ಇನ್ಮುಂದೆ ರೈಲ್ವೆ ನಿಲ್ದಾಣಗಳಲ್ಲಿ ಬಸ್ಕಿ ಹೊಡೆದರೆ ಉಚಿತ ಟಿಕೆಟ್; ಏನಿದು ಹೊಸ ಯೋಜನೆ.?

0
162

ಜನರಿಗೆ ಆರೋಗ್ಯದ ಮೇಲೆ ಕಾಳಜಿವಹಿಸಲು ಸಮಯವಿಲ್ಲದಂತ ಕಾಲ ಇದಾಗಿದ್ದು, ಹಲವು ಅರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಗ, ಫಿಟ್​ ಇಂಡಿಯಾ ಅಂತಹ ಹಲವು ಕಾರ್ಯಕ್ರಮಗಳನ್ನ ಜಾರಿ ಮಾಡಿದೆ. ಇದರ ಮಹತ್ವ ಸಾರಲು ರೈಲ್ವೆ ಇಲಾಖೆ ಹೊಸ ಉಪಾಯವನ್ನು ಮಾಡಿಕೊಂಡಿದ್ದು, ರೈಲ್ವೆ ನಿಲ್ದಾಣದಲ್ಲಿ ಬಸ್ಕಿ ಹೊಡೆದರೆ ಉಚಿತವಾಗಿ ಟಿಕೆಟ್ ನೀಡುತ್ತಾರೆ. ಇದನ್ನು ರೈಲ್ವೆ ಸಚಿವ ಪಿಯೂಷ್​ ಗೋಯೆಲ್​ ಜಾರಿಗೆ ತಂದಿದ್ದಾರೆ. ನೀವು ಕೂಡ ಬಸ್ಕಿ ಹೊಡೆದು ಟಿಕೆಟ್ ಪಡೆಯಬಹುದು.

ಬಸ್ಕಿ ಹೊಡೆದರೆ ಟಿಕೆಟ್ ಫ್ರಿ?

ಹೌದು ಪ್ರಧಾನಿ ನರೇಂದ್ರ ಮೋದಿ ಫಿಟ್​ ಇಂಡಿಯಾ ಯೋಜನೆ ಜಾರಿಗೆ ತಂದರು. ಅದರ ಅಂಗವಾಗಿ ಈಗ ರೈಲ್ವೆ ಸಚಿವ ಪಿಯೂಷ್​ ಗೋಯೆಲ್​ ಹೊಸ ಯೋಜನೆ ಜಾರಿಗೆ ತಂದಿದ್ದು, ಈ ಮೂಲಕ ರೈಲು ಪ್ರಯಾಣಿಕರಿಗೆ ಬಂಫರ್​ ಆಫರ್​ ನೀಡಿದ್ದಾರೆ. ನಿಮ್ಮ ಆಪ್ತರನ್ನು ರೈಲಿಗೆ ಹತ್ತಿಸಲು ನಿಲ್ದಾಣಕ್ಕೆ ಹೋದ ವೇಳೆ ನೀವು ಪ್ಲಾಟ್​​ ಫಾರಂ ಟಿಕೆಟ್​ ಕೊಳ್ಳುವುದು ಅನಿವಾರ್ಯ. ಒಂದು ವೇಳೆ ಪ್ಲಾಟ್​ ಫಾರಂ ಟಿಕೆಟ್​ ಇಲ್ಲದೇ ನೀವು ರೈಲು ನಿಲ್ದಾಣದಲ್ಲಿದ್ದರೆ, ದಂಡ ತೆರಬೇಕಾಗಿರುವುದು ಅನಿವಾರ್ಯವಾಗಿದ್ದು, ಇನ್ಮುಂದೆ ನೀವು ಉಚಿತವಾಗಿ ಪಡೆಯಬಹುದು. ಅದು ಫಿಟ್​ ಇಂಡಿಯಾ ಯೋಜನೆ ಮೂಲಕ. ರೈಲು ನಿಲ್ದಾಣದಲ್ಲಿ 3 ನಿಮಿಷದಲ್ಲಿ 30 ಬಸ್ಕಿ ಹೊಡೆದರೆ ಇನ್ಮುಂದೆ ಉಚಿತವಾಗಿ ಈ ಪ್ಲಾಟ್​ ಫಾರಂ ಟಿಕೆಟ್​ ಪಡೆಯಬಹುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈಗಾಗಲೇ ದೆಹಲಿಯಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಶೀಘ್ರದಲ್ಲಿಯೇ ದೇಶದ ಇತರೆ ರೈಲ್ವೆ ನಿಲ್ದಾಣದಲ್ಲಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಟ್ವೀಟ್​ ಮೂಲಕ ಪಿಯೂಷ್​ ಗೋಯೆಲ್​ ತಿಳಿಸಿದ್ದಾರೆ. 180 ಸೆಕೆಂಡ್​ಗಳಲ್ಲಿ 30 ಬಸ್ಕಿ ಹೊಡೆಯುವುದರಿಂದ ಉಚಿತ ಟಿಕೆಟ್​ ಜೊತೆ ಆರೋಗ್ಯಕ್ಕೆ ಕೂಡ ಒಳಿತಾಗಲಿದೆ. ಈ ಮೂಲಕ ನಾವು ಇಂಡಿಯಾವನ್ನು ಫಿಟ್​ ಆಗಿಡಬಹುದು ಎಂಬುದು ಕೇಂದ್ರ ಸಚಿವರ ಯೋಜನೆಯ ಉದ್ದೇಶವಾಗಿದೆ.

ಈ ಹಿಂದೆ ಇಂತಹದೆ ಯೋಜನೆಯನ್ನು ರಷ್ಯಾದ ಮಾಸ್ಕೋ ಮೆಟ್ರೋ ಸ್ಟೇಷನ್​​​​​​​​​ನಲ್ಲಿ ಜಾರಿಗೆ ತಂದಿದ್ದು ಭಾರಿ ವೈರಲ್ ಆಗಿತ್ತು, ಪ್ರಯಾಣಿಕರು ಯಾಕೆ ಸ್ಟೇಷನ್​​​​​​ನಲ್ಲಿ ಬಸ್ಕಿ ಹೊಡೆಯುತ್ತಿದ್ದಾರೆ ಎನ್ನುವುದು ಕೂಡ ಹಲವರಲ್ಲಿ ಮೂಡಿದ ಪ್ರಶ್ನೆಯಾಗಿತ್ತು. ಒಂದೇ ಸೆಟ್​​​ಗೆ ಅಂದರೆ 2 ನಿಮಿಷದಲ್ಲಿ 30 ಬಸ್ಕಿ ( ಸ್ಕ್ವಾಟ್ಸ್‌) ಹೊಡೆದರೆ ಅವರಿಗೆ ಫ್ರೀ ಟಿಕೆಟ್​​ ಕೊಡಲಾಗುವುದು ಅಂತ ಸೂಚಿಸಲಾಗಿತ್ತು. ಫ್ರೀ ಟಿಕೆಟ್​​ಗಾಗಿ ಪ್ರಯಾಣಿಕರು ಮೆಟ್ರೋ ಸ್ಟೇಷನ್​​​ ಬಸ್ಕಿ ಹೊಡೆದಿದ್ದಾರೆ. ಜನಸಾಮಾನ್ಯರಲ್ಲಿ ಫಿಟ್​ನೆಸ್​​​​​​​ ಅರಿವು ಮೂಡಿಸೋ ಪ್ರಯತ್ನ ಇದಾಗಿದೆ.

ಅದರಂತೆ ದೇಶದಲ್ಲಿ ಜಾರಿಗೆ ತಂದ ಯೋಜನೆಯಂತೆ ಫ್ರೀ ಟಿಕೆಟ್​​​ ಪಡೆದುಕೊಳ್ಳುವ ಆಸೆಯಿಂದಲಾದರೂ ಜನರು ತಮ್ಮ ನಾಗರೀಕರು ತಮ್ಮ ದೇಹವನ್ನ ಕೊಂಚ ದಂಡಿಸಲಿ, ಆರೋಗ್ಯವನ್ನು ಕಾಪಾಡಿಕೊಳ್ಳಲಿ ಎನ್ನುವ ಉದ್ದೇಶ ಇದಾಗಿದೆ. ಅದಕ್ಕಾಗಿ ಒಂದನ್ನು ಮಾಡಿದರೆ ಎರಡೆರಡು ಲಾಭವನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಭಾರತೀಯರೆಲ್ಲರೂ ಖುಷಿ ಪಡುವ ವಿಚಾರ ಬರೋಬ್ಬರಿ 12 ಲಕ್ಷ ಕೋಟಿ ರೂ. ಮೌಲ್ಯದ, 3 ಸಾವಿರ ಟನ್ ಚಿನ್ನದ ನಿಕ್ಷೇಪ ಭಾರತದಲ್ಲಿ ಪತ್ತೆ!!