ಪ್ರತಿಯೊಬ್ಬ ಭಾರತೀಯನೂ ತಿಳಿಯಬೇಕಾದ ನಮ್ಮ ಭಾರತ ಧ್ವಜದ ವಿಷಯಗಳು!!!

0
1243

ನಮ್ಮ ತ್ರಿವರ್ಣ ಧ್ವಜ…
ಭಾರತದ ಮೊಟ್ಟಮೊದಲ ಬಾವುಟವನ್ನು ನಮ್ಮ ದೇಶದಲ್ಲಿ ಹಾರಿಸಿದ್ದು 110 ವರ್ಷಗಳ ಹಿಂದೆ. ರಾಷ್ಟ್ರಗೌರವದ ಸಂಕೇತವಾದ ಈ ಬಾವುಟ ವನ್ನು 1906ರ ಅಗಸ್ಟ್ 7 ರಂದು ಕಲ್ಕತ್ತೆಯ ಗ್ರೀನ್ ಪಾರ್ಕ್‍ನಲ್ಲಿ (ಪಾರ್ಸಿ ಬಗನ್ ಚೌಕ ) ಹಾರಿಸಲಾಯಿತು. ಕೆಂಪು ಹಳದಿ, ಹಸಿರು ತ್ರಿವರ್ಣದ ಅಡ್ಡಪಟ್ಟಿಗಳಿಂದ ಕೂಡಿದ ಈ ಬಾವುಟದ ಕೆಂಪು ಬಣ್ಣದ ಪಟ್ಟಿಯಲ್ಲಿ ಬಿಳಿಯ ಕಮಲದ ಹೂಗಳು, ಮಧ್ಯದ ಹಳದಿ ಬಣ್ಣದ ಪಟ್ಟಿಯಲ್ಲಿ ದೇವನಾಗರ ಲಿಪಿಯಲ್ಲಿ “ವಂದೇ ಮಾತರಂ‘ ಎಂಬ ಕಡು ನೀಲಿ ಬಣ್ಣದ ಅಕ್ಷರಗಳಿದ್ದವು. ಹಸಿರು ಪಟ್ಟಿಯಲ್ಲಿ ಸೂರ್ಯ, ಅರ್ಧಚಂದ್ರ ಹಾಗೂ ನಕ್ಷತ್ರವನ್ನು ಬಿಳಿ ಬಣ್ಣದಿಂದ ಚಿತ್ರಿಸಲಾಗಿತ್ತು. ಇದೇ ಮಾದರಿಯ ಧ್ವಜವನ್ನು ರೂಪಿಸಿ ವಿದೇಶದಲ್ಲಿ ಮೇಡಂ ಕಾಮಾ ಅವರು ಪ್ಯಾರಿಸ್ಸಿನ ಬರ್ಲಿನ್‍ದಲ್ಲಿ ಹಾರಿಸಿದ ದಾಖಲೆಗಳಿವೆ.

Image result for indian flag first hoisted
ವಿದೇಶದಲ್ಲೂ ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೂ ಸ್ಫೂರ್ತಿಯಾದದ್ದು “ವಂದೇ ಮಾತರಂ’’ ಎಂಬ ಅದ್ಭುತ ಶಕ್ತಿ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಹಲವು ವರ್ಷಗಳ ಬಳಿಕ ಮಹಾತ್ಮಗಾಂಧೀಜಿಯವರು ತಮ್ಮ ಪತ್ರ ಗಳನ್ನೆಲ್ಲ ವಂದೇ ಮಾತರಂ ಎಂದು ಬರೆದು ಮುಕ್ತಾಯಗೊಳಿಸುವುದು ವಾಡಿಕೆಯಾಗಿತ್ತು. ನೇತಾಜಿ ಸುಭಾಷ ಚಂದ್ರ ಬೋಸರ ಹಿಂದ್ ಫೌಜ್‍ನ ಸ್ಫೂರ್ತಿಗೀತೆ ಸಹ ವಂದೇ ಮಾತರಂ ಆಗಿತ್ತು.

