ದೆವ್ವ, ಭೂತ, ಪ್ರೇತಗಳಿಂದ ಮುಕ್ತಿ ನೀಡುವ ಭಾರತದ ಪ್ರಸಿದ್ಧ ದೇವಾಲಯಗಳು!!

0
1828

ಪುರಾತನ ಇತಿಹಾಸವನ್ನು ಹೊಂದಿರುವ ಭಾರತದಲ್ಲಿ ನಂಬಿಕೆ, ಮುಡನಂಬಿಕೆ, ಆಚಾರ, ವಿಚಾರಗಳಿಗೆ ವಿಶೇಷ ಸ್ಥಾನವಿದೆ. ಆತ್ಮ, ದೆವ್ವ, ದೇವರನ್ನು ಇಲ್ಲಿಯ ಜನ ನಂಬುತ್ತಾರೆ. ಈ ಶಕ್ತಿಗಳ ತಡೆಗೂ ನಮ್ಮ ದೇಶದಲ್ಲಿ ದೇವಾಲಯಗಳು ಇವೆ. ಅವುಗಳ ಪರಿಚಯ ಇಲ್ಲಿದೆ.

ಮಹೇಂದಿಪುರ್ ಬಾಲಾಜಿ ದೇವಸ್ಥಾನ, ರಾಜಸ್ಥಾನ

ನಮ್ಮ ದೇಶದಲ್ಲಿ ಅದೆಷ್ಟೋ ಹನುಮಂತನ ದೇವಸ್ಥಾನಗಳಿವೆ. ಆದರೆ ಈ ದೇವಸ್ಥಾನ ವಿಶಿಷ್ಠವಾಗಿದೆ. ರಾಜಸ್ಥಾನದ ದೋಸಾ ಜಿಲ್ಲೆಯಲ್ಲಿ ಮೆಹೇಂದಿಪುರ ಬಾಲಾಜಿ ದೇವಸ್ಥಾನವಿದೆ. ಇಲ್ಲಿ ಪ್ರೇತಾತ್ಮಗಳಿಂದ ಮುಕ್ತಿ ಹೊಂದಲು ಜನ  ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಸರಪಳಿಯಿಂದ ಕಟ್ಟಿ, ತಲೆಕೆಳೆಗಾಗಿ ನಿಂತವರು ತಮ್ಮಲ್ಲಿನ ಆತ್ಮಕ್ಕೆ ಮುಕ್ತಿ ನೀಡುತ್ತಾರೆ.

ಹಜರತ್ ಸೈಯದ್ ಅಲಿ ಮಿರ್ಜಾ ದತರ್ ದರ್ಗಾ, ಗುಜರಾತ

ಗುಜರಾತ್ ನ ಉನಿವಾ ಗ್ರಾಮದಲ್ಲಿ ಈ ದರ್ಗಾ ಇದೆ. ಈ ಸ್ಥಳದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಹೆಣ್ಣು ಮಕ್ಕಳನ್ನು ನೋಡಬಹುದು. ಈ ದರ್ಗಾಕ್ಕೆ ಎಲ್ಲ ಧರ್ಮಿಯರು ಭೇಟಿ ನೀಡಿ, ಖಿನ್ನತೆಯಿಂದ ಮುಕ್ತಿ ಹೊಂದಲು ಪ್ರಾರ್ಥಿಸುತ್ತಾರೆ.

ಶ್ರೀ ಕಷ್ಟಭಾಂಜನ್ ದೇವ ಹನುಮಾನ್ ಜೀ ದೇವಸ್ಥಾನ, ಗುಜರಾತ್

ಈ ಸ್ಥಳದಲ್ಲಿ ಹನುಮಂತ ದೇವಸ್ಥಾನವಿದ್ದು, ಇಲ್ಲಿಗೆ ಜನ ದುಷ್ಟಶಕ್ತಿ, ದೆವ್ವ ಮತ್ತು ಕೆಟ್ಟ ಶಕ್ತಿಗಳ ದೂರವಾಗಲು ಬರುತ್ತಾರೆ.

