ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್- ಗೆಲಿವರ್ ಕ್ಯಾನ್ಸರ್; ರಕ್ತಕಾರಿ ಸತ್ತ ಪಾಪಿ ಉಗ್ರ ಎನ್ನುವ ಸುದ್ದಿ ISI ಹರಡಿಸಿದ ಸುಳ್ಳು ಸುದ್ದಿ??

0
267

ಭಾರತವನ್ನೇ ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿರುವ ಪಾಕ್ ಮೂಲದ ಪಾಪಿ ಉಗ್ರ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಭಾನುವಾರ ಹಬ್ಬಿತ್ತು. ಈ ಸುದ್ದಿ ಹರಡುತ್ತಿದಂತೆ ದೇಶದಲ್ಲಿ ಸಂತಸ ಮೂಡಿತ್ತು, ಪಾಪಿ ಕೊನೆಗೂ ಸತ್ತು ಹೋದ ಎನ್ನುವ ಮಾತುಗಳು ತನ್ನವರನ್ನು ಕಳೆದುಕೊಂಡ ಜನರು ಹೇಳಿಕೊಂಡು ಸಿಹಿಹಂಚಿದರು ಆದರೆ ಈ ಪಾಪಿ ಇನ್ನೂ ಬದುಕಿರುದಾಗಿ ಪಾಕ್ ಮೂಲದ ಮಾದ್ಯಮಯೊಂದು ತಿಳಿಸಿದೆ. ಇದಕ್ಕೆ ಸರಿಯಾದ ಸಾಕ್ಷಿಗಳು ಇಲ್ಲದೆ ಇರುವ ಕಾರಣ ಅಜರ್ ಬದುಕಿದ್ದಾನೆ ಎನ್ನುಲು ಇನ್ನೂ ಬಹುತೇಕ ಅನುಮಾನವಾಗಿದೆ. ಆದರೆ ಕೆಲವೊಂದು ಮೂಲಗಳ ಪ್ರಕಾರ ಅಜರ್ ಜೀವಂತವಾಗಿದ್ದಾರೆ. ಭಾರತದಿಂದ ಮಸೂದ್ ಅಜರ್ ಮೇಲೆ ಇರುವ ಒತ್ತಡವನ್ನು ಕಡಿಮೆ ಗೊಳಿಸಲು ISI ಸಂಚು ಮಾಡಿ ಅಜರ್ ಸತ್ತ ಎಂದು ಹರಡಿಸಿದ ಸುಳ್ಳು ಸುದ್ದಿ ಇರಬಹುದು ಎನ್ನುವುದು ತಿಳಿಸಿದೆ.

Also read: ಬೆಂಗಳೂರಿನ ನಿವಾಸಿಗಳಿಗೆ ಸಿಹಿ ಸುದ್ದಿ; ಬಡವರಿಗೆ ಸೂರು ಕಲ್ಪಿಸಲು ಯೋಜನೆಯಲ್ಲಿ 1600 ಎಕರೆ ಭೂಮಿ; 1 ಲಕ್ಷ ಗುಂಪು ಮನೆಗಳ ನಿರ್ಮಾಣ..

ಹೌದು ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್, ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕನಾಗಿದ್ದ ಮಸೂದ್ ಅಜರ್ ಸಾವಿನ ವಿಚಾರ ಖಚಿತವಾಗಬೇಕಿದೆ. ಫೆಬ್ರವರಿ 26ರಂದು ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಮಸೂದ್ ಅಜರ್ ನನ್ನು ಪಾಕಿಸ್ತಾನ ರಹಸ್ಯವಾಗಿ ಆತನನ್ನು ಸೇನಾಸ್ಪತ್ರೆಗೆ ದಾಖಲಿಸಿತ್ತು. ಆದ್ರೆ ಸ್ಥಳೀಯರಿಗೆ ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆಂದು ರಹಸ್ಯವನ್ನು ಪಾಕ್ ಸರ್ಕಾರ ಮರೆಮಾಡಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ಪಾಪಿ ಉಗ್ರ ಮೊಹಮ್ಮದ್-ಗೆ ಕ್ಯಾನ್ಸರ್?

