ಪುಲ್ವಾಮ ಆತ್ಮಾಹುತಿ ದಾಳಿಯ ಬಗ್ಗೆ ಭಾರತಕ್ಕೆ ಮೊದಲೇ ಸುಳಿವು ಸಿಕ್ಕಿತ್ತಾ?

0
342

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರ ಎಂಬಲ್ಲಿ ತೆರಳುತ್ತಿದ್ದ ಸಿಆರ್ ಪಿಎಫ್ ವಾಹನದ ಮೇಲೆ ಆತ್ಮಾಹುತಿ ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿದ ಪರಿಣಾಮ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾದರು. ಈ ಸುದ್ದಿ ತಿಳಿದ ಇಡಿ ಭಾರತವು ಬೆಚ್ಚಿ ಬಿದ್ದಿದೆ. ಪಾಪಿ ಉಗ್ರರ ದಾಳಿಯ ಸೂಚನೆ ನೀಡುವಂಥ ವಿಡಿಯೋ ಒಂದು ಟ್ವಿಟ್ಟರ್​ನಲ್ಲಿ ಇತ್ತೀಚೆಗೆ ಹರಿದಾಡಿತ್ತು. ಅದರಲ್ಲಿ ಉಗ್ರರು ನಾವು ಹೇಗೆ ದಾಳಿ ನಡೆಸುತ್ತೇವೆ ಎನ್ನುವ ಬಗ್ಗೆ ಹೇಳಿಕೊಂಡಿದ್ದರು. ವಿಡಿಯೋದಲ್ಲಿ ಹೇಳಿದ ಮಾದರಿಯಲ್ಲೇ ನಿನ್ನೆ ದಾಳಿ ನಡೆದಿದೆ.

Also read: ಭಾರತೀಯ ರೈಲ್ವೆ (RRB) 1.3 ಲಕ್ಷ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ದಾಳಿಯ ಸುಳಿವು ಮೊದಲೇ ಸಿಕ್ಕಿತ್ತಾ?

ಫೆ. 5ರಂದು ಪಾಕಿಸ್ತಾನದ ಕರಾಚಿಯಲ್ಲಿ ಜೈಶ್ ಎ ಮೊಹ್ಮದ್ ಸಂಘಟನೆಯ ಜಾಥಾ ನಡೆದಿತ್ತು. ಇದರಲ್ಲಿ ಉಗ್ರ ಮಸೂದ್ ಅಜರ್ ಸಹೋದರ ಅಬ್ದುಲ್ ರವೂಫ್ ಅಜರ್ ಕೂಡಾ ಭಾಗಿಯಾಗಿದ್ದನು. ಈ ವೇಳೆ ಭಾರತದಲ್ಲಿ ದಾಳಿ ನಡೆಸಲು 7 ಉಗ್ರರ ತಂಡಗಳನ್ನು ಕಳುಹಿಸೋದಾಗಿ ಘೋಷಣೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ರವೂಫ್ ಘೋಷಣೆಯ ಬೆನ್ನಲ್ಲೇ ಅಲರ್ಟ್ ಆಗಿದ್ದ ಭಾರತದ ಗುಪ್ತಚರ ಇಲಾಖೆ ಭಾರತದಲ್ಲಿ ಜೈಷ್ ಎ ಮೊಹಮ್ಮದ್, ಲಷ್ಕರ್ ಎ ತಯ್ಬಾ ದಾಳಿ ಬಗ್ಗೆ ಸುಳಿವು ನೀಡಿತ್ತು. ವಾಹನಗಳ ಮೂಲಕವೇ ದಾಳಿ ನಡೆಸೋದಾಗಿ ಉಗ್ರ ಸಂಘಟನೆಯ ದೂರವಾಣಿ ಕರೆಗಳ ಮೂಲಕ ಭದ್ರತಾ ಪಡೆಗಳಿಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ.

ಸೂಚನೆ ಸಿಕ್ಕರೂ ನಿರ್ಲಕ್ಷ್ಯ ಮಾಡಿದ್ರ?

ಇಂಥದೊಂದು ಉಗ್ರ ದಾಳಿ ನಡೆವ ಸೂಚನೆ ಸಿಕ್ಕರೂ ನಿರ್ಲಕ್ಷ್ಯ ಮಾಡಲಾಯ್ತೇ? ಭದ್ರತಾ ಇಲಾಖೆಯ ಮೂಲಗಳು ತಿಳಿಸುವಂತೆ ಈ ಸೂಚನೆ ಸಿಗುತ್ತಿದ್ದಂತೆಯೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಹೆಚ್ಚು ಸಮಯವಿರಲಿಲ್ಲ. ಆತ್ಮಾಹುತಿ ದಾಳಿಕೋರ ಯಾರು, ಆತನನ್ನು ತಡೆಯುವುದು ಹೇಗೆ ಎಂಬುದಕ್ಕೆ ಪರಿಹಾರ ದೊರಕಿರಲಿಲ್ಲ. ಹಾಗೆಯೇ ಈ ಟ್ವಿಟ್ಟರ್​ ಖಾತೆಯನ್ನು ಎಲ್ಲರೂ ವೀಕ್ಷಣೆ ಮಾಡಲು ಸಾಧ್ಯವಿಲ್ಲ. ಇದರ ಜೊತೆಗೆ, ಯಾವ ಪ್ರದೇಶದಿಂದ ಈ ಖಾತೆಯನ್ನು ಆಪರೇಟ್​ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ ಎನ್ನಲಾಗಿದೆ.

20 ವರ್ಷಗಳಲ್ಲಿಯೇ ನಡೆದ ಅತೀ ದೊಡ್ಡ ದಾಳಿ

ಪುಲ್ವಾಮಾದಲ್ಲಿ ನಡೆದ ದಾಳಿ ಕಳೆದ 20 ವರ್ಷಗಳಲ್ಲಿಯೇ ನಡೆದ ಅತೀ ದೊಡ್ಡ ದಾಳಿಯಾಗಿದೆ. 2001ರಲ್ಲಿ ಶ್ರೀನಗರದಲ್ಲಿರುವ ಸಚಿವಾಲಯದ ಮುಂಭಾಗ ನಡೆಸಿದ ಬಾಂಬ್ ದಾಳಿಯಲ್ಲಿ 38 ಮಂದಿ ಮೃತಪಟ್ಟು, 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈಗ ನಡೆದ ಘಟನೆಯ ಮುನ್ಸೂಚನೆ ತಿಳಿಯುತ್ತಿದ್ದಂತೆಯೇ ಸಿಆರ್ ಪಿಎಫ್ ವಾಹನಗಳು ಚಲಿಸುವ ಮಾರ್ಗದಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಯೋಜನೆ ರೂಪಿಸಲಾಗಿತ್ತು. ಆದರೆ ಇದು ಸಾಕಷ್ಟು ವಾಹನ ಸಮದಣಿ ಇರುವ ಪ್ರದೇಶವಾಗಿದ್ದರಿಂದ ಹಗಲು ಹೊತ್ತಲ್ಲಿ ಎಲ್ಲಾ ವಾಹನಗಳನ್ನೂ ತಡೆದು, ತಪಾಸಣೆ ಮಾಡುವುದು ಕಷ್ಟ. ಆದ್ದರಿಂದ ಸಂಜೆಯ ಸಮಯದಲ್ಲಿ ಸಂಚಾರ ಹೆಚ್ಚಿಲ್ಲದ ಸಮಯದಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಇರುವ ವಾಹನವನ್ನು ಕಳಿಸುವುದು ಎಂದು ನಿರ್ಧರಿಸಲಾಗಿತ್ತು.

ಸ್ಕಾರ್ಪಿಯೋ ಕಾರಿನಲ್ಲಿ ಇತ್ತು 350 ಕೆಜಿ ಬಾಂಬ್:

ಸ್ಕಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರ ಸುಮಾರು 350 ಕೆ.ಜಿ.ಯ ಸುಧಾರಿತ ಸ್ಫೋಟಕವನ್ನು ಸಿಆರ್​ಪಿಎಫ್​ ಯೋಧರು ಇದ್ದ ಸ್ಥಳದಲ್ಲಿ ಸ್ಫೋಟಿಸಿದ್ದಾರೆ. ಇಷ್ಟೊಂದು ಬಾರಿ ದೊಡ್ಡ ಬಾಂಬ್ ಇದ್ದ ವಾಹನ ನಿರ್ಧರಿಸಿದಂತೆಯೇ ತಪಾಸಣೆ ಮಾಡಲಾಗಿತ್ತು. ಆದರೆ ಯಾವುದೇ ವಾಹನದಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರಲಿಲ್ಲ. ಸ್ಫೋಟಕಗಳನ್ನು ಯಾರಿಗೂ ಕಾಣದಂತೆ ಕಾರಿನಲ್ಲಿ ಬಚ್ಚಿಡಲಾಗಿತ್ತೇ? ಅಥವಾ ಈ ವಾಹನ ತಪಾಸಣಾಕಾರರ ಕಣ್ಣು ತಪ್ಪಿಸಿ ಮುಂದೆ ಸಾಗಿತ್ತೆ ಎಂಬುದು ಅರ್ಥವಾಗದ ವಿಷಯವಾಗಿದೆ.