ರೈಲ್ವೆ ಇಲಾಖೆಗೂ ಬಂತು ಖಾಸಗಿಕರಣ; ಇನ್ಮುಂದೆ ದೇಶದಲ್ಲಿ ಖಾಸಗಿ ರೈಲುಗಳ ಸಂಚಾರ ಶುರು, ಹೇರಿರಲಿದೆ ಖಾಸಗಿ ರೈಲು ವ್ಯವಸ್ಥೆ??

0
366

ದೇಶದಲ್ಲಿ ಖಾಸಗಿಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಕಾರಣ, ಎಲ್ಲದರಲ್ಲಿ ಅರ್ಧ ಭಾಗ ಖಾಸಗಿಮಯವಾಗುತ್ತಿದೆ. ಈಗಾಗಲೇ ರಸ್ತೆ, ವಾಹನ, ಕೆಲವು ಸರ್ಕಾರಿ ಸೇವೆಗಳನ್ನು ಖಾಸಗಿಯವರಿಗೆ ಬಿಟ್ಟು ಕೊಡಲಾಗಿದ್ದು. ಈಗ ರೈಲ್ವೆ ಇಲಾಖೆ ಕೂಡ ಖಾಸಗಿಯತ್ತ ಸಾಗುತ್ತಿದ್ದು, ಇನ್ಮುಂದೆ ಖಾಸಗಿ ರೈಲು ಸಂಚರಿಸಲಿವೆ ಎನ್ನುವ ವಿಚಾರವನ್ನು ರೈಲ್ವೇ ತಿಳಿಸಿದ್ದು, ಕೆಲವು ಕೆಲವು ದಟ್ಟಣೆ ರಹಿತ ಮತ್ತು ಪ್ರವಾಸಿ ಮಾರ್ಗಗಳಲ್ಲಿ ಖಾಸಗಿ ರೈಲುಗಳ ಸೇವೆ ಆರಂಭಿಸಲು ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ. ಎಂದು ತಿಳಿಸಿದೆ.

Also read: ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ; ಇನ್ಮುಂದೆ ರೈಲುಗಳಲ್ಲಿ ಮಸಾಜ್ ಸೌಲಭ್ಯ, ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಯೋಜನೆ ತಂದ ಇಲಾಖೆ..

ಹೌದು ರೈಲ್ವೆ ಮಂಡಳಿಗೆ ಕೆಲವು ಸೇವೆಗಳನ್ನು ಸುಧಾರಣೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸೇವೆಗಳನ್ನು ಸುಧಾರಣೆ ತರಲು ಕೆಲವು ಪ್ರವಾಸಿ ಮಾರ್ಗಗಳಲ್ಲಿ ಮತ್ತು ದಟ್ಟಣೆ ರಹಿತ ಮತ್ತು ಪ್ರವಾಸಿ ಮಾರ್ಗಗಳಲ್ಲಿ ಖಾಸಗಿ ರೈಲುಗಳ ಸೇವೆ ಆರಂಭಿಸಲು ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ. ಅದಕ್ಕಾಗಿ ಮುಂದಿನ 100 ದಿನಗಳೊಳಗೆ ಬಿಡ್‌ಗಳನ್ನು ಆಹ್ವಾನಿಸಲು ಸಿದ್ಧತೆ ನಡೆಸಿದೆ ಎಂದು ರೈಲ್ವೇ ಮಂಡಳಿ ದಾಖಲೆಗಳು ತಿಳಿಸಿವೆ. ಅದರಂತೆ ಉತ್ತರ ಭಾರತದಲ್ಲಿ ಟಿಕೆಟ್ಟು ಖರೀದಿಸಿ ರೈಲ್ವೆ ಪ್ರಯಾಣ ಮಾಡುವವರು ತುಂಬಾ ಕಡಿಮೆ. ಸರಕಾರ ದಿಂದ ನಡೆಸಲ್ಪಡುವ ರೈಲು ತಮ್ಮದೇ, ಪುಕ್ಕಟೆಯಾಗಿ ಸಿಗುವಂತಹುದೇ ಎಂಬ ನಂಬಿಕೆ ಇದ್ದು, ಬೀಮಾರು ರಾಜ್ಯಗಳಲ್ಲಿ ಅವರಲ್ಲಿ ಟಿಕೇಟು ಕೇಳುವ ಸರಿಯಾಗಿ ವಸೂಲಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ತರುತ್ತಿದೆ.

span style=”color: #ff0000;”>Also read: ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಇದು ಮಥುರೆಯ ರೈಲ್ವೆ ನಿಲ್ದಾಣ, ಯಾವ ಏರ್ಪೋರ್ಟ್-ಗೇನೂ ಕಮ್ಮಿಯಿಲ್ಲ!! ಇದೇ ಅಲ್ಲವಾ “ಅಚ್ಛೇ ದಿನ್” ಅಂದ್ರೆ..

ಎಲ್ಲಿದ ಖಾಸಗಿ ರೈಲು ಸೇವೆ?

