಬಿಬಿಎಂಪಿ ಹೇಳಿದೆ. ಇದರ ಪ್ರಕಾರ ಪ್ರತಿ ನಿತ್ಯ 2.97 ಲಕ್ಷ ಸಾರ್ವಜನಿಕರು ಕ್ಯಾಂಟೀನ್​ಗೆ ಭೇಟಿ ನೀಡ್ತಾರೆ. ಅವರು ಈ ಬರಹ ಹಾಗೂ ಪೋಸ್ಟರ್​​ಗಳಿಂದ ಬದಲಾದ್ರೆ ಸಾಕು ಎನ್ನುವ ಮನೋಭಾವನೆ ಸರ್ಕಾರದ್ದು.

ಕನ್ನಡ ಭಾಷೆಗೆ ತನ್ನದೇ ಆದ ಸ್ಥಾನ ಮಾನ ಇದೆ. ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಇದ್ದಾಗಿದ್ದು, ಸಿಲಿಕಾನ್​ ಸಿಟಿಯಲ್ಲಿ ಎಲ್ಲ ಭಾಷೆಗಳ ಜನರೂ ನೆಲಿಸಿದ್ದಾರೆ. ಈ ನಗರಕ್ಕೆ ಐಟಿ ಬಿಟಿ ಕಾಲಿಟ್ಟ ಮೇಲಂತೂ ಎಲ್ಲ ರಾಜ್ಯಗಳಿಂದಲೂ ಜನ ಇಲ್ಲಿ ಕೆಲಸಕ್ಕಾಗಿ ಬರುತ್ತಿದ್ದಾರೆ. ಇದರ ಮಧ್ಯ ಕನ್ನಡ ಮಾತನಾಡುವ ಜನ ತುಂಬ ಕಡಿಮೆ ಆದಂತೆ ಕಾಣುವಂತೆ ಮಾಡಿದೆ. ಇದರಿಂದ ಕನ್ನಡ ಮಾತನಾಡುವ ಸಂಖ್ಯೆ ಕಡಿಮೆ ಆಗುತ್ತಿದೆ ಇದನೆಲ್ಲಾ ಅರಿತು ಕೊಂಡ ಸರ್ಕಾರ ಈ ನಿಲುವನ್ನು ತೆಗೆದುಕೊಂಡಿದೆ.