ತ್ರಿವರ್ಣ ನೆಲಹಾಸು ಆಯ್ತು, ಈಗ ಗಾಂಧೀಜಿ ಭಾವಚಿತ್ರದ ಚಪ್ಪಲಿ ಮಾರಾಟಕ್ಕಿಟ್ಟ ಅಮೆಜಾನ್‍!

0
624

ಭಾರತದ ತ್ರಿವರ್ಣ ಧ್ವಜದ ನೆಲಹಾಸು ಮಾರಾಟಕ್ಕಿಟ್ಟು ಮುಜುಗರಕ್ಕೆ ಒಳಗಾಗಿದ್ದೂ ಅಲ್ಲದೇ ಕೇಂದ್ರ ಸರಕಾರದಿಂದ ಛೀಮಾರಿಗೆ ಒಳಗಾಗಿದ್ದ `ಅಮೆಜಾನ್‍’ ಇದೀಗ ಮಹಾತ್ಮಗಾಂಧಿ ಅವರ ಭಾವಚಿತ್ರದ ಚಪ್ಪಲಿಗಳನ್ನು ಮಾರಾಟಕ್ಕಿಟ್ಟಿದೆ.

ಅಮೆಜಾನ್‍ ಕೆನಡಾ ಸಂಸ್ಥೆ ಇತ್ತೀಚೆಗೆಷ್ಟೇ ಭಾರತದ ತ್ರಿವರ್ಣ ಧ್ವಜ ಬಣ್ಣದ ನೆಲಹಾಸುಗಳನ್ನು ಮಾರಾಟಕ್ಕಿಟ್ಟಿತ್ತು. ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮಧ್ಯಪ್ರವೇಶಿಸಿದ್ದ ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್‍, ಉತ್ಪನ್ನ ವಾಪಸ್‍ ಪಡೆಯದೇ ಇದ್ದರೆ ಸಂಸ್ಥೆಯ ಉದ್ಯೋಗಿಗಳಿಗೆ ವೀಸಾ ನೀಡುವುದಿಲ್ಲ. ಜನರ ಭಾವನೆ ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸುವಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಂಸ್ಥೆ ನೆಲಹಾಸು ಮಾರಾಟವನ್ನು ವಾಪಸ್‍ ಪಡೆದಿತ್ತು.

ಇದೀಗ ಅಮೆಜಾನ್ ‍ಡಾಟ್‍ ಕಾಮ್‍ ಶಾಪಿಂಗ್‍ ಪೋರ್ಟಲ್‍ನಲ್ಲಿ ಮಹಾತ್ಮಗಾಂಧಿ ಭಾವಚಿತ್ರದ ಚಪ್ಪಲಿಗಳನ್ನು ಮಾರಾಟಕ್ಕಿಟ್ಟಿದೆ. ಈ ಚಪ್ಪಲಿಗಳ ಬೆಲೆ 16.99 ಡಾಲರ್ ಅಂದರೆ 1157.44 ರೂ.ಆಗಿದೆ.Indian-flag-insulting-products-Amazon-CafePress-Sushma-Swaraj