ರೈಲುಗಳಿಗೆ ಟಿಕೆಟ್‌ ಮತ್ತು ಬೋರ್ಡಿಂಗ್ ಸೇವೆಗಳನ್ನು ಐಆರ್‌ಸಿಟಿಸಿ ನಿರ್ವಹಿಸುತ್ತದೆ. ಇದಕ್ಕೆ ಪ್ರತಿಯಾಗಿ ರೈಲ್ವೇ ಮಂಡಳಿಗೆ ನಿರ್ದಿಷ್ಟ ಮೊತ್ತವನ್ನು ಐಆರ್‌ಸಿಟಿಸಿ ಪಾವತಿಸುತ್ತದೆ. ಸಂಚಾರ ದಟ್ಟಣೆ ಕಡಿಮೆ ಇರುವ ಮತ್ತು ಪ್ರಮುಖ ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಈ ರೈಲುಗಳು ಓಡಾಡಲಿವೆ. ಆ ಮಾರ್ಗಗಳನ್ನು ರೈಲ್ವೇ ಇಲಾಖೆಯೇ ಗುರುತಿಸುತ್ತದೆ. ಪ್ರಮುಖ ನಗರಗಳನ್ನು ಸಂಪರ್ಕಿಸುವ ಸುವರ್ಣ ಚತುರ್ಭುಜದಂತಹ ಮಾರ್ಗಗಳಲ್ಲಿ ಈ ರೈಲುಗಳು ಸಂಚರಿಸಲಿವೆ. ರೈಲು ಬೋಗಿಗಳ ಸಂಪೂರ್ಣ ನಿರ್ವಹಣೆ ಮತ್ತು ಹೊಣೆಯನ್ನು ಐಆರ್‌ಸಿಟಿಸಿಗೆ ವರ್ಗಾಯಿಸಲಾಗುವುದು. ಅದು ವಾರ್ಷಿಕವಾಗಿ ನಿಗದಿತ ಮೊತ್ತವನ್ನು ರೈಲ್ವೇ ಇಲಾಖೆಯ ಹಣಕಾಸು ವಿಭಾಗ ಐಆರ್‌ಎಫ್‌ಸಿಗೆ ಪಾವತಿಸಬೇಕಾಗುತ್ತದೆ. ಮೊದಲಿಗೆ ಪ್ರಾಯೋಗಿಕ ನೆಲೆಯಲ್ಲಿ ರೈಲ್ವೇ ಇಲಾಖೆ ತನ್ನ ಪ್ರವಾಸಿ ಮತ್ತು ಟಿಕೆಟ್ ಬುಕಿಂಗ್ ಘಟಕ ಐಆರ್‌ಸಿಟಿಸಿಗೆ ಎರಡು ರೈಲುಗಳನ್ನು ಒದಗಿಸಲಿದೆ.

Also read:

ಮುಂದಿನ ಹಂತದಲ್ಲಿ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹಗಲು/ರಾತ್ರಿ ಓಡಾಟದ ಪ್ರಯಾಣಿಕ ರೈಲುಗಳ ಚಾಲನೆಗೆ ಆಸಕ್ತಿಯುಳ್ಳ ಖಾಸಗಿ ನಿರ್ವಾಹಕರಿಂದ ಬಿಡ್‌ಗಳನ್ನು ಆಹ್ವಾನಿಸಲಾಗುವುದು. ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ ಯಾದವ್ ಅವರು ರೈಲ್ವೇಯ ಎಲ್ಲ ಸದಸ್ಯರು ಮತ್ತು ಉನ್ನತ ಅಧಿಕಾರಿಗಳಿಗೆ ಕಳುಹಿಸಿದ ಪತ್ರದಲ್ಲಿ ಈ ವಿಷಯ ತಿಳಿಸಲಾಗಿದೆ. ರೈಲು ಟಿಕೆಟ್‌ ಬುಕಿಂಗ್ ವೇಳೆ ಸಬ್ಸಿಡಿ ಆಯ್ಕೆಯನ್ನು ಬಿಟ್ಟುಬಿಡುವಂತೆ ಪ್ರಯಾಣಿಕರಿಗೆ ಮನವರಿಕೆ ಮಾಡಲು ರೈಲ್ವೇ ಇಲಾಖೆ ವ್ಯಾಪಕ ಪ್ರಚಾರಾಂದೋಲನ ನಡೆಸಲಿದೆ. ಸಬ್ಸಿಡಿ ರಹಿತವಾಗಿ ಟಿಕೆಟ್ ಖರೀದಿಸುವ ಆಯ್ಕೆಯನ್ನೂ ನೀಡಲಿದೆ. ಆಯ್ದ ಮಾರ್ಗಗಳಲ್ಲಿ ಖಾಸಗಿ ನಿರ್ವಾಹಕರ ಮೂಲಕ ಪ್ರಯಾಣಿಕ ರೈಲುಗಳನ್ನು ಓಡಿಸುವ ಪ್ರಸ್ತಾವ ಅಂತಿಮಗೊಳಿಸವ ಮುನ್ನ ಕಾರ್ಮಿಕ ಸಂಘಟನೆಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಪತ್ರ ತಿಳಿಸಿದೆ.