ಭಾರತೀಯ ಸೇನಾ ನೇಮಕಾತಿ: ವಿವಿಧ ವಿಭಾಗಗಳ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
1217

ದೇಶ ಸೇವೆ ಮಾಡಲು ಕಾತುರದಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತೀಯ ಸೇನೆಯು ವಿವಿಧ ವಿಭಾಗಗಳಲ್ಲಿ ಕಾಲಿ ಇರುವ ಎಸ್​ಎಸ್​ಸಿ ಟೆಕ್ನಿಕಲ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಅವಿವಾಹಿತ ಪುರುಷರು ಮತ್ತು ಅವಿವಾಹಿತ ಮಹಿಳಾ ಅಭ್ಯರ್ಥಿಗಳು ಹಾಗೂ ವಿಧವೆಯರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 21, 2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ಕರ್ನಾಟಕ ಲೋಕಸೇವಾ ಆಯೋಗ 713 ಪ್ರಥಮ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು: ಎಸ್​ಎಸ್​ಸಿ ಟೆಕ್ನಿಕಲ್ ಆಫೀಸರ್

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರು ಪದವಿ ಅಥವಾ ಬಿ.ಇ/ಬಿಟೆಕ್ ಪ್ರಮಾಣ ಪತ್ರ ಹೊಂದಿರಬೇಕು.

ಒಟ್ಟು ಹುದ್ದೆಗಳು: 175 (ಪುರುಷ ಅಭ್ಯರ್ಥಿಗಳು) 14 (ಮಹಿಳಾ ಅಭ್ಯರ್ಥಿಗಳು) 2 (ಇತರೆ)

ವಯೋಮಿತಿ: ಅರ್ಜಿದಾರರ ವಯಸ್ಸು ಅಕ್ಟೋಬರ್ 1, 2019 ಕ್ಕೆ 20 ರಿಂದ 27 ವರ್ಷದೊಳಗಿರಬೇಕಾಗುತ್ತದೆ.

ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100 ರಿಂದ 1,77,500 ರವರೆಗೆ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ: https://joinindianarmy.nic.in/alpha/bangalore-history-of-ssb-centre.htm

ಹೆಚ್ಚಿನ ಮಾಹಿತಿಗಾಗಿ: http://www.freejobalert.com/wp-content/uploads/2019/01/Notification-Indian-Army-53-SSC-Men-24-SSC-Women-Posts.pdf ಕ್ಲಿಕ್ ಮಾಡಿ