ಕರ್ನಾಟಕ ಸೇರಿ 7 ರಾಜ್ಯಗಳ ಮೇಲೆ ಪುಲ್ವಾಮಾ ಮಾದರಿ ದಾಳಿಗೆ ಮುಂದಾದ ಪಾಕ್; ಗುಪ್ತಚರ ಇಲಾಖೆಯಿಂದ ಹೈಅಲರ್ಟ್ ಸಂದೇಶ..

0
379

ಕಲಂ 370 ರದ್ದು ಗೊಳಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ಪಾಕ್ ಈಗಾಗಲೇ ಹಲವು ಬೆದರಿಕೆಯನ್ನು ಹಾಕಿದ್ದು, ಕರ್ನಾಟಕ ಸೇರಿ ದೇಶದ ಏಳು ರಾಜ್ಯಗಳಲ್ಲಿ ಪುಲ್ವಾಮಾ ಮಾದರಿಯಲ್ಲಿ ದಾಳಿ ನಡೆಯುಳು ಸಜ್ಜಾಗಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಹೈಅಲರ್ಟ್ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ಜೀ ನ್ಯೂಸ್ ವರದಿ ಮಾಡಿದೆ. ಅದರಂತೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ರಾಜಸ್ತಾನ್, ದೆಹಲಿ ಮತ್ತು ಆಂಧ್ರಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಿದೆ. ಈ ದಾಳಿಯನ್ನು ಮತ್ತೆ ಜೈಶ್ ಎ ಮೊಹಮ್ಮದ್(ಜೆಇಎಂ) ಉಗ್ರಗಾಮಿ ಸಂಘಟನೆ ಮಾಡುವ ಸಂಭವ ಇದೆ ಎಂದು ಸೂಚಿಸಿದೆ.

ಹೌದು ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ-ಭಾರತದ ನಡುವೆ ಸೌಹರ್ದಯುತವಾಗಿ ಸಂಚರಿಸುತ್ತಿದ್ದ ಸಂಜೋತ ಎಕ್ಸ್​ಪ್ರೆಸ್​ ರೈಲು ನಿಲ್ಲಿಸಲು ಮುಂದಾಗಿದೆ. ಪಾಕಿಸ್ತಾನದ ಲಾಹೋರ್​ನಿಂದ ಬರುತ್ತಿದ್ದ ಸಂಜೋತಾ ಎಕ್ಸ್​ಪ್ರೆಸ್​ ವಾಘಾ ಗಡಿಯ ಬಳಿ ಮಧ್ಯಾಹ್ನ ನಿಂತಿದೆ. ರೈಲಿನ ಸಿಬ್ಬಂದಿ ಇಲ್ಲಿಂದ ಮುಂದಾಕ್ಕೆ ಭಾರತೀಯ ಸಿಬ್ಬಂದಿಗಳೇ ಭಾರತದ ಪ್ರದೇಶದಲ್ಲಿ ಚಲಿಸಲಿ ಎಂದು ಬೇಡಿಕೆ ಇಟ್ಟಿದ್ದರು. ಸುಮಾರು ಮೂರುಗಂಟೆಗಳ ಬಳಿಕ ರೈಲನ್ನು ಭಾರತೀಯ ಸಿಬ್ಬಂದಿಗಳು ಪಂಜಾಬ್​ನ ಅಟ್ಟರಿವರೆಗೂ ಚಲಾಯಿಸಿಕೊಂಡು ಬಂದರು.

ರೈಲು ವಾಘಗಡಿ ಬಳಿ ನಿಂತಿರುವ ಕುರಿತು ಪಾಕಿಸ್ತಾನದ ರೈಲ್ವೆ ಸಚಿವರಾದ ಶೇಖ್​ ರಶೀದ್​ ದೃಢಪಡಿಸಿದ್ದಾರೆ. ಪಾಕಿಸ್ತಾನದ ಈ ನಡೆ ಬಗ್ಗೆ ಭಾರತದ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಇದರಿಂದಾಗಿ ನೂರಾರು ಪ್ರಯಾಣಿಕರು ವಾಘಾ ಗಡಿ ಬಳಿ ತೊಂದರೆ ಪಡುವಂತೆ ಆಗಿದೆ, ಇದೆಲ್ಲ ಕುತಂತ್ರ ನೋಡಿದರೆ ಪಾಕ್ ಮತ್ತೆ ದಾಳಿ ನಡೆಸಲು ಸಜ್ಜಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ನಡೆಸಿದ ಪುಲ್ವಾಮಾ ದಾಳಿ ಮಾದರಿಯಲ್ಲಿಯೇ ಸೇನೆ, ಪೊಲೀಸ್ ಹಾಗೂ ಇನ್ನಿತರ ಪ್ರಮುಖ ಗಣ್ಯರನ್ನು ಗುರಿಯಾಗಿರಿಸಿ ದಾಳಿ ನಡೆಸುವ ಸಂಚನ್ನು ಜೈಶ್ ರೂಪಿಸಿದೆ ಎಂದು ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ. ಆಗಸ್ಟ್ 10ರಿಂದ 20ರವರೆಗೆ ಎಲ್ಲಾ ವಿಸಿಟರ್ಸ್ ಗಳ ಪ್ರವೇಶ ನಿರ್ಬಂಧಿಸಿ, ಕೇವಲ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ವಿಮಾನ ನಿಲ್ದಾಣಗಳ ಒಳಗೆ ಬಿಡುವಂತೆ ನಿರ್ದೇಶನ ನೀಡಿದೆ.

ಭಾರತದ ರಾಯಭಾರಿ ಹೊರಹಾಕಿದ ಪಾಕ್?

ಪಾಕಿಸ್ತಾನವು ಬುಧವಾರ ಇಸ್ಲಾಮಾಬಾದ್ ನಲ್ಲಿ ಇರುವ ಭಾರತದ ರಾಯಭಾರಿಯನ್ನು ಹೊರಹಾಕಿದೆ. ಇದರ ಜತೆಗೆ ಐದು ಅಂಶಗಳ ಯೋಜನೆಯನ್ನು ಸಹ ಘೋಷಿಸಿದೆ. ಭಾರತದ ಜತೆಗೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದೆ. ದ್ವಿಪಕ್ಷೀಯ ವ್ಯಾಪಾರ- ವ್ಯವಹಾರಗಳನ್ನು ಅಮಾನತು ಮಾಡಿದೆ. ಭಾರತದ ಹೈಕಮಿಷನರ್ ಆಗಿ ಅಜಯ್ ಬಿಸಾರಿಯಾ ಪಾಕಿಸ್ತಾನದಲ್ಲಿ ಇದ್ದರೆ, ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ನೇಮಕ ಆಗಿರುವ ಮೊಯಿನ್-ಉಲ್-ಹಕ್ ಇನ್ನೂ ಅಧಿಕಾರ ಸ್ವೀಕರಿಸಬೇಕಿದೆ. ಒಟ್ಟಾರೆಯಾಗಿ ಪಾಕ್ ಭಾರತದ ಮೇಲೆ ಮತ್ತೆ ದಾಳಿ ಮಾಡಲು ಸಂಚು ನಡೆಸುತ್ತಿದೆ ಎನ್ನುವುದು ಹಲವು ಮೂಲಗಳಿಂದ ತಿಳಿಯುತ್ತಿದೆ.