ನಲ್ಲಿಕಾಯಿಯ ಈ ಹತ್ತು ಗುಣಗಳು ಆರೋಗ್ಯಕ್ಕೆ ಅತ್ಯುತ್ತಮ!!!

0
3773

ಕಾರ್ತಿಕ ಮಾಸ ಬಂದೊಡನೆ ಎಲ್ಲೆಲ್ಲಿಯೂ ನೆಲ್ಲಿಕಾಯಿಗಳದ್ದೇ ಸುಗ್ಗಿ.. ಪೂಜಾ ಕಾರ್ಯಗಳಷ್ಠೆಯೇ ಅರೋಗ್ಯ ನಿರ್ವಹಣೆಗಳಲ್ಲಿಯೂ ನೆಲ್ಲಿಕಾಯಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ವಿಟಮಿನ್ ಸಿ, ಫೈಬರ್ (ನಾರು), ಪೆಕ್ಟಿನ್ ಹಾಗು ನಿಕೊಟಿನಿಕ್ ಆಮ್ಲಗಳು ಹೇರಳವಾಗಿದ್ದು ಸ್ವಲ್ಪ ಪ್ರಮಾಣದ ಗ್ಯಾಲಿಕ್ ಆಮ್ಲ , ಎಲಾಜಿಕ್ ಆಮ್ಲ ಹಾಗು ಗ್ಲುಕೋಸ್ ಅನ್ನು ಹೊಂದಿರುತ್ತದೆ.

  • ೨ಸ್ಪೂನ್ ನೆಲ್ಲಿಕಾಯಿ ರಸಕ್ಕೆ ೨೫ ಗ್ರಾಂ ಅಮೃತಬಳ್ಳಿ/ ಅಗ್ನಿಬಳ್ಳಿ ಪುಡಿ ಬೆರೆಸಿ ಸೇವಿಸಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ
  • ೧ ಚಮಚ ನೆಲ್ಲಿಕಾಯಿ ಪುಡಿಯನ್ನು ೧ ಸ್ಪೂನ್  ಸಕ್ಕರೆಯೊಡನೆ ೧ ಗ್ಲಾಸ್ ಹಾಲು ಅಥವಾ ನೀರಿನೊಂದಿಗೆ ದಿನಕ್ಕೆರಡು ಬಾರಿ ಸೇವಿಸಿದರೆ ಅಸಿಡಿಟಿ ಹಾಗು ಅಜೀರ್ಣದಿಂದ ಮುಕ್ತಿ ಪಡಿಯಬಹುದು.
  • ನೆಲ್ಲಿಕಾಯಿ ಶರಬತ್ತು ಹಾಗು ನಿಂಬೆ ರಸ ಮಿಶ್ರಣ ಮಾಡಿ ಕುಡಿಯುತ್ತಿದ್ದಲ್ಲಿ ರಕ್ತ ಭೇದಿಯನ್ನು ತಡೆಗಟ್ಟಬಹುದು.
  • ನೆಲ್ಲಿಕಾಯಿ ನೆನಸಿಟ್ಟ ನೀರಿಗೆ ಚಿಟಿಕೆ ಅಡಿಗೆ ಉಪ್ಪು ಬೆರೆಸಿ ಕುಡಿಯುತ್ತಿದ್ದಲ್ಲಿ ತಲೆಸುತ್ತು, ದಣಿವು ದೂರಗೊಳ್ಳುತ್ತದೆ.
  • ನೆಲ್ಲಿಕಾಯಿ ಎಲೆಯನ್ನು ಕುಡಿಸಿ ತಯಾರಿಸಿದ ನೀರಲ್ಲಿ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ಗಂಧವನ್ನು ಹೋಗಲಾಡಿಸಬಹುದು.
  • ನೆಲ್ಲಿ, ನೇರಳೆ ಹಾಗು ಹಾಗಾಲಕ್ಕಾಯಿ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸುತ್ತಾ ಬಂದಲ್ಲಿ ಮಧುಮೇಹವನ್ನು ನಿಯಂತ್ರಿಸಬಹುದು.
  • ೧ ಚಮಚ ನೆಲ್ಲಿ ಎಲೆಯ ಪೇಸ್ಟ್ ಅನ್ನು ೧ ಚಮಚ ಜೇನುತುಪ್ಪದೊಂದಿಗೆ ಸೇವಿಸಿದ್ದಲ್ಲಿ ಭೇದಿ ಹತೋಟಿಯಲ್ಲಿರುತ್ತದೆ.
  • ಬಲಿತಕಾಯಿಯನ್ನು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ತಯಾರಿಸಿದ ತೈಲವನ್ನು ಪ್ರತಿದಿನ ತಲೆಗೆ ಹಚ್ಚುತ್ತಿದ್ದರೆ ಕೂದಲು ಕಪ್ಪಾಗಿ ಹಾಗು ದಟ್ಟವಾಗಿ ಬೆಳೆಯುತ್ತದೆ. ಇದರಿಂದ ದೃಷ್ಟಿ ದೋಷಗಳು ದೂರಗೊಳ್ಳುತ್ತವೆ.
  • ಅಳಲೆಕಾಯಿ, ತಾರೆಕಾಯಿ ಹಾಗು ಬೆಟ್ಟದ ನೆಲ್ಲಿಕಾಯಿ ಮಿಶ್ರಣವನ್ನು( ತ್ರಿಫಲಾ) ದಿನಾ ಬೆಳಿಗ್ಗೆ  ೧ ಚಮಚ ಜೇನುತುಪ್ಪದೊಂದಿಗೆ ಸೇವಿಸುತ್ತಾ ಬಂದಲ್ಲಿ ಉತ್ತಮ ಅರೋಗ್ಯ ನಿಮ್ಮದಾಗುತ್ತದೆ.
  • ಹೆಂಗಸರು ನಿಯಮಿತವಾಗಿ ನೆಲ್ಲಿಕಾಯಿಯನ್ನು ಸೇವಿಸುತ್ತಾ ಬಂದಲ್ಲಿ ಮುಟ್ಟಿನ ಸಮಸ್ಯೆ, ಬಿಳಿ ಸೆರಗು, ಸುಸ್ತು ಹಾಗು ನಿಶ್ಶಕ್ತಿಗಳಿಂದ ಮುಕ್ತಿ ಹೊಂದಬಹುದು.