ಅಂಚೆ ದೂರುಗಳಿಗೆ 1924ಕ್ಕೆ ಕರೆ ಮಾಡಿ

0
502

ಇನ್ನು ಮುಂದೆ ಅಂಚೆ ಇಲಾಖೆಯಿಂದ ನಿಮಗೇನಾದರೂ ತೊಂದರೆಯಾದರೆ ಅಂಚೆ ಇಲಾಖೆಗೆ ಅಲೆಯುವ ಸಮಸ್ಯೆ ಇಲ್ಲ. ಉಚಿತ ದೂರವಾಣಿಗೆ ಕರೆ ಮಾಡಿ ಸಮಸ್ಯೆಯನ್ನು  ಉಚಿತ ಬಗೆಹರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ 1924 ನಂಬರ್ ನ ಉಚಿತ ಅಂಚೆ ಇಲಾಖೆಯ ಕುಂದುಕೊರತೆಗಳನ್ನು ನಿವಾರಿಸಲು ಟ್ವಿಟರ್ ಸೇವೆಯನ್ನು ಪರಿಚಯಿಸಿತ್ತು, ದೂರವಾಣಿ ಸೇವೆ ಕೂಡ ಅಳವಡಿಸಿದ್ದು ಇಲಾಖೆಗೆ ಇನ್ನಷ್ಟು ಬಲ ಬಂದಂತಾಗಿದೆ.

ಪ್ರಮುಖಾಂಶಗಳು:

*ಮೊದಲ ಹಂತವಾಗಿ ಈ ಸೇವೆಯನ್ನು 12 ತಾಸುಗಳಿಗೆ ನಿಗದಿ ಪಡಿಸಲಾಗಿದೆ. ಕೆಲಸದ ದಿನದಲ್ಲಿ ಬೆಳಗ್ಗೆ 8 ರಿಂದ ಸಂಜೆ 8ರ ವರೆಗೆ ನೀವು ಈ ಕರೆ ಮಾಡಬಹುದು. ಸೇವೆಯನ್ನು ಮುಂದಿನ ದೂರು ದಾಖಲಿಸಬಹುದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಯಲ್ಲೂ ಆರಂಭಿಸಲಾಗುವುದು.

*ಅಂಚೆ ಇಲಾಖೆಯ ಪ್ರಧಾನ ಕಚೇರಿ ನವದೆಹಲಿಯ ಡಾಕ್ ಭವನದಲ್ಲಿ ಉಚಿತ ದೂರವಾಣಿ ಕೇಂದ್ರವನ್ನು ಆರಂಭಿಸಿದ್ದು, ಇದರ ಜತೆಗೆ ಎಲ್ಲಾ ವೃತ್ತ ಅಂಚೆ ಕಚೇರಿಗಳಲ್ಲೂ ಇದಕ್ಕೆ ಅಗತ್ಯವಾದ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು, ಪ್ರತಿ ಕೇಂದ್ರದಲ್ಲಿ ಇಬ್ಬರು ಅಥವಾ ಮೂವರು ಸಿಬ್ಬಂದಿ ದೂರುಗಳ ಮೇಲ್ವಿಚಾರಣೆ ಹಾಗೂ ಪರಿಹಾರಕ್ಕೆ ಶ್ರಮಿಸುವರು.

*ನೀವು ದೂರು ದಾಖಲಿಸಿದ ತಕ್ಷಣ 11 ಡಿಜಿಟ್ ನಂಬರ್ ದೂರು ದಾಖಲೆಯ ಸಂಖ್ಯೆಯನ್ನು ನೀಡಲಾಗುತ್ತದೆ.

*ನೀವೂ ದೂರನ್ನು ಈಗಾಗಲೇ ದಾಖಸಿದ್ದಲ್ಲಿ, ನಿರ್ವಾಹಕರು ನಿಮ್ಮ ಪ್ರತ್ಯೇಕ ದೂರು ನೀಡುವ ಅವಶ್ಯಕತೆ ಇರುವುದಿಲ್ಲ.