ಮಾನವನ ಉಳಿವಿಗಾಗಿ ಹೋಂಡ ಕೆರೆಗಳನ್ನು ಉಳಿಸಿ ಬೆಳೆಸಲೇಬೇಕು!!

0
987

ಕೃಷಿ ಹೊಂಡಗಳ ಅನಿವಾರ್ಯತೆ …!

ಇಂತಹ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಕೃಷಿ ಹೊಂಡಗಳ ನಿರ್ಮಾಣ ತೀರಾ ಅನಿವಾರ್ಯವಾಗಿದೆ. ಆದ್ದರಿಂದಲೇ ನಾನು ನಿವೃತ್ತಿ ಜೀವನದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು ಕೃಷಿಯಲ್ಲಿ ನೆಮ್ಮದಿ ಜೀವನ ಕಾಣುತ್ತಿದ್ದೇನೆ ಎನ್ನುತ್ತಾರೆ ಆರ್. ಪುಟ್ಟರಂಗಯ್ಯ. ತುಮಕೂರು ನಗರದ ಕೂಗಳತೆಯಲ್ಲಿರುವ ಸತ್ಯಮಂಗಲಕ್ಕೆ ಪಕ್ಕದಲ್ಲಿರುವ ನವಿಲಹಳ್ಳಿ ಒಂದು ಕಾಲದಲ್ಲಿ ಕಾಡಿನ ಪರಿಸರ ಹೊಂದಿತ್ತು. ನಗರದ ಎಲ್ಲ ಚಾಳಿ ಅಂಟಿಕೊಂಡ ನಂತರ ಕಾಡು ಮಾಯವಾಗಿ, ನೀರಿಗೂ ತತ್ವಾರ ಬಂದಿತು. ಆ ವೇಳೆಗೆ ಮುಖ್ಯ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದೆ. ಕೃಷಿ ಕುಟುಂಬದ ನಾನು ನಿವೃತ್ತಿ ನಂತರ ಬೇಸಾಯಕ್ಕಿಳಿದೆ. ಐದು ಎಕರೆ ಜಮೀನಿನಲ್ಲಿ ಬೇಸಾಯ ಮಾಡಲು ನೀರಿಲ್ಲ.

Representational Image

ಕಣ್ಣಾಮುಚ್ಚಾಲೆಯಾಡುವ ಮಳೆ ನಂಬಿ ರೈತರು ಸಾಕಷ್ಟು ನಷ್ಟಕ್ಕೀಡಾಗುತ್ತಿದ್ದಾರೆ. ಏನು ಮಾಡುವುದು ಎಂದು ಚಿಂತಿಸುತ್ತಿದ್ದೆ. ಆಗ ಕೃಷಿಹೊಂಡದ ಬಗ್ಗೆ ಇಲಾಖೆ ಅಧಿಕಾರಿಗಳು ಮಾಡುವ ಪ್ರಚಾರದ ಬಗ್ಗೆ ಇನ್ನಷ್ಠು ಮಾಹಿತಿ ತಿಳಿಯಲು ತಾಲೂಕು ಕೃಷಿ ಸಹಾಯಕ ನಿರ್ದೇಶಕರನ್ನು ಭೇಟಿಯಾದೆ. ಅವರು ನೀಡಿದ ಸಲಹೆಯಂತೆ ಕೃಷಿಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಿಸಿದೆ. ಮಳೆ ನೀರು ತುಂಬಿತು. ಅಲ್ಲಿಂದ ನನ್ನ ಕೃಷಿ ಬದುಕು ಬದಲಿಸಿತು ಎಂದು ಎದೆಯುಬ್ಬಿಸಿ ಹೇಳುತ್ತಾರೆ ಆರ್. ಪುಟ್ಟರಂಗಯ್ಯ..

