ಭಾರತ ಶಿಕ್ಷಣ ನೀತಿ ದ್ವಂದ್ವ!!!

0
812

Kannada News | kannada Useful Tips

ಪ್ರಸ್ತುತ ಬಹುತೇಕ ಭಾರತೀಯ ವಿದ್ಯಾರ್ಥಿಗಳು ಕಲಿಕೆಗಾಗಿ ವಿದೇಶಗಳತ್ತ ಮುಖ ಮಾಡುತ್ತಿದ್ದಾರೆ. ಕಾರಣ, ಭಾರತೀಯ ಶಿಕ್ಷಣ ಪದ್ದತಿಯಲ್ಲಿ ಐದೈದು ವರ್ಷ ಕಲಿಯಬೇಕಾದ ಕೋರ್ಸ್‍ಗಳು. ವಿದೇಶಗಳಲ್ಲಿ ಮೂರು ವರ್ಷ ಮಾತ್ರ. ಅಲ್ಲದೇ ಅಲ್ಲಿ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು. ಭಾರತದಲ್ಲಿ ಪಠ್ಯ ಅರಿಯಲೆಂದೇ ಎರಡು ವರ್ಷ ಕಲಿಯಬೇಕು!

ವಿದೇಶಗಳಲ್ಲಿ ಪ್ರಾಯೋಗಿಕ ಕಲಿಕೆಗೆ ಶೇ.80ರಷ್ಟು ಆದ್ಯತೆ, ಪಠ್ಯಕ್ಕೆ ಶೇ.20ರಷ್ಟು. ಭಾರತದಲ್ಲಿ ಶೇ.90ರಷ್ಟು ಪಠ್ಯಕ್ಕೆ, ಶೇ.10ರಷ್ಟು ಪ್ರಾಯೋಗಿಕ! ಇಷ್ಟಲ್ಲದೇ ವಿದೇಶದಲ್ಲಿನ ವಿದ್ಯೆ ಭಾರತಕ್ಕಿಂತಲೂ ಹೆಚ್ಚು ಅಗ್ಗ. ಹೀಗಾಗಿ ಭಾರತೀಯ ವಿದ್ಯಾರ್ಥಿಗಳು ವಿದೇಶಗಳತ್ತ ಓಡುತ್ತಿದ್ದಾರೆ. ಅವರನ್ನು ಕರೆದೊಯ್ಯಲು ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ, ಫ್ರಾನ್ಸ್ ದೇಶಗಳು ಬೆಂಗಳೂರು ಸೇರಿದಂತೆ ದೇಶದಾದ್ಯಂತ ಸಮಾವೇಶ ಆಯೋಜಿಸುತ್ತವೆ. ಇಷ್ಟೆ ಅಲ್ಲ. ಆಫರ್‍ಶಿಪ್, ಸ್ಕಾಲರ್‍ಶಿಪ್, ಫ್ರೀಶಿಪ್ ಎಂಬ ಆಕರ್ಷಣೆಯ ಯೋಜನೆಗಳೂ ಇವೆ. ವಿದೇಶಗಳಲ್ಲಿ ನೀವು ಉದ್ಯೋಗ ಮಾಡುತ್ತಲೇ ಕೆಲಸ ಮಾಡಬಹುದು. ಇಲ್ಲಿ ಅದು ಸಾಧ್ಯವಿಲ್ಲ.

Image result for indian education
Image Credits: Shine.com

ವಿದೇಶಗಳಲ್ಲಿ ಶೈಕ್ಷಣಿಕ ವರ್ಷ ಜನವರಿಯಿಂದ ಆರಂಭಗೊಂಡು ಡಿಸೆಂಬರ್‍ಗೆ ಕೊನೆ. ಭಾರತದ್ದು ವಿಚಿತ್ರ ಸ್ಥಿತಿ. ಇಲ್ಲಿ ಜೂನ್‍ನಲ್ಲಿ ಶುರು. ಬಿರು ಮಳೆಗಾಲದಲ್ಲಿ ಆರಂಭಗೊಂಡು ಕಡು ಬೇಸಿಗೆಯಲ್ಲಿ ಮುಕ್ತಾಯ. ಇದರಿಂದಾಗಿ ವಿದೇಶಕ್ಕೆ ವ್ಯಾಸಾಂಗಕ್ಕೆ ತೆರಳಬೇಕೆನ್ನುವ ವಿದ್ಯಾರ್ಥಿಗಳು ಒಂದು ವರ್ಷ ಹಾಳು ಮಾಡಿಕೊಳ್ಳುವಂತಹ ಸ್ಥಿತಿ ಇದೆ. ಇದರ ಬಗ್ಗೆ ಯಾರೊಬ್ಬರು ಚಕಾರ ಎತ್ತುವುದಿಲ್ಲ.

Image result for indian education
Image Credits: EducationNews.org

ಜಾಗತೀಕರಣದ ನಂತರ ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣಗೊಂಡಿದೆ. ಶಿಕ್ಷಣ ಗುಣಮಟ್ಟ ಈಗ ಜಾಗತಿಕ ಹಂತದಲ್ಲಿ ನಿಷ್ಕರ್ಷೆಗೆ ಒಳಪಡುತ್ತಿದೆ. ಹೀಗಾಗಿ ಜಾಗತಿಕ ದೃಷ್ಟಿಕೋನ, ಜಾಗತಿಕ ಶಿಕ್ಷಣ ಕ್ಷೇತ್ರದಲ್ಲಿ ಆಗುವ ಬದಲಾವಣೆಗಳನ್ನು ಕಾಲಕ್ಕನುಗುಣವಾಗಿ ಅಳವಡಿಸಿಕೊಂಡು ತಪ್ಪುಗಳನ್ನು ತಿದ್ದಿತೀಡಿಕೊಂಡು ವಿದ್ಯಾರ್ಥಿಗಳ ಜ್ಞಾನ ಹರವು ಹೆಚ್ಚಿಸಬೇಕಾದ ಹೊಣೆಗಾರಿಗೆ ಎಂದಿಗಿಂತಲೂ ಇಂದು ಹೆಚ್ಚಾಗಿದೆ.

ಆದರೆ, ಖಾಸಗಿ ಸಂಸ್ಥೆಗಳು ಕಪಿಮುಷ್ಠಿ ಹಿಡಿತದಲ್ಲಿರುವ ಸರ್ಕಾರಗಳು ಏನನ್ನೂ ಮಾಡದೆಯೇ, ಯಾವೊಂದು ಸಕಾರಾತ್ಮಕ ಬದಲಾವಣೆಗೆ ಮುಂದಾಗದೆಯೇ ಶಿಕ್ಷಣ ಕ್ಷೇತ್ರವನ್ನು ನಿಂತ ನೀರಿನಂತೆ ಮಾಡಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ತಾಳಕ್ಕೆ ತಕ್ಕಂತೆ ಕುಣಿಯುವ ಸರ್ಕಾರವು ಕನಿಷ್ಟ ಪಕ್ಷ ಗುಣಮಟ್ಟ ಸುಧಾರಣೆ ದೃಷ್ಟಿಯಿಂದಲಾದರೂ, ಗುಣಾತ್ಮಕ ಬದಲಾವಣೆಯತ್ತ ಚಿಂತಿಸುವುದು ಇಂದಿನ ಅನಿವಾರ್ಯತೆ.

Also Read: ಪ್ರತಿಯೊಬ್ಬರೂ ಕ್ಯಾನ್ಸರ್ ಬಗ್ಗೆಗಿನ ಈ ಸಂಗತಿಗಳನ್ನು ತಿಳಿದಿರಲೇಬೇಕು!!!

Watch: