ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಎಫೆಕ್ಟ್; ಭಾರತದಲ್ಲೇ ಈಗ ಅನೇಕ ಶಸ್ತ್ರಾಸ್ತ್ರ ತಯಾರಿ, ಹೀಗೆ ಮುಂದುವರೆದರೆ ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ನಂಬರ್ ಒನ್ ಆಗಬಹುದು!!

0
558

ಕಳೆದ ಒಂದು ದಶಕಗಳಿಂದ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಭಾರತ ನಂ.1 ಸ್ಥಾನದಲ್ಲಿತ್ತು. ಕರ್ನಾಟಕದ ಅರ್ಧದಷ್ಟುಜನಸಂಖ್ಯೆ ಹೊಂದಿರುವ ಸೌದಿ ಅರೇಬಿಯಾ, ವಿಶ್ವದಲ್ಲೇ ಅತ್ಯಂತ ಹೆಚ್ಚು ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿ ಹೊರಹೊಮ್ಮಿದು ಭಾರತ ಇದೀಗ 2ನೇ ಸ್ಥಾನಕ್ಕೆ ಕುಸಿದಿದೆ.

Also read: ಮೇಕ್ ಇನ್ ಇಂಡಿಯಾ ಪ್ರಭಾವದಿಂದ ಭಾರತದಲೇ ನಡೆದಿದೆ ಮೊಬೈಲ್ ತಯಾರಿಕೆ; ಇದರಿಂದ 6.7 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದೆ.

ಹೌದು ಭಾರತ ಈಗ ಮೇಕ್ ಇನ್ ಇಂಡಿಯಾ ಅಭಿಯಾನದಲ್ಲಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಮುಂದಾಗುತ್ತಿದೆ. ಇದರ ಜೊತೆಯಲ್ಲಿ ರಕ್ಷಣಾ ಒಪ್ಪಂದಗಳು ನಡೆದ ಬಳಿಕ ಶಸ್ತ್ರಾಸ್ತಗಳು ಭಾರತ ಸೇರಲು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸ್ಟಾಕ್ ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ ಸ್ಟಿಟ್ಯೂಟ್(SIPRI) ವಿಶ್ವದ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಯಾವ ದೇಶ ಎಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎನ್ನುವ ವರದಿಯನ್ನು ಬಿಡುಗಡೆ ಮಾಡಿದೆ.

ಏನಿದು ವರದಿ?

ಸುಮಾರು 120 ಕೋಟಿ ಜನಸಂಖ್ಯೆ ಹೊಂದಿರುವ ಭಾರತ 2014-18ರ ಅವಧಿಯಲ್ಲಿ ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಶೆ.9.5ರಷ್ಟುಪಾಲು ಹೊಂದಿದ್ದರೆ, ಇದೇ ಅವಧಿಯಲ್ಲಿ ಕರ್ನಾಟಕದ ಜನಸಂಖ್ಯೆ (6.77)ಗಿಂದ ಅರ್ಧದಷ್ಟುಜನಸಂಖ್ಯೆ ಹೊಂದಿರುವ ಸೌದಿ ಅರೇಬಿಯಾ (3.30 ಕೋಟಿ) ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.12ರಷ್ಟುಪಾಲು ಹೊಂದುವ ಮೂಲಕ ಮೊದಲ ಸ್ಥಾನಕ್ಕೆ ಏರಿದೆ. ಶೇ.4.2ರಷ್ಟುಪಾಲಿನ ಮೂಲಕ ನೆರೆಯ ಚೀನಾ 6ನೇ ಸ್ಥಾನದಲ್ಲಿದೆ ಎಂದು ಸ್ಟಾಕ್‌ಹೋಮ್‌ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ(ಸಿಪ್ರಿ) ತನ್ನ ವರದಿಯಲ್ಲಿ ತಿಳಿಸಿದೆ.

ಮೇಕ್ ಇನ್ ಇಂಡಿಯಾ ಪ್ರಭಾವ?

ಭಾರತ ಈಗ ಮೇಕ್ ಇನ್ ಇಂಡಿಯಾ ಅಭಿಯಾನದಲ್ಲಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಮುಂದಾಗುತ್ತಿದೆ. ಇದರ ಜೊತೆಯಲ್ಲಿ ರಕ್ಷಣಾ ಒಪ್ಪಂದಗಳು ನಡೆದ ಬಳಿಕ ಶಸ್ತ್ರಾಸ್ತಗಳು ಭಾರತ ಸೇರಲು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತ ಫ್ರಾನ್ಸ್ ರಫೇಲ್ ಖರೀದಿ ಸಂಬಂಧ ನಡೆಸಿದ 59 ಸಾವಿರ ಕೋಟಿ ರೂ. ಒಪ್ಪಂದ, ರಷ್ಯಾ ಜೊತೆ ಎಸ್-400 ಟ್ರಯಫ್ ವಾಯು ರಕ್ಷಣಾ ವ್ಯವಸ್ಥೆ ಕ್ಷಿಪಣಿ ಖರೀದಿ ಸಂಬಂಧ ನಡೆಸಿದ 40 ಸಾವಿರ ಕೋಟಿ ರೂ. ಒಪ್ಪಂದಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಿಲ್ಲ. ರಫೇಲ್ ವಿಮಾನಗಳು 2019ರ ನವೆಂಬರ್ ನಲ್ಲಿ ಭಾರತಕ್ಕೆ ಬರಲಿದ್ದರೆ, ಎಸ್40 ಕ್ಷಿಪಣಿ ರಕ್ಷಣಾ ವ್ಯವಸ್ಥೆ 2020 ಅಕ್ಟೋಬರ್ ಮತ್ತು ಏಪ್ರಿಲ್ 2023ರ ಒಳಗಡೆ ಭಾರತಕ್ಕೆ ಬರಲಿದೆ.

ಇನ್ನು 2009ರಿಂದ 2013 ಮತ್ತು 2014 ರಿಂದ 18ರ ನಡುವೆ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ 24ರಷ್ಟು ಇಳಿಕೆಯಾಗಿದೆ. ಈ ವರದಿಯ ಅನ್ವಯ ರಷ್ಯಾದಿಂದ 2001ರಲ್ಲಿ ಯುದ್ಧ ವಿಮಾನಗಳಿಗೆ ಹಾಗೂ 2008ರಲ್ಲಿ ಫ್ರಾನ್ಸ್‌ ನಿಂದ ಸಬ್‌ ಮರೀನ್‌ಗಳ ಖರೀದಿಗೆ ಇಡಲಾದ ಬೇಡಿಕೆ ಪೂರೈಕೆಯಾಗುವಲ್ಲಿ ನಿಧಾನವಾಗಿರುವ ಕಾರಣದಿಂದಲೂ ಆಮದು ಪ್ರಮಾಣ ಕಡಿತಗೊಂಡಿದೆ ಎಂದು ಹೇಳಲಾಗಿದೆ. ಅಂತೆಯೇ ಮೇಕ್ ಇನ್ ಇಂಡಿಯಾ ಎಫೆಕ್ಟ್ ಮತ್ತು ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಬಳಕೆಗೆ ಮುಂದಾಗಿರುವ ಭಾರತ ಸರ್ಕಾರದ ನಡೆ ಕೂಡ ಈ ಪ್ರಮಾಣದಲ್ಲಿ ಅಲ್ಪ ಪ್ರಮಾಣದ ಪ್ರಭಾವ ಬೀರಿದೆ ಎನ್ನಲಾಗಿದೆ.

Also read: ಭಾರತೀಯ ಸೇನೆಗೆ ಸಿದ್ದವಾದ “ಮೇಕ್ ಇನ್ ಇಂಡಿಯಾ”ದ ಮಾನವರಹಿತ “ಮಂತ್ರ”ಎಂಬ ಯುದ್ಧ ಟ್ಯಾಂಕರ್..!

ಒಟ್ಟಾರೆಯಾಗಿ ಭಾರತಕ್ಕೆ ಆಮದಾಗುವ ಶಸ್ತ್ರಾಸ್ತ್ರಗಳ ಪೈಕಿ ಶೇ.58 ರಷ್ಟು ಪಾಲು ರಷ್ಯಾ, ಶೇ.15 ರಷ್ಟು ಇಸ್ರೇಲ್, ಶೇ.12 ರಷ್ಟು ಅಮೆರಿಕದ ಕಂಪನಿಗಳ ಪಾಲಿದೆ. ಸೌದಿ ಅರೇಬಿಯಾಗೆ ಶೇ.68 ಅಮೆರಿಕ, ಶೇ.16 ಇಂಗ್ಲೆಂಡ್, ಶೇ.4.3 ಫ್ರಾನ್ಸ್ ಕಂಪನಿಗಳಿಂದ ರಫ್ತಾಗುತ್ತಿದೆ. ಸೌದಿ ಅರೇಬಿಯಾ, ಭಾರತದ ಬಳಿಕ ಟಾಪ್-10 ಪಟ್ಟಿಯಲ್ಲಿ ಈಜಿಪ್ಟ್(3), ಆಸ್ಟ್ರೇಲಿಯಾ(4), ಅಲ್ಜೀರಿಯಾ(5), ಚೀನಾ(6), ಯುಎಇ(7), ಇರಾಕ್(8), ದಕ್ಷಿಣ ಕೊರಿಯಾ(9), ವಿಯೆಟ್ನಾ(10), ಪಾಕಿಸ್ತಾನ(11) ನಂತರದ ಸ್ಥಾನವನ್ನು ಪಡೆದಿದೆ.