Representational Image

ಮಳೆಯಾಶ್ರಿತ ಜಮೀನಿನ ಒಂದು ಹೆಕ್ಟೇರ್ ಪ್ರದೇಶದಲ್ಲಿ ಕಂದಕ ಬದು, 10*10*3 ಅಡಿ ಉದ್ದಗಲ, ಆಳದ ಕೃಷಿ ಹೊಂಡ ನಿರ್ಮಿಸಿರುವ ಅವರು ಹೊಂಡಕ್ಕೆ ಡೀಸೆಲ್ ಎಂಜಿನ್ ಅಳವಡಿಸಿಕೊಂಡಿದ್ದಾರೆ. ಹೊಂಡ ಮಳೆ ನೀರಿನಿಂದ ತುಂಬಿಕೊಳ್ಳುವುದರಿಂದ ನೀರು ಪೋಲಾಗದಂತೆ ಹೊಂಡದ ತುಂಬ ಪಾಲಿಥಿನ್ ಹಾಳೆಯನ್ನು ಹಾಸಬೇಕು. ಆದ್ದರಿಂದ ವಾರ್ಷಿಕ ಮಳೆ ನೀರು ಸುಮಾರು ಐದು ಲಕ್ಷ ಲೀಟರ್ ಸಂಗ್ರಹವಾಗುತ್ತದೆ. ಅಲ್ಲದೆ ಕಂದಕ, ಬದುಗಳೂ ಮಳೆ ನೀರು ಸಂರಕ್ಷಣೆ ಸರಪಳಿಗೆ ಅನುಕೂಲವಾಗುತ್ತವೆ. ಆದ್ದರಿಂದ ಎರಡು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಶಕ್ತಿಮಾನ್ ಮುಸುಕಿನ ಜೋಳಕ್ಕೆ ಮಳೆ ಕೊರತೆ ಆದಾಗ ಹೊಂಡದ ನೀರು ಆಶ್ರಯವಾಗಿ, ಉತ್ತಮ ಬೆಳೆ ಬಂದು ಕೈ ತುಂಬ ಹಣವೂ ಸಿಕ್ಕಿದೆ. ಬಿತ್ತಿದ ಬೆಳೆಗಳು ಉತ್ಕøಷ್ಠವಾಗಿ ಬಂದದ್ದರಿಂದ ನನ್ನಂತೆಯೇ ಇತರೆ ರೈತರು ಆಗಲಿ ಎಂದು ಕೃಷಿ ಇಲಾಖೆ ಅಧಿಕಾರಗಳ ಸಹಕಾರದೊಂದಿಗೆ ಬೆಳೆ ಕ್ಷೇತ್ರೋತ್ಸವವನ್ನು ಏರ್ಪಡಿಸಿ, ಸಹಪಾಠಿ ರೈತರಿಗೆ ಕೃಷಿಹೊಂಡದ ಅವಶ್ಯಕತೆಯನ್ನು ತಿಳಿಸಿಕೊಟ್ಟರು. ಕೃಷಿ ಹೊಂಡಗಳನ್ನು ಜಮೀನಿನ ಇಳಿಜಾರಿನಲ್ಲಿ ನಿರ್ಮಿಸಿಕೊಂಡರೆ ಮಳೆ ನೀರಿನಿಂದ ಫಲವತ್ತಾದ ಜಮೀನಿನ ಮಣ್ಣು ಕೊಚ್ಚಿ ಹೋಗದಂತೆ ತಡೆಯಬಹುದು. ಮಣ್ಣು ಸವಕಳಿ ತಪ್ಪಿಸಿದರೆ ಫಲವತ್ತತೆ ಜಮೀನಿನಲ್ಲೇ ಉಳಿದು, ಉತ್ಖøಷ್ಠ ಬೆಳೆ ಬೆಳೆಯಲು ಅನುಕೂಲವಾಗಲಿದೆ.

Representational Image

ಈ ಸಾಧನೆ ಕೇವಲ ಆರ್. ಪುಟ್ಟರಂಗಯ್ಯರದ್ದು ಮಾತ್ರವಲ್ಲ. ನೂರಾರು ರೈತರದ್ದೂ ಆಗಿದೆ. ಶಿರಾ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಲೋಕಮ್ಮ ಕೃಷಿ ಹೊಂಡವನ್ನು ನಿರ್ಮಿಸಿಕೊಂಡು ಬೆಳೆಗಳಿಗೆ ಅವಶ್ಯಕವಾದಾಗ ನೀರನ್ನು ಹರಿಸಿಕೊಂಡು ಕೃಷಿ ಬದುಕಿನಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ತೋಟಗಾರಿಕೆ ಬೆಳೆಗಳನ್ನೂ ಹಲವಾರು ರೈತರು ಬೆಳೆದು ಲಾಭ ಪಡೆಯುತ್ತಿದ್ದಾರೆ. ಇನ್ನೂ ಕೆಲ ರೈತರು ಹೊಂಡದ ನೀರನ್ನು ಹನಿ ನೀರಾವರಿ ಪದ್ಧತಿಗೂ ಅಳವಡಿಸಿಕೊಂಡಿದ್ದಾರೆ. ಇಂತಹ ಹಲವಾರು ವಿಧಾನಗಳ ಮೂಲಕ ಬಯಲು ಸೀಮೆಗಳಲ್ಲಿ ಬರಗಾಲವನ್ನು ಅಟ್ಟಿ, ಸಮೃದ್ಧ ಬೆಳೆ ಬೆಳೆದುಕೊಳ್ಳುವಲ್ಲಿ ನೂರಾರು ರೈತರು ಯಶಸ್ಸಿನ ಪಟ್ಟಿ ಸೇರುತ್ತಿದ್ದಾರೆ.