ಭಾರತೀಯ ಸೇನಾ ವಿಭಾಗದ ಧಾರ್ಮಿಕ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ.!

0
170

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತೀಯ ಸೇನಾ ವಿಭಾಗದ ಧಾರ್ಮಿಕ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಒಟ್ಟು 152 ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ www.joinindianarmy.nic.in ಮೂಲಕ ಅಕ್ಟೋಬರ್ 29/ 2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ಕೇಂದ್ರ ಲೋಕ ಸೇವಾ ಆಯೋಗ 102 ಕಂಬೈನ್ಡ್ ಜಿಯೋ ಸೈಂಟಿಸ್ಟ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ.!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು: ಧಾರ್ಮಿಕ ಶಿಕ್ಷಕರು

ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹುದ್ದೆಗಳ ವಿಂಗಡಣೆ:

ಪಂಡಿತ್ – 118 ಹುದ್ದೆಗಳು
ಪಂಡಿತ್ (ಗೂರ್ಖಾ) – 7 ಹುದ್ದೆಗಳು
ಗ್ರಂಥಿ – 9 ಹುದ್ದೆಗಳು
ಮೌಲ್ವಿ (ಸುನ್ನಿ) – 9 ಹುದ್ದೆಗಳು
ಮೌಲ್ವಿ (ಶಿಯಾ) – 1 ಪೋಸ್ಟ್ (ಲಡಾಖ್‌ಗೆ)
ಪಾಸ್ಟರ್ – 4 ಹುದ್ದೆಗಳು
ಬೌದ್ಧ ಸನ್ಯಾಸಿ (ಮಹಾಯಾನ) – 4 ಹುದ್ದೆಗಳು (ಲಡಾಖ್‌ಗೆ)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ – ಸೆಪ್ಟೆಂಬರ್ 30
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 29 ಅಕ್ಟೋಬರ್
ಪರೀಕ್ಷೆ ದಿನಾಂಕ: 23 ಫೆಬ್ರವರಿ 2020

ಹೆಚ್ಚಿನ ಮಾಹಿತಿಗಾಗಿ: www.joinindianarmy.nic.in ಕ್ಲಿಕ್ ಮಾಡಿ.