ಭಾರತದ ಸಾಫ್ಟ್ವೇರ್ ಉದ್ಯೋಗಿಗಳು, ವಿಶ್ವದಲ್ಲೇ ಅತಿ ಕಡಿಮೆ ಸಂಬಳ ಪಡೆಯುತ್ತಿದ್ದಾರೆ!!

0
943
ಭಾರತದಲ್ಲಿ ಇರುವ ಐಟಿ ಉದ್ಯೋಗಿಗಳು ಅತಿ ಕಡಿಮೆ ಸಂಬಳ ಪಡೆಯುತ್ತಾರೆ ಎಂದು ವರದಿ ತಿಳಿಸಿದೆ.ಈ ವರದಿಯ ಅನುಸಾರ ಅತಿ ಕಡಿಮೆ ಸ್ಯಾಲರಿ ಪಡೆಯುವ ವಿಶ್ವದ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ ಲಭಿಸಿದೆ. ಇಲ್ಲಿನ ಐಟಿ ಮಧ್ಯಮ ಅನುಭವದ ಮ್ಯಾನೇಜರ್ ಗಳು ಸುಮಾರು 26 ಲಕ್ಷ ರೂ (41 ಸಾವಿರ ಡಾಲರ್)ಸಂಬಳವನ್ನು ಪಡೆಯುತ್ತಾರೆ. ಸ್ವಿಸ್ ಐಟಿ ಕಂಪನಿಗಳು ಇದರ ನಾಲ್ಕು ಪಟ್ಟು ಹೆಚ್ಚಿನ ವೇತನ ಪಡೆಯುತ್ತಾರೆ.
Image result for indian software engineers
ಕಳೆದ ಕೆಲವು ವರ್ಷಗಳಲ್ಲಿ ಭಾರತದ ಪ್ರತಿಭಾನ್ವಿತ ಐಟಿ ಉದ್ಯೋಗಿಗಳು ವಿಶ್ವದಲ್ಲೇ ಹೆಚ್ಚಿನ ಮನ್ನಣೆ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ನಮ್ಮ ದೇಶವಾಸಿಗಳಿಗೆ ಕಡಿಮೆ ಸಂಬಳಕ್ಕೆ ಬುಟ್ಟಿ ಹಾಕುವ ಕಂಪನಿಗಳು ಹೆಚ್ಚುಕೆಲಸ ತೆಗೆಸುತ್ತಾರೆ. ಕಡಿಮೆ ಸಂಬಳ ನೀಡುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 7ನೇ ಸ್ಥಾನ. ಬಲ್ಗೇರಿಯಾ, ವೀಯೆಟ್ನಾಮ್, ಥಾಯ್ಲೆಂಡ್ ಭಾರತಕ್ಕಿಂತ ಕಮ್ಮಿ ಸಂಬಳ ನೀಡುತ್ತವೆ. ಕಂಪನಿಗಳು ಭಾರತದಲ್ಲಿ ಪ್ರದೇಶಗಳಿಗೆ ಅನುಗುಣವಾಗಿ ಸಂಬಳ ನೀಡುತ್ತವೆ. ಇನ್ನು ಪಶ್ಚಿಮ್ ಯೂರೋಪ್ ಹಾಗೂ ಅಮೆರಿಕದಲ್ಲಿ ಐಟಿ ಉದ್ಯೋಗಿಗಳ ಸಂಖ್ಯೆ ತೀರಾ ಕಡಿಮೆ. ಈ ದೇಶಗಳು ಹೊರ ಗುತ್ತಿಗೆ ನೀಡುವುದರಿಂದ ಜಾಗತಿಕ ವೇತನದಲ್ಲಿ ಏರು ಪೇರು ಕಾಣಲು ಪ್ರಮುಖ ಕಾರಣವಾಗಿದೆ.
ನಾವು ಪಡೆಯುವ ಸಂಬಳ ಹಾಗೂ ಕೆಲಸದಿಂದ ಜೀವನದಲ್ಲಿ ಬೆಳವಣಿಗೆ ಕಾಣಲು ಸಾಧ್ಯವಿಲ್ಲ ಎಂದುನೊಂದ ಉದ್ಯೋಗಿ ತಿಳಿಸಿದ್ದಾರೆ.
Image result for indian software engineers
ಭಾರತದ ಕಂಪನಿಗಳು ಹೊರ ಗುತ್ತಿಗೆಯನ್ನೇ ಹೆಚ್ಚಾಗಿ ನಂಬಿವೆ. ಇದಕ್ಕೆ ಕಾರಣವೂ ಕಮ್ಮಿ ಸಂಬಳ ಎಂದರೆ ತಪ್ಪಾಗಲಾರದು. ಚೀನಾ ನಮ್ಮ ದೇಶಕ್ಕಿಂತ ಕೊಂಚ ಹೆಚ್ಚಿನ ಸಂಬಳ ನೀಡುತ್ತಿದ್ದು,ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ವಿಶ್ವದಲ್ಲಿ ಅತಿ ಹೆಚ್ಚು ಸಂಬಳ ನೀಡುವ ರಾಷ್ಟ್ರಗಳ ಪೈಕಿ ಸ್ವಿಜರ್ಲೆಂಡ್ ಗೆ ಅಗ್ರಸ್ಥಾನ. ಬೆಲ್ಜಿಯಂ ಹಾಗೂ ಡೆನ್ಮಾಕ್ ರಾಷ್ಟ್ರಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ವರದಿಯ ಪ್ರಕಾರ ಇಂಡೋನೇಷ್ಯಾ (೪), ಫಿಲಿಫೈನ್ಸ್ (೫), ಜೆಕ್ ಗಣರಾಜ್ಯ, ಅರ್ಜೆಂಟೀನಾ, ಚೀನಾ ದೇಶ ನಂತರದ ಸ್ಥಾನದಲ್ಲಿವೆ.