ಮಸೂದ್​ ಅಜರ್​ ಇಸ್ಲಾಮಾಬಾದ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ವರದಿಗಳು ಹೇಳುವ ಪ್ರಕಾರ ಈತ ಶನಿವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆದಾಗ್ಯೂ ಪಾಕಿಸ್ತಾನ ಅಥವಾ ಜೈಶ್​-ಇ-ಉಗ್ರ ಸಂಘಟನೆ ಈತನ ಸಾವನ್ನು ದೃಢಪಡಿಸಿಲ್ಲ. ಆದರೆ ಭಾರತದ ಏರ್ ಸ್ಟ್ರೈಕ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಒಂದು ಸುದ್ದಿಯಾಗಿದ್ದರೆ ಇನ್ನೊಂದು ರಾವಲ್ಪಿಂಡಿ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50 ವರ್ಷದ ಅಜರ್ ಮಸೂದ್ ಅಜರ್ ಲಿವರ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾನೆ ಎನ್ನುವ ಸುದ್ದಿ ಹರಿದಾಡಿತ್ತು. ಸದ್ಯ ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪಾಕ್ ವಿದೇಶಾಂಗ ಸಚಿವರೇ ಹೇಳಿದ್ದರು. ಅಜರ್ ಸಾವನ್ನಪ್ಪಿದ್ದಾನೆ ಅಥವಾ ಜೀವಂತವಾಗಿದ್ದಾನೆ ಎನ್ನುವ ಬಗ್ಗೆ ಪಾಕಿಸ್ತಾನ ಸರ್ಕಾರ ಯಾವುದೇ ಅಧಿಕೃತ ಮಾಹಿತಿಯನ್ನು ತಿಳಿಸಿಲ್ಲ.

ಯಾರು ಈ ಮಸೂದ್​ ಅಜರ್​?

ಮಸೂದ್​ ಅಜರ್​ 1968ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಬಹವಲ್​ಪುರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನ ಮಗನಾಗಿ ಜನಿಸಿದ್ದ. ಅಜರ್​ ಜಮ್ಮು ಮತ್ತು ಕಾಶ್ಮೀರವನ್ನು ಪೋರ್ಚುಗೀಸ್​ ಪಾಸ್​ಪೋರ್ಟ್​ ಮೇಲೆ ಪ್ರವೇಶಿಸಿದ್ದ ಮತ್ತು ಇಲ್ಲಿ ಉಗ್ರ ಸಂಘಟನೆಯನ್ನು ಸ್ಥಾಪಿಸಿದ್ದ. ಭಯೋತ್ಪಾದನಾ ಕೃತ್ಯ ನಡೆಸಿದ ಪ್ರಕರಣದಲ್ಲಿ ಈತನನ್ನು ಭಾರತ 1994ರಲ್ಲಿ ಬಂಧಿಸಿತ್ತು. ಜೈಲಿನಲ್ಲಿದ್ದಾಗ ಈತ ಮತ್ತು ಇತರ ಉಗ್ರರು ಸುರಂಗದ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಸುರಂಗದೊಳಗೆ ಮೊದಲು ಮಸೂದ್​ ಅಜರ್​ ಮುಂದೆ ಹೋಗುತ್ತಿದ್ದ. ಆದರೆ, ಅವನ ಬೃಹತ್ ಮೈಕಟ್ಟಿನ ಕಾರಣದಿಂದ ಕಿರಿದಾದ ಸುರಂಗದಲ್ಲಿ ಸಿಲುಕಿಕೊಂಡ. ಆಗ ಆತನನ್ನು ಮತ್ತೆ ಬಂಧಿಸಿ ಕರೆತರಲಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.

Also read: ತಾಯ್ನಾಡಿಗೆ ಮರಳಿದ ಅಭಿನಂದನ್ ಜೊತೆಗೆ ಇದ್ದ ಮಹಿಳೆ ಯಾರು? ಅಭಿನಂದನ್ ಗೆ ಮೋದಿ ಏನ್ ಅಂದ್ರು ಗೊತ್ತಾ?

ಪಾಪಿ ಜೈಲಿನಿಂದ ಹೊರಬಂದಿದು ಹೇಗೆ?

ಉಗ್ರ ಸಂಘಟನೆಯ ಮೇನ್ ಪಾತಕಿ ಮೊಹಮ್ಮದ್ ಐದು ವರ್ಷಗಳ ಕಾಲವೂ ಆತ ಜೈಲಿನಲ್ಲೇ ಇದ್ದ. ಆದರೆ, 1999ರಲ್ಲಿ ಮಸೂದ್ ಅಜರ್​ನ ಸಹೋದರ ಇಬ್ರಾಯಿಂ ಅಥಾರ್​ ಅಂದು ತಾಲಿಬಾನ್​ ಆಡಳಿತವಿದ್ದ ಕಂದಾಹಾರ್​ನಲ್ಲಿ ಭಾರತದ ವಿಮಾನವನ್ನು ಅಪಹರಣ ಮಾಡಿದ್ದ. ನಂತರ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು, ಮಸೂದ್​ ಅಜರ್​ ಸೇರಿ ಇತರ ಉಗ್ರರನ್ನು ಬಿಡುಗಡೆ ಮಾಡುವಂತೆ ಷರತ್ತು ವಿಧಿಸಿ, ತನ್ನ ಅಣ್ಣನನ್ನು ಭಾರತದ ಜೈಲಿನಿಂದ ಬಿಡಿಸಿಕೊಂಡಿದ್ದ. ಇದೊಂದು ಭಾರತದ ಕರಾಳ ಘಟನೆ ಎಂದು ಹೇಳಬಹುದು.