ಇಂದಿನಿಂದಲ್ಲೇ ಬಸ್ಸು, ರೈಲ್ವೇ ಸ್ಟೇಷನ್‍-ಗಳಿಗೆ ಪ್ಲಾಸ್ಟಿಕ್ ತಂದರೆ ಸಾವಿರ ರೂ. ದಂಡ; ದೇಶಾದ್ಯಂತ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧ.!

0
307

ಭಾರತದಲ್ಲಿ ಪ್ಲಾಸ್ಟಿಕ್ ಎನ್ನುವ ಒಂದು ದೊಡ್ಡ ಕಾಯಿಲೆಯನ್ನು ಕಿತ್ತೆಸೆಯಲು ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರ ಪಣ ತೊಟ್ಟಿದೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು 73ನೇ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಸಂದರ್ಭದಲ್ಲಿರಾಷ್ಟ್ರವನ್ನು ಪ್ಲಾಸ್ಟಿಕ್‌ ಬಳಕೆ ಮುಕ್ತ ಭಾರತವನ್ನಾಗಿಸುವುದಾಗಿ ಘೋಷಿಸಿದ್ದರು. ಪ್ಲಾಸ್ಟಿಕ್‌ ನಿಷೇಧಿಸಲು ಸರಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕಂಡಿಲ್ಲ. ಹಾಗಯೇ ಕದ್ದು ಮುಚ್ಚಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕೂಡ ಹೆಚ್ಚಿದೆ. ಅದಕ್ಕಾಗಿ ಇಂದಿನಿಂದ ದೇಶಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದ್ದು ಬಳಕೆ ಮಾಡಿದರೆ ಭಾರಿ ದಂಡ ಬಿಳ್ಳುತ್ತೆ.

Also read: ನಿಮ್ಮ ಕೈಯಲ್ಲಿ ಸ್ಮಾರ್ಟ್-ಫೋನ್ ಇದ್ದರೆ ಸಾಕು ನೀವೇ ಟ್ರಾಫಿಕ್ ಪೊಲೀಸ್ ಆಗಬಹುದು, ಹೇಗೆ ಅಂತೀರಾ ಮುಂದೆ ಓದಿ!!

ಹೌದು ಗಾಂಧಿ ಜಯಂತಿ ದಿನದಿಂದ ಅಂದರೆ ಇಂದಿನಿಂದ ದೇಶಾದ್ಯಂತ ಮರು ಬಳಕೆಯಾದ ಪ್ಲಾಸ್ಟಿಕ್ ನಿಷೇಧಿಸಿ, ಆದೇಶ ಹೊರಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂದು ನರೇಂದ್ರ ಮೋದಿಯವರು ಈ ಆಂದೋಲನಕ್ಕೆ ನೀಡುವ ಸಾಧ್ಯತೆಯಿದೆ. ಏಕ-ಬಳಕೆಯ ಪ್ಲಾಸ್ಟಿಕ್ ಮುಕ್ತ ಭಾರತ ನರೇಂದ್ರ ಮೋದಿಯವರ ಕನಸು. ಗಾರ್ಡನ್ ಸಿಟಿಯಾದ ಬೆಂಗಳೂರು ಗಾರ್ಬೆಜ್ ಸಿಟಿಯಾಗಿದೆ. ಅದರಲ್ಲೂ ಕಸದ ಸಮಸ್ಯೆಯೇ ತೀವ್ರವಾಗಿದೆ. ಹೀಗಾಗಿ ಬಿಬಿಎಂಪಿ 2016ರಿಂದಲೇ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದು, ಕಳೆದ ಒಂದು ವರ್ಷದಲ್ಲಿ, ಪ್ಲಾಸ್ಟಿಕ್ ಬಳಕೆಗೆ 86 ಲಕ್ಷ ರೂ. ಫೈನ್ ಹಾಕಲಾಗಿದೆ.

ರೈಲೇ ಸ್ಟೇಷನ್ BMTC ಬಸ್ ಗಳಲ್ಲಿ ಪ್ಲಾಸ್ಟಿಕ್ ನಿಷೇಧ?

