45 ವರ್ಷಗಳಿಂದ ಪ್ರತಿನಿತ್ಯ 1 KG ಗಾಜು ತಿನ್ನುತ್ತಾ ಆರೋಗ್ಯವಾಗಿರುವ ಈ ವ್ಯಕ್ತಿಯನ್ನು ನೋಡಿದ್ರೆ ನಿಮಗೆ ಆಶ್ಚರ್ಯವಾಗುತ್ತೆ!!

0
201

ಕೆಲವು ಜನರು ವಿಚಿತ್ರ ಅಪಾಯಕಾರಿ ಕೆಲಸಗಳನ್ನು ಮಾಡಿ ಸಾಹಸ ಮಾಡಲು ಹೋಗುತ್ತಾರೆ. ಇನ್ನೂ ಕೆಲವರು ಆರೋಗ್ಯಕ್ಕೆ ಅಪಾಯಕಾರಿಯಾದ ವಸ್ತುಗಳನ್ನು, ತಿಂದು ಆಶ್ಚರ್ಯಿ ಮೂಡಿಸುತ್ತಾರೆ. ಇಂತಹದೆ ಸಾಹಸವನ್ನು ಇಲ್ಲೊಬ್ಬ ವ್ಯಕ್ತಿ ಮಾಡಿಕೊಂಡು ಬರುತಿದ್ದು ಬರೋಬರಿ 40-45 ವರ್ಷದಿಂದ ಗಾಜಿನ ತುಂಡುಗಳನ್ನು ತಿಂದು ಬದುಕಿದ್ದಾನೆ. ಇನ್ನೂ ದಿನನಿತ್ಯವೂ ಗ್ಲಾಸ್ ಚೂರು ತಿನ್ನುತ್ತಿರುವ ವ್ಯಕ್ತಿ ಜನರಿಗೆ ಯಾರು ಇಂತಹ ಸಾಹಸಕ್ಕೆ ಕೈ ಹಾಕಬೇಡಿ ಎಂದು ಹೇಳಿದ್ದಾನೆ. ಸದ್ಯ ಗ್ಲಾಸ್ ವ್ಯಕ್ತಿಯ ವಿಡಿಯೋ ಭಾರಿ ವೈರಲ್ ಆಗಿದೆ.

ಹೌದು ಕೆಲವರಿಗೆ ಮಣ್ಣನ್ನು ತಿನ್ನುವ, ಇನ್ನೂ ಕೆಲವರಿಗೆ ಗಿಡದ ಸೊಪ್ಪು ತಿನ್ನುವ, ಪೇಪರ್, ಸುಣ್ಣ ಆಯಿಲ್ ಸೇವಿಸುವ ಜನರು ಇದ್ದಾರೆ. ಇವರು ಮಾನವರ ಎನ್ನುವ ಪ್ರಶ್ನೆ ಮೂಡುವಂತೆ ಬದುಕುತ್ತಿದ್ದಾರೆ. ಇಂತಹದೆ ಸಾಲಿನಲ್ಲಿ ಮಧ್ಯಪ್ರದೇಶದ ಡಿಂಡೋರಿಯಲ್ಲಿ ವ್ಯಕ್ತಿ ವೃತ್ತಿಯಲ್ಲಿ ವಕೀಲನಾಗಿದ್ದು 45 ವರ್ಷಗಳಿಂದ ಗಾಜಿನ ತುಂಡು ತಿಂದು ಬದುಕಿದ್ದಾನೆ. ಇವರು ಪ್ರತಿದಿನವೂ ಒಂದು ಕೆಜಿ ಅಷ್ಟು ಗ್ಲಾಸ್ ತುಂಡು ತಿನ್ನುತ್ತಿದ್ದಾರೆ. ಈ ವಿಷಯ ಕೇಳುಗರಿಗೆ ಸುಳ್ಳು ಅನಿಸುತ್ತೆ ಎನ್ನುವ ಉದ್ದೇಶದಿಂದ ತಾನು ಗ್ಲಾಸ್ ತಿನ್ನುವ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದವರು ದಂಗಾಗಿದ್ದಾರೆ. ಇನ್ನು ಖುದ್ದು ಗಾಜು ತಿಂದು ಬದುಕುತ್ತಿರುವ ವ್ಯಕ್ತಿ ಇತರರಿಗೆ ಹೀಗೆ ಮಾಡಬೇಡಿ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸಲಹೆ ನೀಡುತ್ತಾನೆ.

