ರೈತರ ಸಾಲಮನ್ನಾ ಇಲ್ಲ, ನೆರೆ ಪರಿಹಾರಕ್ಕೆ ಹಣ ಬಳಕೆ; ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

0
174

ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ರಾಜ್ಯದ ತುಂಬೆಲ್ಲ ಹೋರಾಟಕ್ಕೆ ಬೆಂಬಲ ನೀಡಿದ ಯಡಿಯೂರಪ್ಪ ಈಗ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಸಂಪೂರ್ಣ ಸಾಲಮನ್ನಾ ಇಲ್ಲ ಎಂದು ಹೇಳುವುದು ಜನರಿಗೆ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಬೆಳೆಗಳು ಹಾನಿಯಾಗಿದ್ದು, ಅವುಗಳಿಗೆ ಕೇಂದ್ರ ಸರಕಾರದ ನಿಯಮದಂತೆ ಹೆಕ್ಟರ್‌ಗೆ 6800 ರೂ. ಪರಿಹಾರ ವಿತರಿಸುವುದು ರೈತರಿಗೆ ಯಾವುದಕ್ಕೂ ಉಪಯೋಗವಾಗುದಿಲ್ಲ.

ಕೂಡಲೇ ಸರಕಾರ 25000 ರೂ. ಪರಿಹಾರ ಒದಗಿಸಬೇಕೆಂದು ಗುಡುಗುತ್ತಿರುವ ಯಡಿಯೂರಪ್ಪ ಈಗ ಉಲ್ಟಾ ಹೊಡೆದಿರುವುದು ಏಕೇ ಎನ್ನುವ ಪ್ರಶ್ನೆ ಮೂಡಿದೆ. ಅದರಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳುವಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಪ್ರಶ್ನೆಯೇ ಇಲ್ಲ. ಇವತ್ತಿನ ಹಣಕಾಸಿನ ಪರಿಸ್ಥಿತಿ, ನೆರೆ ಪ್ರವಾಹದಂತ ದೊಡ್ಡ ಅನಾಹುತ ಆಗಿದೆ ಹೀಗಾಗಿ ಎಲ್ಲಾ ಕಾರ್ಯಕ್ರಮ ರದ್ದು ಮಾಡಿ ನೆರೆ ಪರಿಹಾರಕ್ಕೆ ಬದಲಾವಣೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ನಾವು ಪ್ರಮಾಣ ಮಾಡಿದಂತೆ ಬೆಳೆಗೆ ಹೆಚ್ಚು ಪರಿಹಾರ ಮತ್ತು ಮನೆ ಕಟ್ಟಿಕೊಳ್ಳಲು ಹೆಚ್ಚು ಪರಿಹಾರ ನೀಡುತ್ತಿದ್ದೇವೆ. ನಮ್ಮ ದೇಶದ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪರಿಹಾರ ಕೊಟ್ಟ ಉದಾಹರಣೆ ಇಲ್ಲ. ಬೇರೆ ಯಾವುದನ್ನು ಮಾಡುವ ಸ್ಥಿತಿಯಲ್ಲಿ ಇಲ್ಲ. ಮನೆಯನ್ನು ಕಟ್ಟಲು 95 ಸಾವಿರ ಕೊಡುವ ಕಡೆ 5 ಲಕ್ಷ ರೂಪಾಯಿ ಜೊತೆಗೆ ಎಲ್ಲಾ ನಿರಾಶ್ರಿತರಿಗೆ 10 ಸಾವಿರ ಕೊಡುತ್ತಿದ್ದೇವೆ ಎಂದರು.

ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಉಪಚುನಾವಣೆ ಮುಗಿದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು. ಮಹಾರಾಷ್ಟ್ರದಲ್ಲಿ ಕನ್ನಡ ಭಾಷೆ ಪ್ರಭಾವ ಇರುವ ಪ್ರದೇಶಗಳಲ್ಲಿ ಪ್ರಚಾರ‌ಕ್ಕೆ ಹೋಗುತ್ತಿದ್ದೇನೆ.. ಅಲ್ಲಿನ ಮುಖಂಡರ ಅಪೇಕ್ಷೆ ಮೆರೆಗೆ ಹಿಂದೆಯೂ ಹೋಗಿದ್ದೆ ಮತ್ತೆ ಈಗ ಹೋಗುತ್ತಿದ್ದೇನೆ‌ ಎಂದು ತಿಳಿಸಿದರು.
ಮಹದಾಯಿ ಯೋಜನೆಗೆ ಸಂಬಂಧಪಟ್ಟಂತೆ ಚುನಾವಣೆ ಮುಗಿದ ಕೂಡಲೇ ಮಾತುಕತೆ ನಡೆಸಲಾಗುವುದು. ಮಹಾರಾಷ್ಟ್ರ ಮತ್ತು ಗೋವಾ ಜತೆಗೆ ಮಾತಾಡಬೇಕು ಚುನಾವಣೆ ಮುಗಿದ ಬಳಿಕ ಕುಳಿತು ಮಾತುಕತೆ ನಡೆಸಲಾಗುವುದು ಇಲ್ಲಿಯವರೆಗೂ ಮಹದಾಯಿಗೆ ಸಂಬಂಧಪಟ್ಟಂತೆ ನಾವೇನೂ ಮಾಡಿಲ್ಲ. ಗೃಹ ಸಚಿವ ಅಮಿತ್ ಶಾ ಜತೆಗೆ ಮಾತಾಡಿ ಸಮಸ್ಯೆ ಬಗೆಹರಿಸುವ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.