ಮಸೀದಿಯ ಮೇಲೆ ರಾರಾಜಿಸಿದ ನಮ್ಮ ಹೆಮ್ಮೆಯ ತಿರಂಗ ಬಾವುಟ ! ಧರ್ಮಕ್ಕಿಂತಲೂ ಮೇಲು ರಾಷ್ಟ್ರ ಪ್ರೇಮ!!

0
470

ಹಿಂದೂ ಮುಸ್ಲಿಂ ಎಂಬ ಭೇದಭಾವವಿರುವುದು ಕೇವಲ ದೇವಸ್ಥಾನಗಳಲ್ಲಿ, ಮತ್ತು ಕೆಲವೊಂದು ಹುಚ್ಚು ಜನರ ಯೋಚನೆ ಅಲ್ಲಿ ಮಾತ್ರ, ಅಂತಹ ಘಲಭೆ ಎಬ್ಬಿಸುವ ಹಿಂದೂ ಮುಸ್ಲಿಂ ಎಂಬ ಅಳುಕು “ಈ ದೇಶಪ್ರೇಮದಲ್ಲಿ ಕೊಚ್ಚವು ಇಲ್ಲ” ಈ ಧರ್ಮದ ಯುದ್ದ 72ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಿಂದ ಮುಕ್ತಾಯಗೊಳ್ಳಲಿ ಎಂಬ ಉದ್ದೇಶಹೊಂದಿ ತುಮಕೂರು ನಗರದ ಗೂಡ್ ಶೆಡ್ ಕಾಲೋನಿಯ ಜನರು ಮಸೀದಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿಯನ್ನು ಮೆರೆದು ನಂತರ ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ ಗೀತೆಯನ್ನು ಹಾಡಿ. ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇದರ ಹಿಂದಿರುವ ಉದ್ದೇಶ ಏನೆಂದರೆ: ದೇಶದ್ರೋಹ ಕೆಲಸವನ್ನು ಮಾಡುವುದು ಮುಸ್ಲಿಂ ಜನಾಂಗದವರು ಎಂಬ ಮಾತು ದೇಶದ ಜನರಲ್ಲಿ ಮೂಡಿದೆ ಯಾಕೆಂದರೆ ಕೆಲವೊಂದು ಮಹಾನ್ ದೇಶದ್ರೋಹ ಕೆಲಸದಲ್ಲಿ ಭಾಗಿಯಾಗಿ ನೂರಾರು ಜನರ ಸಾವಿಗೆ ಕಾರಣವಾಗಿ ಜೈಲು ಶಿಕ್ಷೆಗೆ ಗುರಿಯಾದ ಕೆಲವೊಂದು ಪಾಪಿಗಳಿಂದ ಮುಸ್ಲಿಂ ಜನಾಂಗಕ್ಕೆ ಕೆಟ್ಟ ಹೆಸರು ಬಂದಿತ್ತು, ಹೀಗೆ ಎಷ್ಟೋ ಸೈನಿಕರು ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗಮಾಡಿ ವೀರಮರಣ ಹೊಂದಿದ ನಾಯಕರಲ್ಲಿ ಮುಸ್ಲಿಂರು ಇರುವುದು ಜನರಿಗೆ ಗೊತ್ತುಇದ್ರೂ ಈ ಜನಾಂಗಕ್ಕೆ ದ್ವೇಷಮಾಡುವುದು ಬಿಟ್ಟಿರಲಿಲ್ಲ.

ಇದೆ ವಿಷಯಕ್ಕೆ ಅಣ್ಣ-ತಮ್ಮಂದಿರ ಹಾಗೆ ಇದ ಹಿಂದೂ,ಮುಸ್ಲಿಂ ನಾವ್ಮೇಲು-ತಾವ್ಮೇಲು ಎಂದು ದೇಶದ ತುಬೆಲ್ಲ ಕಿತ್ತಾಟ ನೇಡಿತ್ತಾನೆ ಇವೆ, ಇದರಹಿಂದೆ ಸಾವಿರಾರು ಜೀವಗಳು ಬಲಿಯಾಗಿ ರಕ್ತಪಾತವೇ ಹರಿದು ಪೊಲೀಸ್ರಿಂದ ಲಾಟಿಏಟು ತಿಂದು ಕೋರ್ಟ್ನಲ್ಲಿ ಇನ್ನೂ ದಾವೇ ನೆಡೆಯಿತ್ತಿರುವ ಪ್ರಕರಣ ಎಲ್ಲರಿಗೂ ಗೊತ್ತುಇರುವುದೇ.

ಇದರ ವಿರುದ್ದ ಕೆಲವೊಂದು ಮುಸ್ಲಿಂ ನಾಯಕರು ಎಷ್ಟೇ ಹೋರಾಡಿದರು ಯಾವುದೇ ಫಲಸಿಗಲಿಲ್ಲ ಇದನ್ನು ತಿಳಿದ ತುಮಕೂರಿನ ಮುಸ್ಲಿಂ ಬಾಂಧವರು ಯೋಚನೆ ಮಾಡಿ ತಮ್ಮಲಿರುವ ದೇಶಪ್ರೆಮವನ್ನು ತೋರಿಸಲು ಮಸೀದಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿಯನ್ನು ನಾಡಿನ ಜನರಿಗೆ ತೋರಿಸಿದ್ದಾರೆ. ಮಸೀದಿಯ ಮೇಲೆನೆ ಧ್ವಜವನ್ನು ಹಾರಿಸಿದು ಯಾಕೇಂದ್ರೆ: ಮುಸ್ಲಿಂರಿಗೆ ‘ಅಲ್ಲಾ” ಒಬ್ಬನೇ ದೇವರು ಅಲ್ಲಾ ಬಿಟ್ರೆ ಜೀವನವೇ ಇಲ್ಲ ಎಂದು ಬದುಕುವವರು ಅಂತಹ ಅಲ್ಲಾನ ಮಸಿದೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದರೆ ಅಲ್ಲಾನಷ್ಟೇ ಭಕ್ತಿ ದೇಶದ ಮೇಲಿದೆ ಎಂಬುವುದು ದೇಶದ ಜನರಿಗೆ ತಿಳಿಯಲಿ 72 ರ ಸ್ವಾತಂತ್ರ್ಯ ದಿನಾಚರಣೆಯಿಂದ ಹಿಂದೂ ಮುಸ್ಲಿಂ ಎಲ್ಲರೂ ಒಂದ್ದಾಗಿ ಬಾಳಿ ದೇಶದ ಅಭಿವೃಧಿಗೆ ಶ್ರಮಿಸೋಣ ಎಂಬ ಸಂದೇಶವನ್ನು ಸಾರಿದ್ದಾರೆ.