ಭಾರತೀಯ ಸೇನಾ ನೇಮಕಾತಿ: ವಿವಿಧ ವಿಭಾಗಗಳ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
107

ದೇಶ ಸೇವೆ ಮಾಡಲು ಕಾತುರದಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತೀಯ ಸೇನೆ 108 ಎಂಟಿಎಸ್,ಜ್ಯೂನಿಯರ್ ಆಫೀಸರ್ ಅಸಿಸ್ಟೆಂಟ್, ಫೈರ್‌ಮೆನ್ ಮತ್ತು ಟ್ರೇಡ್ಸ್‌ಮೆನ್ ಮೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 2,2020ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ಕ್ಷೇತ್ರ ಮೇಲ್ವಿಚಾರಕ ಮತ್ತು ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ.!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಎಂಟಿಎಸ್, ಜ್ಯೂನಿಯರ್ ಆಫೀಸರ್ ಅಸಿಸ್ಟೆಂಟ್, ಫೈರ್‌ಮೆನ್ ಮತ್ತು ಟ್ರೇಡ್ಸ್‌ಮೆನ್ ಮೇಟ್

ಸಂಸ್ಥೆ (Organisation): ಭಾರತೀಯ ಸೇನೆ

ಅರ್ಹತೆ (Qualification): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ 10ನೇ ತರಗತಿ/ಮೆಟ್ರಿಕ್ಯುಲೇಶನ್; ದ್ವಿತೀಯ ಪಿಯುಸಿ/ಇಂಟರ್‌ಮೀಡಿಯೇಟ್ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತಯನ್ನು ಹೊಂದಿರಬೇಕು.

ವಯೋಮಿತಿ: ಈ ಹುದ್ದೆಗಳಿಗೆ ಕನಿಷ್ಟ 18 ರಿಂದ ಗರಿಷ್ಟ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ: ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ/ಕೌಶಲ್ಯ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ http://joinindianarmy.nic.in/Authentication.aspx ಗೆ ಭೇಟಿ ನೀಡಿ. ಅಧಿಸೂಚನೆಯಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಛೇರಿಯ ವಿಳಾಸಕ್ಕೆ ಜನವರಿ 2,2020ರೊಳಗೆ ಪೋಸ್ಟ್ ಮೂಲಕ ತಲುಪಿಸಬೇಕಿರುತ್ತದೆ. ಅರ್ಜಿ ಸಲ್ಲಿಸುವಾಗ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸಲು ಮರೆಯದಿರಿ.

ಕಛೇರಿಯ ವಿಳಾಸ:
“ಕಮಾಂಡೆಂಟ್ 23 ಫೀಲ್ಡ್ ಮದ್ದುಗುಂಡು ಡಿಪೋ, ಸಿ / ಒ 56 ಎಪಿಒ” ಪಿನ್ -909723.

ಹೆಚ್ಚಿನ ಮಾಹಿತಿಗಾಗಿ: ಇಲ್ಲಿ ಕ್ಲಿಕ್ಕ್ ಮಾಡಿ.