ದೇವಜಿ ಮಹಾರಾಜ್ ಮಂದೀರ್, ಮಧ್ಯ ಪ್ರದೇಶ

ಈ ದೇವಸ್ಥಾನಕ್ಕೆ ಹುಣ್ಣಿಮೆಯಂದು ಹೆಚ್ಚಾಗಿ ಜನ ಭೇಟಿ ನೀಡುತ್ತಾರೆ. ಇಲ್ಲಿ ವರ್ಷದಲ್ಲಿ ಒಂದು ಬಾರಿ ಭೂತ ಮೇಳ ನಡೆಯುತ್ತದೆ. ಇಲ್ಲಿ ಒಂದು ಸ್ಥಳದಲ್ಲಿ ಜನ ಓಡುವುದು, ತಲೆ ಚೆಚ್ಚಿಕೊಳ್ಳುವುದನ್ನು ಕಾಣಬಹುದು.

ದತ್ತಾತ್ರೆಯ ದೇವಸ್ಥಾನ, ಗಾಣಗಾಪುರ

ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯಲ್ಲಿರುವ ಗಾಣಗಾಪುರ ದೇವಸ್ಥಾನಕ್ಕೂ ವಿಶೇಷ ಸ್ಥಾನವಿದೆ. ಈ ದೇವಸ್ಥಾನಕ್ಕೆ ಬಂದವರು ಮಹಾಮಂಗಳಾರತಿ ಸಮಯದಲ್ಲಿ ಚಿರುವುದು, ಕಿರಿಚುವುದು ಸಾಮಾನ್ಯ. ಅಲ್ಲದೆ ಇಲ್ಲಿಗೆ ಬಂದ ಆತ್ಮದಿಂದ ಪೀಡಿತ ವ್ಯಕ್ತಿಗಳು ಕಂಬ ಏರುವುದು, ಉಲ್ಟಾ ನಡೆಯುತ್ತಾರೆ.

ನಿಜಾಮುದ್ಧಿನ ದರ್ಗಾ ದೆಹಲಿ

ಈ ದರ್ಗಾಕ್ಕೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಇಲ್ಲಿ ಭೂತಗಳನ್ನು ಬಿಡಿಸಲು ಪ್ರತ್ಯೇಕ ಕೋಣೆ ಇದೆ.

ಚಾಂದಿ ದೇವಿ ದೇವಸ್ಥಾನ, ಹರಿದ್ವಾರ

ಈ ದೇವಸ್ಥಾನದಲ್ಲಿ ಚಾಂದಿ ದೇವಿಯ ಆರಾಧನೆ ನಡೆಯುತ್ತದೆ. ಇದು ಸಹ ಭೂತಗಳನ್ನು ಬಿಡಿಸುವ ಮತ್ತೊಂದು ಸ್ಥಳ. ನವರಾತ್ರಿ ಸಮಯದಲ್ಲಿ ದೇವಿ ಇಲ್ಲಿ ಜಾಗೃತಳಾಗಿರುತ್ತಾಳೆ ಎಂದು ಇಲ್ಲಿ ಜನರ ನಂಬಿಕೆ.

ಹರಸು ಬ್ರಹ್ಮಾ ದೇವಸ್ಥಾನ, ಬಿಹಾರ

ಬಿಹಾರ-ಉತ್ತರ ಪ್ರದೇಶ ಗಡಿಯಲ್ಲಿ ಈ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ನಿರಾಶೆಗೊಳಾದ ಬ್ರಾಹ್ಮಣ ಸಮುದಾಯದ ಆತ್ಮಗಳನ್ನು ನಾವು ಹೆಚ್ಚಾಗಿ ಕಾಣಬಹುದು. ಇಲ್ಲಿಯೂ ಸಹ ಭೂತಗಳನ್ನು ಬಿಡಿಸಲಾಗುತ್ತದೆ.

ಸಂತ್ ಸಬೀರ್ ಶಾ ದರ್ಗಾ ಚೈನ್ ಪುರ

ಈ ಸ್ಥಳದಲ್ಲಿ ಯುವಕರು ಸರಪಳಿ ತೊಟ್ಟು ಗೊಡೆಗೆ ಅಂಟ್ಟಿಕೊಂಡಿರುವಂತೆ ದೃಶ್ಯ ಸರ್ವೆ ಸಾಮಾನ್ಯ.

Also read: ದೆವ್ವ ಭೂತಗಳು ನಿಮ್ಮನ್ನ ಅಥವಾ ಮನೆ ಬಿಟ್ಟು ಹೋಗಬೇಕಂದ್ರೆ ಈ ಏಳು ಕೆಲಸಗಳನ್ನು ಮಾಡಿ…!