Image result for indian flag first hoisted

ಬನಾರಸ್ ಕಾಂಗ್ರೆಸ್ ಅಧಿವೇಶನ ದಲ್ಲಿ (1905) ಕವಯತ್ರಿ ಸರಳಾದೇವಿ ಚೌದುರಾನಿ ಈ ಗೀತೆಯನ್ನು ಇಂಪಾಗಿ ಹಾಡಿದ್ದರು. ಲಾಲಾ ಲಜಪತ್‍ರಾಯ್ ಅವರು ವಂದೆ ಮಾತರಂ ಎಂಬ ಹೆಸರಿನ ಜರ್ನಲ್ ಪ್ರಾರಂಭಿ ಸಿದರು. ದಕ್ಷಿಣ ಭಾರತದಲ್ಲಿ ಈ ಹಾಡಿನ ಮೋಡಿಗೆ ಮರುಳಾದ ಸುಬ್ರಹ್ಮಣ್ಯ ಭಾರತೀಯವರು ಅದನ್ನು ತಮಿಳು ಭಾಷೆಗೆ ಅನುವಾದ ಮಾಡಿದರು. ಕಾಂಗ್ರೆಸ್ ಅಧಿವೇಶನದಲ್ಲಿ ಸಹ ಈ ಗೀತೆಯನ್ನು ಹಾಡುವ ಸಂಪ್ರದಾಯ ಬೆಳೆದು ಬಂದಿತು. 1937ರಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯು ಈ ಹಾಡಿನ ಮೊದಲೆರಡು ಪದ್ಯಗಳನ್ನು ಮಾತ್ರ ಹಾಡುವದಾಗಿ ತೀರ್ಮಾನಿಸಿತು. ಅದಕ್ಕೆ ಕಾರಣ ಈ ಹಾಡಿನಲ್ಲಿ ದುರ್ಗಾ ಮಾತೆಯ ಪ್ರಸ್ತಾಪವೇ ಕಾರಣವಾಗಿತ್ತು. 1947ರ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾರತದ ರಾಷ್ಟ್ರಗೀತೆಯಾಗಿ ಜನಗಣ ಮನವನ್ನು ನುಡಿಸಲಾಯಿತು.

Image result for indian flag in UN

ಭಾರತದ ಪ್ರಥಮ ರಾಷ್ಟ್ರಪತಿ ಡಾ || ರಾಜೇಂದ್ರ ಪ್ರಸಾದ ಅವರು 24/01/ 1950ರಂದು ನಡೆದ ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ಜನ..ಗಣ…ಮನವನ್ನು ರಾಷ್ಟ್ರಗೀತೆಎಂದು ಪ್ರಕಟಿಸುತ್ತ, ವಂದೇ ಮಾತರಂ ಗೀತೆಗೂ ಸಹ ಸಮಾನ ಸ್ಥಾನಮಾನವಿರುದಾಗಿ ಹೇಳಿದರು. 1947ರ ಆಗಸ್ಟ್ 14-15ರ ಮಧ್ಯರಾತ್ರಿಯ ಹೊತ್ತಿಗೆ ಸುಚೇತಾಕೃಪಲಾನಿಯವರು “ವಂದೇ ಮಾತರಂ ಹಾಡನ್ನು ಅತ್ಯಂತ ಸುಮಧುರವಾಗಿ ಹಾಡಿ ಸ್ವಾತಂತ್ರ್ಯೋತ್ಸಕ್ಕೆ ಸಂಭ್ರಮ ತಂದುಕೊಟ್ಟರು.

