ಶಿಶು ಮರಣ ಪ್ರಮಾಣದಲ್ಲಿ ಭಾರತಕ್ಕೆ ನಂ 1 ಪಟ್ಟ; ಬಡವರ ಮತ್ತು ಶ್ರೀಮಂತರ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸ ತಿಳಿಸಿದ ಅಧ್ಯಯನ..

0
359

ಭಾರತದಲ್ಲಿ ತಾಯಿ ಮತ್ತು ಶಿಶು ಮರಣ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಕೈಗೊಂಡು ನೂರಾರು ಕೋಟಿ ಹಣವನ್ನು ಖರ್ಚು ಮಾಡಿದರು ಕೂಡ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ, ಅನ್ಯ ದೇಶಗಳಿಗೆ ಹೋಲಿಸಿದರೆ 2015ರಲ್ಲಿ 5 ವರ್ಷದ ಒಳಗಿನ ಮಕ್ಕಳ ಸಾವಿನ ಪ್ರಮಾಣ ಭಾರತದಲ್ಲೇ ಅಧಿಕವಾಗಿದೆ. ವಿಶ್ವಸಂಸ್ಥೆ ಪ್ರಕಾರ ಭಾರತದಲ್ಲಿ 1990ಕ್ಕೆ ಹೋಲಿಸಿದರೆ ಶಿಶು ಮರಣ ಪ್ರಮಾಣದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಇಳಿಕೆಯಾಗಿದೆ. ಆದರೂ ಕೂಡ 52 ದೇಶಗಳ ಪೈಕಿ ಭಾರತವು ನಂ.01 ಆಗಿದ್ದು ಬಡವರ ಮತ್ತು ಶ್ರೀಮಂತ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ.

Also read: ಮಕ್ಕಳ ಉತ್ಪನ್ನಗಳ ಮಾರಾಟದಲ್ಲಿ ಭಾರೀ ಜನಪ್ರಿಯವಾಗಿರುವ ಜಾನ್ಸನ್ ಬೇಬಿ ಶಂಪೂ ಮಕ್ಕಳಿಗೆ ಹಾನಿಕಾರಕ ಎಂದು ರದ್ದಾಗಿದೆ, ಇದು ಇನ್ನೂ ನಿಮ್ಮ ಮನೆಯಲ್ಲಿದ್ದರೆ ಬಿಸಾಡಿ!!

ಹೌದು ಅಮೆರಿಕದ ಜಾನ್ಸ್‌ ಹಾಪ್ಕಿನ್ಸ್‌ ಬ್ಲೂಮ್‌ಬರ್ಗ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ 2015ರಲ್ಲಿ 5 ವರ್ಷದ ಒಳಗಿನ ಮಕ್ಕಳ ಸಾವಿನ ಪ್ರಮಾಣ ಭಾರತದಲ್ಲೇ ಅಧಿಕವಾಗಿದೆ. ಬಡವರು ಮತ್ತು ಶ್ರೀಮಂತರಲ್ಲಿ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದು ಅಧ್ಯಯನ ತಿಳಿಸಿದೆ. ಬ್ಲೂಮ್‌ಬರ್ಗ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದ್ದು ಆಘಾತವೆನಿಸಿದೆ.

ಈ ಹಿಂದೆ ಕೂಡ ಜಗತ್ತಿನಲ್ಲಿ ನಡೆದಿರುವ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣದಲ್ಲಿ ಭಾರತದ್ದೇ ಅಗ್ರ ಸ್ಥಾನ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ‘ಲೆವೆಲ್ಸ್ ಆ್ಯಂಡ್ ಟ್ರೆಂಡ್ಸ್ ಇನ್ ಚೈಲ್ಡ್ ಮೊರ್ಚಾಲಿಟಿ 2014’ ವರದಿ ಪ್ರಕಾರ ಭಾರತದಲ್ಲಿ ಐದು ವರ್ಷದೊಳಗಿನ 10.34ಲಕ್ಷ ಮಕ್ಕಳು ಸಾವನ್ನಪ್ಪಿದ್ದಾರೆ. ಆದರೆ 1990ರಲ್ಲಿ ಇದು 30.33ಲಕ್ಷ ಇತ್ತು, 2013ರ ವೇಳೆಗೆ 10.34ಲಕ್ಷಕ್ಕೆ ಇಳಿಕೆಯಾಗಿದೆ. ಇದೇ ವೇಳೆ ನವಜಾತ ಶಿಶು ಮರಣ ಪ್ರಮಾಣ ಸಾವಿರಕ್ಕೆ 88ರಿಂದ 41ಕ್ಕೆ ಕುಸಿದಿದೆ.

Also read: ಪೋಷಕರೇ ನಿಮ್ಮ ಮಕ್ಕಳಿಗೆ ಕ್ಯಾನ್ಸರ್ ಬರದಂತೆ ತಡೆಯಲು ಈ ಕ್ರಮಗಳನ್ನು ಪಾಲಿಸಿ..