ಈ ವ್ಯಕ್ತಿಗೆ ಬಾಲ್ಯದಲ್ಲೇ ಗಾಜು ತಿನ್ನುವ ಚಟ ಹತ್ತಿಕೊಂಡಿದೆ. ಆರಂಭದಲ್ಲಿ ಶೋಕಿಗಾಗಿ ಗಾಜು ತಿನ್ನುತ್ತಿದ್ದ ದಯಾರಾಮ್ ಗೆ ಬಳಿಕ ಇದು ಅಭ್ಯಾಸವಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ತಿಂಡಿ ತಿನಿಸುಗಳನ್ನು ತಿನ್ನುವಷ್ಟು ಸಲೀಸಾಗಿ ದಯಾರಾಮ್ ಗಾಜು ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೇ ಗಾಜು ತಿನ್ನುತ್ತಿದ್ದರೂ ದಯಾರಾಮ್ ಮುಖದಲ್ಲಿ ಯಾವುದೇ ನೋವು ಕಾಣದಿರುವುದು ಮತ್ತಷ್ಟು ಅಚ್ಚರಿ ಮೂಡಿಸುವಂತಹುದ್ದು. ಮನೆಯಲ್ಲಿ ಈತನ ಹೆಂಡತಿ ಗಾಜು ತಿನ್ನದಂತೆ ತಡೆಯುವುದನ್ನು ಬಿಟ್ಟು, ಮನೆಯಲ್ಲಿರುವ ಗಾಜಿನ ತುಂಡುಗಳನ್ನು ಹುಡುಕಿ ತಂದುಕೊಂಡುತ್ತಾರೆ ಎಂಬುವುದು ಮತ್ತಷ್ಟು ಬೆಚ್ಚಿ ಬೀಳಿಸುವ ವಿಚಾರ.

ಈ ಹಿಂದೆ ದಿನವೊಂದಕ್ಕೆ ಸುಮಾರು ಕೆ. ಜಿ ಗಾಜು ತಿನ್ನುತ್ತಿದ್ದ ದಯಾರಾಮ್, ಹಲ್ಲು ನೋವು ಆರಂಭವಾದ ಬಳಿಕ ಇದನ್ನು ಕಡಿಮೆ ಮಾಡಿದ್ದಾನೆ. ಮುಂದೆ ಈ ಕೆಟ್ಟ ಚಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂಬ ನಿರ್ಧಾರವನ್ನೂ ಮಾಡಿದ್ದು. ಈ ವಿಚಿತ್ರ ಆಹಾರ ಕ್ರಮದ ಬಗ್ಗೆ ವಿವರಿಸಿದ್ದು ‘ನಾನು ಕಳೆದ 45 ವರ್ಷದಿಂದ ಗಾಜು ತಿನ್ನುತ್ತಿದ್ದೇನೆ. ಇದು ನನಗೀಗ ಚಟವಾಗಿದೆ. ಈ ನನ್ನ ಚಟದಿಂದ ಹಲ್ಲುಗಳು ಹಾಳಾಗಿವೆ. ಆದರೆ ನನ್ನಂತೆ ಇತರರು ಯಾರೂ ಗಾಜು ತಿನ್ನಬಾರದು, ಇದು ಆರೋಗ್ಯಕ್ಕೆ ಹಾನಿಕರಕ. ನಾನೀಗ ನಿಧಾನವಾಗಿ ಗಾಜು ತಿನ್ನುವುದನ್ನು ಕಡಿಮೆ ಮಾಡುತ್ತಿದ್ದೇನೆ’ ಎಂಬುವುದು ದಯಾರಾಮ್ ಸಲಹೆಯಾಗಿದೆ.

ಏನೇ ಆಗಲಿ ಸರಿಯಾಗಿ ಒಳ್ಳೆಯ ಆಹಾರವನ್ನೇ ತಿನ್ನುವ ಜನರು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿರುವ ಕಾಲದಲ್ಲಿ ಈ ಮನುಷ್ಯ ಚೂಪಾದ ಗ್ಲಾಸ್ ತುಂಡುಗಳನ್ನು ಹಪ್ಪಳ ತಿನ್ನುವ ಹಾಗೆ ತಿನ್ನುತ್ತಾನೆ. ಆದರು ಇಷ್ಟು ದಿನ ಯಾವುದೇ ಅರೋಗ್ಯ ತೊಂದರೆ ಇಲ್ಲದೆ ಬದುಕಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡುತ್ತಿದೆ. ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕದೆ ಇರುವುದು ಒಳ್ಳೆಯದು.