ಮಹಿಳೆಯರ ಸುರಕ್ಷತೆಗೆಂದು ಹೊಸ ನಿಯಮ ತಂದಿದೆ ರೈಲ್ವೆ, ಮಹಿಳೆಯರಿಗೆ ಸಿಹಿ ಸುದ್ದಿ. ಏನದು ನಿಯಮ ಗೊತ್ತೇ?

0
652

Indian-railways-reservation-for-ladies | Kannada News

ಇನ್ನು ಮುಂದೆ ರೈಲ್ವೆಯಲ್ಲಿ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ಯಾವುದೇ ಭಯವಿಲ್ಲ. ಮಹಿಳೆಯರ ಸುರಕ್ಷತೆಗೆಂದು ಹೊಸ ನಿಯಮ ತಂದಿದೆ ರೈಲ್ವೆ, ಮಹಿಳೆಯರಿಗೆ ಸಿಹಿ ಸುದ್ದಿ. ಏನದು ನಿಯಮ, ಅದರಿಂದ ಮ್ಹಹಿಳೆಯರಿಗೆ ಯಾವ ರೀತಿಯಿಂದ ಲಾಭವಾಗಲಿದೆ ಎಂದು ತಿಳಿಯಲು ಮುಂದೆ ಓದಿ.

ಲೇಡೀಸ್ ಕೋಟಾ ಅಡಿಯಲ್ಲಿ ಮಹಿಳೆಯರಿಗೆ ಮೊದಲು ಖಾಲಿ ಆಸನಗಳನ್ನು ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಮಹಿಳೆಯರಿಗೆ ಮೊದಲ ಆಧ್ಯತೆ ನಂತರ ಹಿರಿಯ ನಾಗರಿಕರಿಗೆ ಉಳಿದ ಸೀಟುಗಳನ್ನು ನೀಡಲಾಗುತ್ತದೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

Also read: ಸಿಎಜಿ ವರದಿ ಆಕ್ಷೇಪ: ಪ್ರಯಾಣಿಕರ ಬಳಕೆಗಾಗಿ ಯೋಗ್ಯವಾಗಿಲ್ಲ ರೈಲ್ವೆ ಆಹಾರ.

ರೈಲ್ವೆ ಪ್ರಕಟಣೆಯ ಪ್ರಕಾರ, ಗರ್ಭಿಣಿ ಮಹಿಳೆಯರಿಗೆ ಮತ್ತು 45 ವರ್ಷದೊಳಗಿನ ಸ್ತ್ರೀ ಪ್ರಯಾಣಿಕರಿಗೆ ಮೊದಲ ಆಧ್ಯತೆ. ಏಕೆಂದರೆ ಅಂತಹ ಮಹಿಳಾ ಪ್ರಯಾಣಿಕರಿಗೆ ಮೇಲಿನ ಸ್ಥಾನಕ್ಕೆ ಏರಲು ಕಷ್ಟವಾಗುತ್ತದೆ. ಇದಕ್ಕಾಗಿ ಪ್ರತಿ ಕೋಚ್ಗೆ ಆರು ಕೆಲ ಬೆರ್ತ್ಗಳನ್ನು ಸ್ಲೀಪರ್ ವರ್ಗಕ್ಕೆ ಮೀಸಲಿಡಲಾಗುತ್ತದೆ.

ಇನ್ನು ಈ ಸೇವೆ ಸ್ಲೀಪರ್ ಕೋಚ್ ನಲ್ಲಿ ಮಾತ್ರವಲ್ಲದೆ, ಎಸಿ 3-ಟೈರ್ ಮತ್ತು ಎಸಿ 2-ಟೈರ್ ಕೋಚ್ಗಳಲ್ಲಿಯೂ ಮಹಿಳೆಯರಿಗೆ ಪ್ರಯಾಣಿಕರು ಮೂರು ಕೆಲ ಬೆರ್ತ್ಗಳಲ್ಲಿ ಸೇವೆಗಳನ್ನು ಪಡೆಯಬಹುದು. ಇವರ ನಂತರ ಹಿರಿಯ ನಾಗರಿಕರಿಗೆ ಈ ಸ್ಥಾನಗಳನ್ನು ನೀಡಲಾಗುತ್ತದೆ.

ಒಂದೇ PNR ಅಥವಾ ಒಂದೇ ಟಿಕೆಟ್ನಲ್ಲಿ ಆರು ಜನ ಮಹಿಳೆಯರು ಟಿಕೆಟ್ ಕಾಯ್ದಿರಿಸಿ ಮತ್ತು ಮೊದಲ ಚಾರ್ಟ್ ತಯಾರಿಕೆಯ ತನಕ ಆರು ಸೀಟುಗಳನ್ನು ಪಡೆದುಕೊಳ್ಳದಿದ್ದರೆ, ಕಾಯುವ ಪಟ್ಟಿಯಲ್ಲಿರುವ ಒಂಟಿ ಮಹಿಳಾ ಪ್ರಯಾಣಿಕರಿಗೆ ಮತ್ತು ಮಹಿಳಾ ಪ್ರಯಾಣಿಕರ ಗುಂಪುಗಳಿಗೆ ಬರ್ತ್ಗಳನ್ನು ಬಿಡುಗಡೆ ಮಾಡಲಾಗುವುದು ಮತ್ತು ಹಿರಿಯ ನಾಗರಿಕರಿಗೆ ಮುಂದಿನ ಆದ್ಯತೆ ನೀಡಲಾಗುವುದು ಎಂದು ರೈಲ್ವೆ ಪ್ರಕಟಿಸಿದೆ.

Also read: ರೈಲ್ವೆ ಟಿಕೆಟ್ ಬುಕ್ ಮಾಡಬೇಕಾದರೆ ಸೀಟ್ ಆಯ್ಕೆ ಮಾಡಿಕೊಳ್ಳುವ ಅವಕಾಶ ನಿಮಗೆ ಯಾಕೆ ಕೊಡೋಲ್ಲ ಗೊತ್ತಾ?