ಹಕ್ಕಿಗಳು ಮನೆ ಮೇಲೆ ತ್ಯಾಜ್ಯ ಮಾಡ್ತವೆ, ಆದರೆ ವಿಮಾನಗಳು ನಿಮ್ಮ ಮನೆಮೇಲೆ ತ್ಯಾಜ್ಯವನ್ನು ಎಸೆಯುತ್ತಿದ್ದೆಯ?

0
503

ವಿಮಾನದಲ್ಲಿರುವ ಮಾನವನ ತ್ಯಾಜ್ಯ ಮನೆಯ ಮೇಲೆ ಬೀಳುವುದನ್ನು ನೋಡಿದ್ದೀರ, ನೋಡೋದು ದೂರದ ವಿಷಯ ಬಹುಶಃ ಎಲ್ಲಿಯೂ ಕೇಳಿರಲಿಕ್ಕಿಲ್ಲ ಅಲ್ಲವೇ, ಆದರೆ ಈ ವ್ಯಕ್ತಿ ಹೇಳುವ ಪ್ರಕಾರ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳ ತ್ಯಾಜ್ಯ ಇವರ ಮನೆ ಮೇಲೆ ಬೀಳುತ್ತಿದೆಯೆಂತೆ. ನಂಬಲು ಕಷ್ಟ ಎನಿಸಿದರೂ ಇದು ನಿಜ.

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳು ದಾರಿಯಲ್ಲಿಯೇ ಶೌಚಾಲಯ ಖಾಲಿ ಮಾಡುತ್ತಿದ್ದು, ಅದರ ತ್ಯಾಜ್ಯ ತಮ್ಮ ಮನೆಯ ಮೇಲೆ ಬೀಳುತ್ತಿದೆ ಎಂದು ಆರೋಪಿಸಿ ನಿವೃತ್ತ ಲೆ.ಜ.ಸತ್ವಂತ್‌ ಸಿಂಗ್‌ ದಹಿಯಾ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ದೂರು ನೀಡಿದ್ದಾರೆ.

ಇವರ ದೂರನ್ನು ಆಧಾರಿಸಿ ಪರಿಶೀಲನೆ ನಡೆಸಿದ ಎನ್‌ಜಿಟಿ, ಸತ್ವಂತ್‌ ಸಿಂಗ್‌ ದಹಿಯಾ ಮನೆಯ ಮೇಲೆ ಬಿದ್ದಿರುವ ತ್ಯಾಜ್ಯವು ಮಾನವರದ್ದೇ ಅಥವಾ ಹಕ್ಕಿಯದ್ದೇ ಎಂದು ಖಚಿತಪಡಿಸಲು, ಅದನ್ನು ಸಂಗ್ರಹಿಸಿ, ಸ್ಯಾಂಪಲ್ ಅನ್ನು ಟೆಸ್ಟ್ ಮಾಡಲು ಹೈದರಾಬಾದ್‌ನ ಲ್ಯಾಬ್‌-ಗೆ ಕಳುಹಿಸಿದೆ.

ಸ್ಯಾಂಪಲ್ ಅನ್ನು ಹೈದರಾಬಾದ್‌ ಲ್ಯಾಬ್‌-ನವರು ಟೆಸ್ಟ್ ಮಾಡಿ ರಿಪೋರ್ಟ್ ನೀಡಿದರು, ಇದನ್ನು ನೋಡಿದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಿಪೋರ್ಟ್ ಪಾಸಿಟಿವ್ ಆಗಿದ್ದು ಸತ್ವಂತ್‌ ಸಿಂಗ್‌ ದಹಿಯಾ ಮನೆಯ ಮೇಲೆ ಬಿದ್ದಿರುವ ತ್ಯಾಜ್ಯದಲ್ಲಿ ಮಾನವ ತ್ಯಾಜ್ಯವೂ ಇದೆ ಎಂದು ಹೇಳಿದೆ.

ಆದರೆ ಇದನ್ನು ಒಪ್ಪದ ನಾಗರಿಕ “ವಿಮಾನಯಾನ ನಿಯಂತ್ರಣಾ ಪ್ರಾಧಿಕಾರ”, ವಿಮಾನ ಚಲಿಸುತ್ತಿರುವಾಗ ಶೌಚಾಲಯ ಖಾಲಿ ಮಾಡುವುದು ಸಾಧ್ಯವೇ ಇಲ್ಲ ಹಾಗಿದ್ದ ಮೇಲೆ ವಿಮಾನದ ತ್ಯಾಜ್ಯ ಮತ್ತೊಬ್ಬರ ಮನೆಯ ಮೇಲೆ ಹೀಗೆ ಬೀಳಲು ಸಾಧ್ಯ ಎಂದು ಪ್ರಶ್ನಿಸಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಡಿಜಿಸಿಎಗೆ, ವಿಮಾನದ ತ್ಯಾಜ್ಯವನ್ನು ನಿಲ್ದಾಣದಲ್ಲಿಯೇ ತೆರವುಗೊಳಿಸಬೇಕು, ಈ ನಿಯಮವನ್ನು ಉಲ್ಲಂಗಿಸಿದ ಯಾವುದೇ ಸಮಸ್ಥೆಗಾಗಲಿ 50 ಸಾವಿರ.ರೂ. ದಂಡ ವಿಧಿಸಿ ಎಂದು ಖಡಕ್ ತೀರ್ಪು ನೀಡಿದೆ