ಅಮೆರಿಕಾದ ಯುವತಿಯೊಬ್ಬಳು ಕನ್ನಡಿಗನ್ನನ್ನು ಭಾರತೀಯ ಸಂಪ್ರದಾಯದಂತೆ ಮದುವೆಯಾಗಿ ಎಲ್ಲರಿಗು ಅಚ್ಚರಿ ಮೂಡಿಸಿದ್ದಾಳೆ…

0
693

ಭಾರತೀಯ ನೆಲ, ಸಂಸ್ಕೃತಿ, ಭಾಷೆ, ಆಹಾರ ಪದ್ಧತಿ, ಕಲೆಗೆ ಮಾರುಹೋಗದವರೇ ಇಲ್ಲ, ದೇಶ-ವಿದೇಶಗಳಿಂದ ಪ್ರವಾಸಿಗರಾಗಿ ಬಂದ ವಿದೇಶಿಗರು ನಮ್ಮ ದೇಶವನ್ನು ಇಷ್ಟವನ್ನು ಇಲ್ಲಿಯೇ ಉಳಿದುಕೊಂಡ ಸಾಕಷ್ಟು ಉದಾಹರೆಣೆಗಳಿವೆ. ಈಗ ಅಮೆರಿಕಾದ ಯುವತಿ ಒಬ್ಬಳು ಇವೆಲ್ಲ ಮೀರಿ ಇನ್ನೊಂದು ಕುತೂಹಲಕರ ಸಂಗತಿಯನ್ನು ಮಾಡಿದ್ದಾಳೆ ಏನದು ನೀವೇ ನೋಡಿ.

ಅಮೆರಿಕದ ನ್ಯೂಜೆರ್ಸಿಯಲ್ಲಿ ವಿಜ್ಞಾನಿಯಾಗಿರುವ ಟಾರಾ ಹಾಗೂ ಬೆಂಗಳೂರಿನ ಡಾ. ಅಜಯ್ ತುಮಕೂರು ಜಿಲ್ಲೆಯ ತೋವಿನಕೆರೆ ಸಮೀಪದ ಉಪ್ಪಾರಪಾಳ್ಯದ ತೋಟದಲ್ಲಿ, ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ, ಅಮೆರಿಕ ಯುವತಿಯೊಬ್ಬರು ಕನ್ನಡದ ಹುಡುಗನ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿರುವುದು ಈಗ ಎಲ್ಲರ ಗಮನ ಸೆಳೆದಿದೆ.

ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವಾಗ ಡಾ.ಅಜಯ್ ಅವರಿಗೆ ಟಾರಾ ಅವರ ಪರಿಚಯವಾಗಿದೆ ನಂತರ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ, ಟಾರಾ ಭಾರತೀಯ ಸಂಪ್ರದಾಯದಂತೆ ಮದುವೆಯಾಗುವ ಆಸೆಯನ್ನು ಅಜಯ್-ಗೆ ಹೇಳಿದ್ದಾಳೆ ಅಜಯ್ ಟಾರಾ ಆಸೆಯಂತೆ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

ಭಾರತೀಯ ಸಂಪ್ರದಾಯದಂತೆ ಟಾರಾ ಸೀರೆ ಉಟ್ಟುಕೊಂಡು ಭಾರತೀಯ ವಧುವಂತೆ ತಯಾರಾಗಿದ್ದಾಳೆ ನಂತರ ಗೋಮಾತೆಯ ಪೂಜೆ ನೆರವೇರಿಸಿ ಎತ್ತಿನ ಗಾಡಿಯ ದಿಬ್ಬಣ, ಒನಕೆ ಕುಟ್ಟುವುದು, ಧಾನ್ಯ ಬೀಸುವುದು ಮತ್ತು ಇನ್ನು ಹಲವಾರು ಹಿಂದೂ ಪದ್ದತಿಯನ್ನು ಮಾಡಿ ನಂತರ ಅಜಯ್ ಜೊತೆ ಹಸೆಮಣೆ ಏರಿದ್ದಾಳೆ.

ಒಟ್ಟಿನಲ್ಲಿ ವಿದೇಶಿಗರಿಗು ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ಮದುವೆಯಾಗುತ್ತಿರುವುದು ನಮಗೆ ಹೆಮ್ಮೆಯ ವಿಚಾರ ಅಲ್ಲವೇ…