ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ; SSLC ಪಾಸಾದವರಿಗೂ ಸಿಗಲಿದೆ ಉದ್ಯೋಗ..

0
2073

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದ್ದು ಗ್ರಾಮೀಣ ಅಂಚೆ ಸೇವೆಯ 682 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 2 2019 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ಕರ್ನಾಟಕ ಲೋಕಸೇವಾ ಆಯೋಗ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

  • ಹುದ್ದೆಯ ಹೆಸರು: ಗ್ರಾಮೀಣ ಅಂಚೆ ಸೇವಕರು.
  • ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಸ್​ಎಸ್​ಎಲ್​ಸಿ ಪ್ರಮಾಣ ಪತ್ರ ಪಡೆದಿರಬೇಕು. ಇದರೊಂದಿಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
  • ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಅದೇ ರೀತಿ ಅಭ್ಯರ್ಥಿಯ ವಯಸ್ಸು 40 ವರ್ಷವನ್ನು ಮೀರಿರಬಾರದು.
    ಸರ್ಕಾರಿ ನಿಯಮಗಳ ಅಧಿಸೂಚನೆ ಪ್ರಕಾರ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯಸ್ಸಿನ ವಿನಾಯಿತಿ ನೀಡಲಾಗಿದೆ.

 


Also read: ಉಡುಪಿ ಜಿಲ್ಲಾ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..!

  • ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ- 100 ರೂ. ಎಸ್ಸಿ / ಎಸ್ಟಿ, ವಿಕಲಚೇತನರು ಮತ್ತು ಮಹಿಳರಿಗೆ ಯಾವುದೇ ಶುಲ್ಕವಿರುವುದಿಲ್ಲ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 2, 2019.
  • ಹುದ್ದೆಗಳ ಹಂಚಿಕೆ: ಅಂಬಾಲಾ -113, ಭಿವಾನಿ – 48, ಫರಿದಾಬಾದ್- 27, ಗುರ್ಗಾಂವ್ -153, ಹಿಸಾರ್ – 111, ಕಾರ್ನಾಕ್ -81, ಕುರುಕ್ಷೇತ್ರ – 53, ರೋಹತಕ್ -62, ಸೋನಿಪತ್ -32 ಹುದ್ದೆಗಳು.
  • ಅರ್ಜಿ ಸಲ್ಲಿಸುವ ವಿಧಾನ:
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು indiapost.gov.in ಅಥವಾ appost.in/gdsonline ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಆನ್​​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು.