SSLC ಪಾಸಾದ ಅಭ್ಯರ್ಥಿಗಳಿಗೆ ಭಾರತೀಯ ಸೇನೆ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
648

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತೀಯ ಸೇನೆ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸಲಿದೆ. 100 ಹುದ್ದೆಗಳಿದ್ದು ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

Also read: ಮುಕ್ತ ವಿದ್ಯಾಲಯದಲ್ಲಿ ಗ್ರೂಪ್‌ ಎ,ಬಿ,ಸಿ ಹುದ್ದೆಗಳ ನೇಮಕ: ಅರ್ಜಿಗೆ ಮೇ.17 ಕೊನೆ ದಿನ

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಸೋಲ್ಜರ್ ಜನರಲ್ ಡ್ಯೂಟಿ

ಸಂಸ್ಥೆ (Organisation): ಭಾರತೀಯ ಸೇನೆ

ಅರ್ಹತೆ (Qualification): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 45 ರಷ್ಟು ಅಂಕ ಪಡೆದು ಉತ್ತೀರ್ಣರಾಗಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ. 33 ರಷ್ಟು ಅಂಕಗಳನ್ನು ಗಳಿಸಿರಬೇಕು.

ವಯೋಮಿತಿ: ಮಹಿಳಾ ಅಭ್ಯರ್ಥಿಗಳಿಗೆ 17 ರಿಂದ 21 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. (1998ರ ಅಕ್ಟೋಬರ್ 1 ರಿಂದ 2002ರ ಏಪ್ರಿಲ್ 1ರ ನಡುವೆ ಜನಿಸಿರಬೇಕು). ಕನಿಷ್ಠ 142 ಸೆಂ.ಮೀ. ಎತ್ತರ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ: ಸೇನಾ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಕಡ್ಡಾಯವಾಗಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ. ಅಂಬಾಲಾ, ಲಕ್ನೋ, ಜಬಲಪೂರ್, ಬೆಂಗಳೂರು ಹಾಗೂ ಶಿಲ್ಲಾಂಗ್ಗಿಳಲ್ಲಿ ನೇಮಕಾತಿ ನಡೆಯಲಿದೆ.

ಆಸಕ್ತ ಮಹಿಳಾ ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಏಪ್ರಿಲ್ 25 ರಿಂದ ಜೂನ್ 8ರ ತನಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನೇಮಕಾತಿ ಸ್ಥಳ, ದಿನಾಂಕ, ವಿವರಗಳನ್ನು ಅಭ್ಯರ್ಥಿಗಳ ಇ-ಮೇಲ್‌ಗೆ ಕಳಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: http://joinindianarmy.nic.in/Alpha/soldier-general-duty-all-arms.htm ಹೋಗಿ ಚೆಕ್ ಮಾಡಿ.