ರಾಜಸ್ತಾನ ಮತ್ತು ಪಂಜಾಬ್ ರಾಜ್ಯಗಳ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಯುದ್ದದ ವಾತಾವರಣ ಕಂಡು ಬರುತಿದ್ಯ?? ಮತ್ತೆ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಯುದ್ಧದ ಕರಿನೆರಳು ಬೀಳುತಿದ್ಯ??

0
535

ಗಡಿಯಲ್ಲಿ ಮತ್ತೆ ಯುದ್ದದ ಮುನ್ಸೂಚನೆ ಕಂಡು ಬರುತ್ತಿದ್ದು ರಾಜಸ್ತಾನ ಮತ್ತು ಪಂಜಾಬ್ ರಾಜ್ಯಗಳ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಯುದ್ದದ ವಾತಾವರಣ ಕಂಡು ಬರುತಿದ್ದೆ. ಈ ಹಿನ್ನೆಲೆಯಲ್ಲಿ ಬಾರಿ ಸಂಖ್ಯೆಯಲ್ಲಿ ಸೈನಿಕರನ್ನು ಒಟ್ಟುಗೂಡಿಸಲಾಗುತ್ತಿದೆ. ಅದರಂತೆ ಯುದ್ದಕ್ಕೆ ಬೇಕಾದ ಸಮರಾಸ್ತ್ರಗಳು ಭಾರೀ ಸಂಖ್ಯೆಯಲ್ಲಿ ಈ ಪ್ರದೇಶಗಳಲ್ಲಿ ತಯಾರಿಯಲ್ಲಿ ಇಡಲಾಗಿದೆ. ಯಾವ ಸಮಯದಲ್ಲಾದರು ಪಾಪಿಸ್ತಾನದಿಂದ ದಾಳಿ ಎದುರಾಗುವ ಸೂಚನೆ ಇರುವ ಕಾರಣ ಭಾರತೀಯ ಯೋಧರು ತಯಾರಿಯಲ್ಲಿದ್ದಾರೆ. ಎನ್ನುವ ವಿಷಯ ಕೇಳಿಬರುತ್ತಿದೆ.

Also read: ಭಾರತ -ಪಾಕ್ ಸೈನೆ ಎಷ್ಟು ಬಲಿಷ್ಠವಾಗಿವೆ ಗೊತ್ತ? ಭಾರತ ಹೊಂದಿರುವ ಯುದ್ದದ ಬತ್ತಳಿಕೆಯ ಮುಂದೆ ಪಾಕ್ ಕೂದಲ ಸಮವಂತೆ..

ಹೌದು ಪುಲ್ವಾಮಾ ದಾಳಿಯ ಬಳಿಕ ಪಾಕ್ ಮತ್ತು ಭಾರತದ ನಡುವೆ ಯುದ್ದದ ವಾತಾವರಣ ನಿರ್ಮಾಣವಾಗಿತ್ತು. ಅದರಂತೆ ಪಾಕಿಸ್ತಾನದ ಹಲವು ಉಗ್ರರನ್ನು ಕೂಡ ಭಾರತದ ಸೇನೆ ಕೊಂದುಹಾಕುವಲ್ಲಿ ಯಶಸ್ವಿಯಾಗಿದೇ. ಇದೆಲ್ಲದರ ಹಿಂದೆ ಪ್ರತಿದಿನವೂ ಉಗ್ರರನ್ನು ಭಾರತಿಯ ಯೋಧರು ಕೊಂದು ಹಾಕುತ್ತಿದ್ದಾರೆ. ಈ ಜಯವನ್ನು ಸಹಿಸದ ಪಾಕಿಸ್ತಾನ ರಾಜಸ್ತಾನ ಮತ್ತು ಪಂಜಾಬ್ ರಾಜ್ಯಗಳ ಅಂತಾರಾಷ್ಟ್ರೀಯ ಗಡಿಯಲ್ಲಿ ದಾಳಿ ಮಾಡುವ ಸೂಚನೆ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅದಕ್ಕಾಗಿ ರಾಜಸ್ತಾನದ ಅಬೊಹರ್ ಹಾಗೂ ಪಂಜಾಬ್‍ನ ಬಿಕನೇರ್ ಮತ್ತು ಬರ್ಮರ್ ಪ್ರದೇಶಗಳ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಸೇನೆ ಮಿಲಿಟರಿ ಟ್ಯಾಂಕುಗಳು ಮತ್ತಿತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕ್ರೋಢೀಕರಿಸಿ ಸೇನೆಯನ್ನು ಅಧಿಕ ಸಂಖ್ಯೆಯಲ್ಲಿ ನಿಯೋಜಿಸಿದೆ.

ಯುದ್ಧ ಟ್ಯಾಂಕ್‍, ಗನ್‍ಗಳ ರವಾನೆ

Also read: ಉಗ್ರರನ್ನು ಸುಟ್ಟು ಹಾಕಲು ಮೀರಜ್​-2000 ಫೈಟರ್​​ ಯುದ್ದ ವಿಮಾನ ಬಳಸಿದ್ದು ಯಾಕೆ ಗೊತ್ತಾ?

ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಝಾನ್ಸಿ ಮತ್ತು ಕಾನ್ಪುರದಿಂದ ಯುದ್ಧ ಟ್ಯಾಂಕ್‍ಗಳು ಮತ್ತು ಆರ್ಟಿಲರಿ ಗನ್‍ಗಳನ್ನು ಕಳೆದ ಎರಡು ದಿನಗಳಿಂದ ಮುಂಚೂಣಿ ನೆಲೆಗಳತ್ತ ರವಾನಿಸಲಾಗುತ್ತಿದೆ. ಪಾಕಿಸ್ತಾನವು ತನ್ನ ಗಡಿ ಪ್ರದೇಶದ ಗ್ರಾಮಗಳಿಂದ ಜನರನ್ನು ತೆರವುಗೊಳಿಸಿ ಇಂಡೋ-ಪಾಕ್ ಪ್ರದೇಶದಲ್ಲಿ ಭಾರೀ ಸಂಖ್ಯೆಯ ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸುತ್ತಿದೆ ಎಂಬ ವರದಿಗಳ ನ್ನೆಲೆಯಲ್ಲಿ ಭಾರತೀಯ ಸೇನೆ ಮುನ್ನೆಚ್ಚರಿಕೆ ಕ್ರಮವಾಗಿ ಸೇನೆ ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸೂಕ್ಷ್ಮ ಪ್ರದೇಶಗಳಲ್ಲಿ ಪಾಕ್ ಸೇನೆ

ಕಣಿವೆ ರಾಜ್ಯ ಕಾಶ್ಮೀರದ ಪುಲ್ಮಾಮಾ ದಲ್ಲಿ ಫೆ.14ರಂದು ಭಯೋತ್ಪಾದಕರು ದಾಳಿ ನಡೆಸಿ 40ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರ ನರಮೇದ ನಡೆಸಿದ್ದರು. ಅದಾದ 12 ದಿನಗಳ ಬಳಿಕ ಫೆ.24ರಂದು ಭಾರತೀಯ ವಾಯು ಪಡೆದ ಮಾಣಗಳು ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ಪ್ರದೇಶಕ್ಕೆ ನುಗ್ಗೆ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿ 250ಕ್ಕೂ ಹೆಚ್ಚು ಭಯೋತ್ಪಾದಕರನ್ನು ಸದೆ ಬಡಿದಿದ್ದವು. ಆದ ಕಾರಣಕ್ಕೆ ಪಾಕಿಸ್ತಾನವು ಅಮೃತಸರ ಮತ್ತು ಸಂಬಾ ವಲಯಗಳಲ್ಲಿನ ಸೂಕ್ಷ್ಮ ಪ್ರದೇಶಗಳ ಬಳಿ ತನ್ನ ಸೇನೆಯನ್ನು ಅಧಿಕ ಸಂಖ್ಯೆಯಲ್ಲಿ ನಿಯೋಜಿಸಿರುವ ಹಿನ್ನೆಲೆಯಲ್ಲಿ ಭಾರತವೂ ಸಹ ಅದೇ ರೀತಿ ಕ್ರಮ ಅನುಸರಿಸಿದೆ.

ಉಗ್ರರ ಬಳಿ ಪಾಕ್ ಸೇನೆಯ

Also read: ಮತ್ತೆ ಭಾರತದ ತಂಟೆಗೆ ಹೋದ್ರೆ ಪರಿಣಾಮ ನೆಟ್ಟಗಿರಲ್ಲ; ಪಾಕಿಸ್ತಾನಕ್ಕೆ ಅಮೆರಿಕದಿಂದ ಮತ್ತೊಂದು ಎಚ್ಚರಿಕೆ..

ಭಾರತ ಗಡಿಯಲ್ಲಿ ಉಗ್ರರು ನಡೆಸುತ್ತಿರುವ ದಾಳಿಗೆ ಪಾಕ್ ಸೇನೆ ನೆರವನ್ನು ನೀಡುತ್ತಿದೆ ಎಂಬುವುದಕ್ಕೆ ಪುರಾವೆ ದೊರೆತಿದೆ. ಶುಕ್ರವಾರ ಬದ್ಗಾಮ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಭದ್ರತಾಪಡೆ ಜೈಶ್-ಎ- ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದು, ಒರ್ವನನ್ನು ಬಂಧಿಸಿದೆ. ಈ ವೇಳೆ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳಲ್ಲಿ ಪಾಕಿಸ್ತಾನ ಸೇನೆಯ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ರೈಫಲ್ ಕೂಡಾ ಪತ್ತೆಯಾಗಿದೆ. ಇದರಿಂದ ಪಾಕ್ ಸೈನ್ಯವೇ ನೇರವಾಗಿ ಈ ರೈಫಲ್‍ಗಳನ್ನು ಉಗ್ರರಿಗೆ ನೀಡಿರುವುದಕ್ಕೆ ಇದು ಸಾಕ್ಷಿಯಾಗಿದೆ.