ಭಾರತೀಯ ರೈಲ್ವೆ ವಿವಿಧ 2090, ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
876

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತೀಯ ರೈಲ್ವೆ ಇಲಾಖೆ ಎಸ್ಎಸ್ಎಲ್ ಸಿ ಪಾಸಾದ ಅಭ್ಯರ್ಥಿಗಳಿಂದ ವಿವಿಧ ವಿಭಾಗಗಳ ನಾರ್ತ್​ ವೆಸ್ಟರ್ನ್​ ರೈಲ್ವೆಯಲ್ಲಿನ 2090 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 30. 2018 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ನಿರುದ್ಯೋಗಿಗಳಿಗೊಂದು ಸುವರ್ಣಾವಕಾಶ. ಕಾರವಾರದಲ್ಲಿ ಬೃಹತ್ ಉದ್ಯೋಗ ಮೇಳ; ಕೆನರಾ ಬ್ಯಾಂಕ್, SBI ಸೇರಿದಂತೆ 106 ಕಂಪನಿಗಳು ಪಾಲ್ಗೊಳ್ಳಲಿವೆ..

ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿ:

ಸಂಸ್ಥೆ: ಭಾರತೀಯ ರೈಲ್ವೆ ಇಲಾಖೆ.

ವಿಭಾಗ: ನಾರ್ತ್​ ವೆಸ್ಟರ್ನ್​ ರೈಲ್ವೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 30. 2018.

ವಿದ್ಯಾರ್ಹತೆ: ಎಸ್​ಎಸ್​ಎಲ್​ಸಿಯಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಉತೀರ್ಣರಾಗಿರಬೇಕು. ಇದಲ್ಲದೆ ಮಾನ್ಯತೆ ಹೊಂದಿರುವ ಇನ್ಸ್​ಟಿಟ್ಯೂಟ್​ನಿಂದ ITI ಅಥವಾ NCVT / SCVT ಪ್ರಮಾಣಪತ್ರವನ್ನು ಪಡೆದಿರಬೇಕು.


Also read: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ವಯೋಮಿತಿ: ಅರ್ಜಿದಾರನು 15 ವರ್ಷದಿಂದ 24 ವರ್ಷದೊಳಗಿನವರಾಗಿರಬೇಕು. ಅಲ್ಲದೆ ಮೀಸಲಾತಿ ವಿಭಾಗಗಳ ಅಭ್ಯರ್ಥಿಗಳು ವಯೋಮಿತಿಯಲ್ಲಿ ವಿನಾಯಿತಿ ನೀಡಲಾಗಿದೆ.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ವರ್ಗ- 100 ರೂ. ಎಸ್ಸಿ, ಎಸ್​ಟಿ, ವಿಕಲಚೇತನ ಮತ್ತು ಮಹಿಳೆಯರು ಅರ್ಜಿ ಶುಲ್ಕ ಪಾವತಿಸಬೇಕಿಲ್ಲ.
ಆಯ್ಕೆ ಪ್ರಕ್ರಿಯೆ: ಹತ್ತನೇ ತರಗತಿಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ವಿಭಾಗವಾರು ಹುದ್ದೆಗಳು: ಅಜ್ಮೀರ್ ವಿಭಾಗ – 420, ಬಿಕಾನೆರ್ ವಿಭಾಗ- 412, ಜೈಪುರ ವಿಭಾಗ – 503, ಜೋಧ್​ಪುರ ವಿಭಾಗ- 410, ಬಿಟಿಸಿ ಕ್ಯಾರಿಯೇಜ್ (ಅಜ್ಮೀರ್) – 166, ಬಿಟಿಸಿ ಲೊಕೊ (ಅಜ್ಮೀರ್) – 57, ಕ್ಯಾರಿಯೇಜ್ ವರ್ಕ್​ಶಾಪ್ (ಬಿಕಾನೆರ್) -37, ಕ್ಯಾರಿಯೇಜ್ ವರ್ಕ್​ಶಾಪ್ (ಜೋಧ್​ಪುರ) – 85.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ: www.rrcjaipur.in ಕ್ಲಿಕ್ ಮಾಡಿ.