ಪಿಯುಸಿ ಓದಿದ ಮಹಿಳೆಯರಿಗೆ ಭಾರತೀಯ ಸೇನೆಯಲ್ಲಿ ನರ್ಸಿಂಗ್​ ಸರ್ವಿಸ್​ ವಿಭಾಗದಲ್ಲಿ ನೇಮಕಾತಿ ಪ್ರಕಟಣೆ.!

0
379

ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಸುವರ್ಣಾವಕಾಶ. ಮಿಲಿಟರಿ ನರ್ಸಿಂಗ್​ ಸರ್ವಿಸ್​ ವಿಭಾಗದಲ್ಲಿ ಬಿಎಸ್ಸಿ ಕೋರ್ಸ್​ಗೆ ಅರ್ಹ ಮತ್ತು ಆಸಕ್ತ ಯುವತಿಯರಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು 220 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಿಲಿಟರಿ ಸಶಸ್ತ್ರ ಪಡೆಗಳ ಆಸ್ಪತ್ರೆಯಲ್ಲಿ ಟೈನಿಂಗ್​​ ನೀಡಲಾಗುತ್ತದೆ. 4 ವರ್ಷ ಪೂರ್ಣಗೊಂಡ ನಂತರ, ಅಭ್ಯರ್ಥಿಯನ್ನು ಖಾಯಂಗೊಳಿಸಲಾಗುತ್ತದೆ. ಒಟ್ಟು ಹುದ್ದೆಗಳ ಪೈಕಿ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ 40 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 2, 2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಡೆಪ್ಯುಟಿ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು: ಮಿಲಿಟರಿ ನರ್ಸಿಂಗ್​ ಸರ್ವಿಸ್​

ವಯೋಮಿತಿ: 1995 ಅಕ್ಟೋಬರ್ 1 ಮತ್ತು 2003 ಸೆಪ್ಟೆಂಬರ್ 30 ರ ನಡುವೆ ಜನಿಸಿದ ಯುವತಿಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅಂದರೆ 24 ವರ್ಷ ವಯೋಮಿತಿ ಮೀರಿರಬಾರದು.

ಅರ್ಹತೆ: ಅಭ್ಯರ್ಥಿಗಳು ವಿಜ್ಞಾನ ವಿಷಯದಲ್ಲಿ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿರುವವರು ಅಪ್ಲಿಕೇಶನ್ ಸಲ್ಲಿಸಬಹುದು. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡಿರಬೇಕು. ಶೇ.55 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಪ್ರಸ್ತುತ ಪಿಯುಸಿ ಅಧ್ಯಯನ ಮಾಡುತ್ತಿರುವ ಯುವತಿಯರು ಸಹ ಅರ್ಜಿ ಸಲ್ಲಿಸಬಹುದು. ಯುವತಿಯರು ಕನಿಷ್ಠ 148 ಸೆಂ.ಮೀ ಎತ್ತರ ಇರಬೇಕು.

ನೇಮಕಾತಿ ಪ್ರಕ್ರಿಯೇ: ಅಭ್ಯರ್ಥಿಗಳಿಗೆ 2020 ರ ಏಪ್ರಿಲ್‌ನಲ್ಲಿ ಆನ್‌ಲೈನ್‌ ಸಿಬಿಟಿ ಪರೀಕ್ಷೆ ನಡೆಸಲಾಗುತ್ತದೆ. ಸಂದರ್ಶನ, ದೇಹದಾಡ್ಯತೆ ಪರೀಕ್ಷೆಗಳನ್ನು ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಡಿಸೆಂಬರ್ 2, 2019

ಹೆಚ್ಚಿನ ಮಾಹಿತಿಗಾಗಿ: http://www.joinindianarmy.nic.in ಕ್ಲಿಕ್ ಮಾಡಿ.