ಬಂಕಿಮ್‍ಚಂದ್ರಚಟರ್ಜಿ ಅವರು ಪ್ರಸಿದ್ಧ ಕಾದಂಬರಿಕಾರರಾಗಿದ್ದರೂ ಅವರು ರಚಿಸಿದ ವಂದೇ ಮಾತರಂ ಹಾಡು ಮಾತ್ರ ಭಾರತೀಯತೆಯ ಸಾರ್ವಕಾಲಿಕ ಮೌಲ್ಯವನ್ನು ಸಾರುವ ಗೀತೆಯಾಗಿ ಜನ ಜನಿತವಾಯಿತು. ಅದರೊಂದಿಗೆ ಅವರ ಹೆಸರೂ ಕೂಡಾ ಅಜರಾಮರವಾಯಿತು. ಅರ್ಧ ಬಂಗಾಳಿ ಹಾಗೂ ಅರ್ಧ ಸಂಸ್ಕøತದಲ್ಲಿ ಈ ಗೀತೆಯನ್ನು ಬರೆಯಲಾಗಿದೆ ಎಂಬ ಟೀಕೆ ಇದ್ದರೂ, ಈ ಹಾಡಿನ ತುಂಬ ಭಾರತ ಮಾತೆಯ ವರ್ಣನೆಯೇ ತುಂಬಿಕೊಂಡಿದೆ. ಭಾರತೀಯತೆಯನ್ನು ಅತ್ಯಂತ ಶಕ್ತಿಯುತ ವಾಗಿ ಹಾಗೂ ಪರಿ ಣಾಮಕಾರಿಯಾಗಿ ಸಾರುವ ಹಾಡು ಬಹುಶಃ ಬೇರೊಂದಿಲ್ಲ.

Image result for indian flag vande mataram

ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ ಜವಹರಲಾಲ್ ನೆಹರೂ ಅವರು ‘ವಂದೇ ಮಾತರಂ‘ ವಿಸ್ತಾರವಾದ ಐತಿ ಹಾಸಿಕ ಪರಂಪರೆಯಿರುವ ಭಾರತದ ಶ್ರೇಷ್ಠ ರಾಷ್ಟ್ರಗೀತೆಯೆಂಬುದರಲ್ಲಿ ಯಾವುದೇ ವಿವಾದವಿಲ್ಲ. ಅಂತಹ ಉತ್ಕøಷ್ಟ ಸ್ಥಾನವನ್ನು ಅಲಂಕರಿಸಿರುವ ಅದನ್ನು ಆ ಎತ್ತರದಿಂದ ಕೆಳದಬ್ಬುವಂತೆಯೇ ಇಲ್ಲ ಎಂದಿದ್ದಾರೆ. ಶ್ರೀ ಅರವಿಂದ ಘೋಷ ಹಾಗೂ ಬಿಪಿನ್‍ಚಂದ್ರ ಪಾಲ್‍ಅವರು `ವಂದೇ ಮಾತರಂ ಕೇವಲ ಶಬ್ದಗಳ ಆಡಂಬರವಲ್ಲ ಅದು ಒಂದು ದಿವ್ಯಮಂತ್ರ. ಕಿವಿಗೆ ಕೇಳುವಷ್ಟೇ ಅಲ್ಲ ; ಕೇಳುಗರನ್ನು ಜೊತೆಗೆ ಕೊಂಡೊಯ್ಯುವ ಅದ್ಭುತ ಶಕ್ತಿ ಎಂಬುದಾಗಿ ಹೇಳಿದ್ದಾರೆ. ಅಂತೆಯೇ ಇಂದಿಗೂ ಈ ಹಾಡು ಅಮೋಘ ಶಕ್ತಿಯಾಗಿ ನಮ್ಮನ್ನು ಹುರಿದುಂಬಿಸುವದರ ಜೊತೆಗೆ ನಮ್ಮೆಲ್ಲರ ಒಡಲಿಲ್ಲ ರಾಷ್ಟ್ರಪ್ರೇಮವನ್ನು ಪ್ರಜ್ವಲಗೊಳಿಸುತ್ತಿದೆ.