ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯಾನಾ..?ಫ್ಯಾಶನ್..? ಇಲ್ಲಿದೆ ನೋಡಿ ನಿಮಗೆ ಗೊತ್ತಿರದ ವಿಷಯ.!

0
3333

ಮಕ್ಕಳಿಗೆ ಕಿವಿ ಚುಚ್ಚುವುದು ಭಾರತದಲ್ಲಿ ಅತ್ಯಂತ ಪ್ರಮುಖವಾದ ಸಂಪ್ರದಾಯವಾಗಿದೆ. ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ವೈಧ್ಯರು ಸಹ ಈ ಸಂಪ್ರದಾಯಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಚುಚ್ಚಿಸಿಕೊಳ್ಳುವ ವ್ಯಕ್ತಿಯಲ್ಲಿ ಬೌದ್ಧಿಕ ಬೆಳವಣಿಗೆಯನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಿವಿ ಚುಚ್ಚಿಸಿಕೊಳ್ಳುವುದರಿಂದ ಕಿವಿಯ ನಾಳಗಳ ಕಾಯಿಲೆಗಳಿಂದ ಮುಕ್ತವಾಗುವುದರ ಜೊತೆಗೆ ಮಾತನಾಡುವುದರಲ್ಲಿ ಇರುವ ಸಮಸ್ಯೆಗಳು ಸಹ ದೂರವಾಗುತ್ತದೆ.

Also read: ಹಿಂದೂ ಸಂಪ್ರದಾಯದ ಪೂಜಾ ಸಾಮಗ್ರಿಗಳ ಮಹತ್ವ ಹಾಗೂ ಅದರಿಂದಾಗುವ ಫಲಗಳ ಬಗ್ಗೆ ತಿಳಿದುಕೊಳ್ಳಿ..

ಕಿವಿ ಮನುಷ್ಯನ ಪ್ರಮುಖ ಪಂಚೇಂದ್ರಿಯಗಳಲ್ಲಿ ಒಂದು. ಶಬ್ದವನ್ನು ಮಾತನ್ನು ಸರಸ್ವತೀ ಎಂದೇ ಸನಾತನ ಸಂಸ್ಕೃತಿ ಪರಿಭಾವಿಸಿದೆ. ವಾಣಿಯನ್ನು ಪರಾ, ಪಶ್ಯಂತಿ, ಮಧ್ಯಮಾ, ವೈಖರೀ ಎಂದು ಅದರಲ್ಲಿ ವಿಧಗಳು. ಇವುಗಳನ್ನು ಅರಿಯಲು ಮಗುವಿನ ಕಿವಿ ಚುರುಕಾಗಬೇಕು. ಹಾಗಾಗಿ ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯ ವೈಜ್ಞಾನಿಕವಾಗಿ ಕೂಡ ಒಳ್ಳೆಯದು.

ಸಾಮಾನ್ಯವಾಗಿ ಮಕ್ಕಳಿಗೆ ಕಿವಿ ಚುಚ್ಚುವುದು ಹತ್ತನೇ ಹನ್ನೆರಡನೇ, ಅಥವಾ ಹದಿನಾರನೇ ದಿನ ಅಥವಾ ಆರನೇ, ಏಳನೇ, ಎಂಟನೇ, ಅಥವಾ ಹತ್ತನೇ ತಿಂಗಳಲ್ಲಿ ಅಥವಾ ಹನ್ನರಡನೇ ತಿಂಗಳಲ್ಲಿ ಮಾಡುವುದು. ಈ ಸಂಪ್ರದಾಯ ಗಂಡುಮಕ್ಕಳು, ಹೆಣ್ಣುಮಕ್ಕಳು ಇಬ್ಬರಿಗೂ ಮಾಡಲಾಗುತ್ತದೆ. ವಿಷ್ಣು, ರುದ್ರ, ಬ್ರಹ್ಮ , ಚಂದ್ರ, ಸೂರ್ಯ, ದಿಕ್ಪಾಲಕರು, ಅಶ್ವಿನೀದೇವತಾ,ಸರಸ್ವತೀ, ಗೋವು, ಬ್ರಾಹ್ಮಣ ಗುರು ಇವುಗಳನ್ನು ಪೂಜಿಸಿ, ಕಿವಿಗೆ ಅರಗಿನ ರಸವನ್ನು ಹಚ್ಚಿ, ಕಿವಿ ಚುಚ್ಚುವುದು ಸಂಪ್ರದಾಯ. ಗಂಡುಮಕ್ಕಳಿಗೆ ಮೊದಲು ಬಲದ ಕಿವಿಯನ್ನೂ, ಹೆಣ್ಣುಮಕ್ಕಳಿಗೆ ಮೊದಲು ಎಡದ ಕಿವಿಯನ್ನೂ ಚುಚ್ಚುವುದು ವಾಡಿಕೆ.

Also read: ಹಿಂದೂ ವಿವಾಹ ಸಂಪ್ರದಾಯದಲ್ಲಿ ನಡೆಯುವ ಶಾಸ್ತ್ರದಲ್ಲಿ ‘ಸಪ್ತಪದಿ’ ಬಹು ಮುಖ್ಯವಾದದ್ದು.. ಇಲ್ಲಿದೆ ನೋಡಿ ಸಪ್ತಪದಿ ಶಾಸ್ತ್ರದ ಬಗ್ಗೆ ಕಂಪ್ಲೀಟ್ ಡೀಟೇಲ್ಸ್..!!

ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯ ಭಾರತದಲ್ಲಿ ಮಾತ್ರ ಅಲ್ಲ ಇದನ್ನು ಪಾಶ್ಚಿಮಾತ್ಯ ದೇಶದವರು ಸಹ ಅನುಸರಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಕಿವಿಗಳಿಗೆ ಫ್ಯಾಶನ್ ಆಗಿ ತೋರುವ ಕಿವಿಯೋಲೆಗಳನ್ನು ಧರಿಸುತ್ತಿರೋದು.