Also read: ಟೋಲ್‌ಗಳಲ್ಲಿ ಹಗಲು ದರೋಡೆ; ಸಾವಿರಾರು ಕೋಟಿ ಭ್ರಷ್ಟಾಚಾರ ತೆರೆದಿಟ್ಟ ವಕೀಲರು, ಹೇಗೆ ನಡೆಯುತ್ತಿದ್ದೆ ನೋಡಿ ಭ್ರಷ್ಟಾಚಾರ.!

ಅದರಂತೆ ಇಂದಿನಿಂದ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿಯೂ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಸಿದರೆ ಒಂದು ಸಾವಿರ ರೂ. ಫೈನ್ ಹಾಕಲಾಗುವುದು ಎಂದು ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ ಕುಮಾರ್ ವರ್ಮ ಅವರು ಆದೇಶಿಸಿದ್ದಾರೆ. ರೈಲು ನಿಲ್ದಾಣದ ಜೊತೆಗೆ ಇಂದಿನಿಂದ ಬಿಎಂಟಿಸಿಯ ಎಲ್ಲಾ ಡಿಪೋಗಳು, ಕಚೇರಿ, ವರ್ಕ್ ಶಾಪ್‍ಗಳಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ಬಿಎಂಟಿಸಿ ಎಂ.ಡಿ ಶಿಖಾ ಆದೇಶ ಹೊರಡಿಸಿದ್ದಾರೆ. ಪ್ಲಾಸ್ಟಿಕ್ ಬ್ಯಾನ್‍ಗೆ ಸಾರ್ವಜನಿಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಷ್ಟೇ ಅಲ್ಲದೆ ಬಿಎಂಟಿಸಿ ಬಸ್ ಗಳಲ್ಲಿ ಇನ್ಮುಂದೆ ಪ್ರಯಾಣಿಕರು ಪ್ಲಾಸ್ಟಿಕ್ ಕವರ್ ತರುವಂತಿಲ್ಲ ಎಂದು ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಆದೇಶ ಹೊರಡಿಸಿದ್ದಾರೆ. ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರು ಪ್ಲಾಸ್ಟಿಕ್ ಕವರ್ ಗಳನ್ನು ತರುವುದು ಮತ್ತು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಶಿಕಾ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಬಿಎಂಟಿಸಿ ಬಸ್ ನಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ನಿಷೇಧಿಸಿರುವ ಬಿಎಂಟಿಸಿ ಆಡಳಿತ ಮಂಡಳಿ, ಪ್ಲಾಸ್ಟಿಕ್ ತರದಂತೆ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲು ಚಾಲಕರಿಗೆ ಮತ್ತು ನಿರ್ವಾಹಕರಿಗೆ ಸುತ್ತೋಲೆ ಕಳುಹಿಸಿದ್ದಾರೆ.

Also read: ಬರೋಬ್ಬರಿ 1.26 ಲಕ್ಷ ಮಂದಿಗೆ ಒಂದೇ ದಿನ ಸರ್ಕಾರಿ ಕೆಲಸ ನೀಡಿ ವಿಶ್ವ ದಾಖಲೆ ಬರೆದ ರಾಜ್ಯ.!

ಈ ಕುರಿತು ಜನರಲ್ಲಿ ಮತ್ತು ರಾಜ್ಯದ ಶಾಲೆಗಳ ಒಳಗೆ ಹಾಗೂ ಹೊರಗೆ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿರುವುದು ಏಕೆ ಎಂಬ ಕುರಿತು ಅ.2ರ ಗಾಂಧಿ ಜಯಂತಿ ದಿನದಂದು ಶಾಲಾ ಮಕ್ಕಳ ಮೂಲಕ ಜಾಥಾ, ಬೀದಿ ನಾಟಕಗಳ ಪ್ರದರ್ಶನ ಏರ್ಪಡಿಸುವುದರ ಜತೆಗೆ, ಮಕ್ಕಳಿಂದ ಪ್ರತಿಜ್ಞಾ ಸ್ವೀಕಾರ ಮಾಡಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿತ್ತು ಅದರಂತೆ ಇಂದು ಇಲ್ಲದೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.