ಮಕ್ಕಳ ಸಾವಿನ ಪ್ರಮಾಣವನ್ನು ತಗ್ಗಿಸುವಲ್ಲಿ ಭಾರತ ಗಣನೀಯ ಪ್ರಗತಿ ದಾಖಲಿಸುತ್ತಿದೆ. 2000ನೇ ಇಸವಿಯಲ್ಲಿ 5 ವರ್ಷದ ಒಳಗಿನ 25 ಲಕ್ಷ ಮಕ್ಕಳು ಸಾವಿಗೀಡಾಗಿದ್ದಕ್ಕೆ ಹೋಲಿಸಿದರೆ 2015ರಲ್ಲಿ ಮಕ್ಕಳ ಸಾವಿನ ಪ್ರಮಾಣ 12 ಲಕ್ಷಕ್ಕೆ ಇಳಿಕೆಯಾಗಿದೆ. ಆದಾಗ್ಯೂ ಭಾರತದಲ್ಲಿ ಮಕ್ಕಳ ಸಾವಿನ ಪ್ರಮಾಣ ವಿಶ್ವದಲ್ಲೇ ಅಧಿಕೆ ಎನಿಸಿಕೊಂಡಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಭಾರತದ ರಾಜ್ಯಗಳ ಮಧ್ಯೆ ಮಕ್ಕಳ ಸಾವಿನ ಪ್ರಮಾಣದಲ್ಲಿ ಭಾರೀ ವ್ಯತ್ಯಾಸವಿದೆ. ಅಸ್ಸಾಂನಲ್ಲಿ ಮಕ್ಕಳ ಸಾವಿನ ಪ್ರಮಾಣ ಅತ್ಯಧಿಕವಾಗಿದ್ದು, ಗೋವಾಕ್ಕಿಂತಲೂ ಏಳು ಪಟ್ಟು ಅಧಿಕವೆನಿಸಿದೆ. ಪ್ರಸವ ಪೂರ್ವದಲ್ಲಿ ಉಂಟಾಗುವ ಸಮಸ್ಯೆ, ತಡೆಗಟ್ಟಬಹುದಾದ ಸಾಂಕ್ರಾಮಿಕ ಕಾಯಿಲೆಗಳಿಂದ 5 ವರ್ಷದ ಒಳಗಿನ ಹೆಚ್ಚಿನ ಮಕ್ಕಳು ಸಾವಿಗೀಡಾಗುತ್ತಿದ್ದಾರೆ.

ಈ ಎಲ್ಲ ಅಧ್ಯಯನಕ್ಕೆ ಸಂಬಂಧಪಟ್ಟಂತೆ ವಿಶ್ವಸಂಸ್ಥೆ ನಿಗದಿ ಪಡಿಸಿರುವ ಗುರಿಯ ಪ್ರಕಾರ ಭಾರತ 5 ವರ್ಷದ ಒಳಗಿನ ಮಕ್ಕಳ ಸಾವಿನ ಸಂಖ್ಯೆಯನ್ನು 1,000ಕ್ಕೆ 39ರ ಒಳಗೆ ನಿಯಂತ್ರಿಸಬೇಕಿದೆ. ಆದರೆ, 2015ರಲ್ಲಿ 1,000ಕ್ಕೆ 47.8 ಸಾವುಗಳು ಸಂಭವಿಸಿವೆ. ಬಹುತೇಕ ಮಕ್ಕಳು ಮೊದಲ 4 ವಾರಗಳ ಒಳಗಾಗಿಯೇ ಸಾವನ್ನಪ್ಪಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Also read: ಎಳೆ ಕಂದಮ್ಮಗಳಿಗೆ ಹಚ್ಚುವ ಜಾನ್ಸನ್ ಬೇಬಿ ಪೌಡರ್-ನಿಂದ ಮಕ್ಕಳಿಗೆ ಭೇಕರ ಕ್ಯಾನ್ಸರ್ ಬರಬಹುದು ಎಂದು ಶ್ರೀಲಂಕಾದಲ್ಲಿ ಬ್ಯಾನ್ ಮಾಡಲಾಗಿದೆ.. ನಮ್ಮ ದೇಶದಲ್ಲೂ ಹೀಗೆ ಮಾಡಬೇಕಾ?

ಭಾರತ, ನೈಜೀರಿಯಾ, ಪಾಕಿಸ್ತಾನ, ಕಾಂಗೊ ಗಣರಾಜ್ಯ, ಚೀನಾಗಳಲ್ಲಿ ಐದು ವರ್ಷದೊಳಗಿನ ಮಕ್ಕಳು ಮರಣ ಹೊಂದಿದ್ದು, ಇದರಲ್ಲಿ ಶೇ 21ರಷ್ಟು ಭಾರತ ,ಶೇ13ರಷ್ಟು ನೈಜೀರಿಯಾದ ಮಕ್ಕಳಾಗಿದ್ದಾರೆ. ಜಗತ್ತಿನಲ್ಲಿ 20.8ಲಕ್ಷ ಶಿಶುಗಳು ಒಂದು ತಿಂಗಳ ಜೀವಿತಾವಧಿಯಲ್ಲೇ ಸಾವನ್ನಪ್ಪಿವೆ. ಇದರಲ್ಲಿ ಕಾಲು ಭಾಗದಷ್ಟು ಸಾವುಗಳು ಭಾರತದಲ್ಲಿ ನಡೆದಿವೆ. ಅವಧಿಪೂರ್ವ ಜನನದಿಂದ ಶೇ17,ಶೇ 15 ನ್ಯುಮೋನಿಯಾ, ಶೇ 11 ಪ್ರಸವ ಸಂದರ್ಭದ ಸಮಸ್ಯೆ, ಶೇ 9 ಅತಿಸಾರ,ಶೇ 7ರಷ್ಟು ಮಕ್ಕಳು ಮಲೇರಿಯಾದಿಂದ ಸಾವಿಗೀಡಾಗಿದ್ದಾರೆ ಎಂದು ವರದಿ ವಿವರಿಸಿದೆ.