ಪಾಕ್‍ ಮಣಿಸಿದ ಭಾರತ ಟಿ-20 ಅಂಧರ ವಿಶ್ವಕಪ್‍ ಚಾಂಪಿಯನ್‍..

0
830

ಪ್ರಕಾಶ್‍ ಜಯರಾಮಯ್ಯ 1 ರನ್‍ನಿಂದ ಶತಕ ವಂಚಿತರಾದರೂ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದ ಭಾರತ ತಂಡ ಅಂಧರ ಟಿ-20 ವಿಶ್ವಕಪ್‍ ಚಾಂಪಿಯನ್‍ ಆಗಿ ಹೊರಹೊಮ್ಮಿದೆ.

ಭಾರತ 9 ವಿಶ್ವಕಪ್‍ಗಳ ಪೈಕಿ 9 ಫೈನಲ್‍ ತಲುಪಿದ ಸಾಧನೆ ಮಾಡಿತ್ತು. ಬೆಂಗಳೂರಿನಲ್ಲಿ ಭಾನುವಾರ ನಡೆದ ಫೈನಲ್‍ನಲ್ಲಿ ಭಾರತ ತಂಡ 9 ವಿಕೆಟ್‍ಗಳಿಂದ ಪಾಕಿಸ್ತಾನ ತಂಡವನ್ನು ಸದೆಬಡಿಯಿತು.

ಪಾಕಿಸ್ತಾನ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‍ ಪ್ರವೇಶಿಸಿತ್ತು. ಭಾರತ ದೆಹಲಿ ಮತ್ತು ಕೋಲ್ಕತಾದ ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಲೀಗ್‍ ಪಂದ್ಯಗಳಲ್ಲಿ ಸೋಲುಂಡಿತ್ತು. ಆದರೆ ಫೈನಲ್‍ನಲ್ಲಿ ಪಾಕಿಸ್ತಾನ ಕನಸು ಭಗ್ನಗೊಳಿಸುವ ಮೂಲಕ ಒಂದೇ ಪಂದ್ಯದಲ್ಲಿ ಎರಡು ಪಂದ್ಯಗಳ ಸೋಲಿನ ಸೇಡು ತೀರಿಸಿಕೊಂಡಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲಲಿ ಮೊದಲು ಬ್ಯಾಟ್‍ ಮಾಡಿದ ಪಾಕಿಸ್ತಾನ ಬಾಬರ್‍ ಮುನೀರ್‍ ಅವರ ಅರ್ಧಶತಕದ ನೆರವಿನಿಂದ 9 ವಿಕೆಟ್‍ಗೆ 197 ರನ್‍ ಪೇರಿಸಿತು. ಬೃಹತ್‍ ಮೊತ್ತ ಬೆಂಬತ್ತಿದ ಭಾರತ ಕೇವಲ 1 ವಿಕೆಟ್‍ ಕಳೆದುಕೊಂಡು ಜಯಭೇರಿ ಬಾರಿಸಿತು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ 20 ಓವರ್‍ 8 ವಿಕೆಟ್‍ 197 (ಬಾಬರ್‍ 57, ಕೇತಾನ್‍ 29/2, ಜಾಫರ್‍ ಇಕ್ಬಾಲ್ 33/2). ಭಾರತ 17.4 ಓವರ್‍ 1 ವಿಕೆಟ್‍ 200 (ಪ್ರಕಾಶ್ ಜಯರಾಮಯ್ಯ ಅಜೇಯ 99, ಅಜಯ್‍ ಕುಮಾರ್ ರೆಡ್ಡಿ 43).