ಬ್ರೆಜಿಲ್​ಗೆ ಪ್ರವಾಸ ಹೋಗುವ ಭಾರತೀಯರಿಗೆ ಇನ್ಮುಂದೆ ವೀಸಾ ಬೇಕಿಲ್ಲಾ; ವಿಮಾನ ಏರಿ ಬೆಂಗಳೂರಿನಿಂದ ದಿಲ್ಲಿಗೆ ಹೋಗುವಷ್ಟು ಸಲಿಸಾಗಿದೆ.!

0
249

ಯಾವುದೇ ದೇಶಕ್ಕೆ ಹೋಗಲು ವೀಸಾ ಬೇಕೇಬೇಕು ಅದಕ್ಕಾಗಿ ಹಲವು ದಿನಗಳು ಕಷ್ಟಪಟ್ಟು ವೀಸಾ ಪಡೆಯುತ್ತಾರೆ. ಒಂದು ವೇಳೆ ವೀಸಾ ಇಲ್ಲದೆ ಜೀವನದಲ್ಲಿ ಯಾವುದಾದರೂ ದೇಶಕ್ಕೆ ಹೋಗಬೇಕು ಎನ್ನುವುದು ಅಸಾಧ್ಯವಾಗಿದೆ. ಇದರಿಂದಲೇ ಹಲವು ವಿದೇಶ ಪ್ರವಾಸವನ್ನು ಕೈಬಿಟ್ಟಿದ್ದಾರೆ. ಆದರೆ ಈ ಒಂದು ದೇಶಕ್ಕೆ ವೀಸಾ ವಿಲ್ಲದೆ ಪ್ರವಾಸ ಮಾಡಬಹುದಂತೆ. ಇಂತಹ ಒಂದು ಒಳ್ಳೆಯ ಅವಕಾಶವನ್ನು ಬ್ರೆಜಿಲ್ ನೀಡಿದ್ದು. ಇನ್ಮುಂದೆ ಬೆಂಗಳೂರಿನಿಂದ ದಿಲ್ಲಿಗೆ ವಿಮಾನ ಏರಿ ಪ್ರವಾಸ ಮಾಡುವಷ್ಟೇ ಸಲೀಸಾಗಿ ಬ್ರೆಜಿಲ್‌ಗೂ ಹೋಗಿ ಬರಬಹುದು.

Also read: ಹಬ್ಬದ ಪ್ರಯಕ್ತ ಸುಲಿಗೆಗೆ ನಿಂತ ಬಸ್‍ಗಳು; ಬಿ.ಎಸ್.ಯಡಿಯೂರಪ್ಪ ಅವರಿಗೆ ಬಸ್ ಟಿಕೆಟ್ ಬುಕ್ ಮಾಡಿ ದೀಪಾವಳಿ ಹಬ್ಬಕ್ಕೆ ಆಹ್ವಾನಿಸಿದ ಪ್ರಯಾಣಿಕ.!

ಬ್ರೆಜಿಲ್ ಪ್ರವಾಸಕ್ಕೆ ವೀಸಾ ಬೇಕಿಲ್ಲ?

ಹೌದು ನಿವೇನಾದರು ಬ್ರೆಜಿಲ್‌ ದೇಶಕ್ಕೆ ಪ್ರವಾಸ ಹೋಗುವ ಯೋಚನೆ ಇದ್ದರೆ, ಅದಕ್ಕಾಗಿ ವೀಸಾ ಮಾಡಿಸಲು ಅಲೆಯುತ್ತಿದ್ದರೆ ಆ ಚಿಂತೆಯನ್ನು ಬಿಟ್ಟುಬಿಡಿ ಏಕೆಂದರೆ ನಿಮಗೊಂದು ಸಂತಸದ ಸುದ್ದಿಯನ್ನು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನರೋ ಈ ವಿಚಾರವನ್ನು ಪ್ರಕಟಿಸಿದ್ಧಾರೆ. ಭಾರತ ಹಾಗೂ ಚೀನಾ ಎರಡೂ ದೇಶಗಳ ಪ್ರವಾಸಿಗರಾಗಲಿ, ಉದ್ಯಮಿಗಳಾಗಲೀ ಬ್ರೆಜಿಲ್‌ಗೆ ಹೋಗಬೇಕಾದರೆ ವೀಸಾಗಾಗಿ ಅರ್ಜಿ ಹಾಕಿ ಕಾಯುತ್ತಾ ಕೂರಬೇಕಾದ ಸನ್ನವೇಶವೇ ಇಲ್ಲವಾಗಿದೆ. ಉತ್ತರ ಅಮೆರಿಕದಲ್ಲಿರುವ ಬ್ರೆಜಿಲ್ ದೇಶ, ವೀಸಾ ವಿನಾಯಿತಿ ನೀಡುವ ಮೂಲಕ ಭಾರತೀಯರಿಗೆ ಹತ್ತಿರವಾಗಿದೆ.

Also read: ಎಲ್ಲ ಅಂಗಡಿ-ಮುಂಗಟ್ಟುಗಳ ಮೇಲೆ ನವೆಂಬರ್ 1ರ ಒಳಗೆ ಕನ್ನಡ ನಾಮಫಲಕ ಹಾಕದಿದ್ದರೆ ಪರವಾನಗಿ ರದ್ದು??

ಬಲಪಂಥೀಯ ರಾಜಕಾರಣಿ ಎಂದೇ ಗುರ್ತಿಸಿಕೊಂಡಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನರೋ, ಈ ವರ್ಷಾರಂಭದಲ್ಲಿ ಅಧಿಕಾರ ಸ್ವೀರಿಸಿದ್ದಾರೆ. ಸದ್ಯ ಚೀನಾ ಪ್ರವಾಸದಲ್ಲಿರುವ ಜೈರ್, ಈ ಘೋಷಣೆ ಮಾಡಿದ್ದಾರೆ. ಅತ್ಯಧಿಕ ಜನಸಂಖ್ಯೆ ಹೊಂದಿರುವ ಭಾರತ ಹಾಗೂ ಚೀನಾ ದೇಶಗಳ ಪ್ರವಾಸಿಗರನ್ನು ತಮ್ಮತ್ತ ಸೆಳೆಯುವುದು ಬ್ರೆಜಿಲ್ ಉದ್ದೇಶವಾಗಿದೆ. ಬ್ರೆಜಿಲ್‍ನ ಮೆಗಾಸಿಟಿ ಸಾವೋ ಪಾಲೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬ್ರೆಜಿಲ್‍ಗೆ ಭೇಟಿ ನೀಡುವ ಭಾರತೀಯರು ಮತ್ತು ಚೀನಿಯರಿಗೆ ಇನ್ನು ಮುಂದೆ ವೀಸಾ ಅಗತ್ಯವಿಲ್ಲ ಎಂದು ಹೇಳಿದರು. ಈ ಹೊಸ ನೀತಿಯಿಂದ ಭಾರತದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಬ್ರೆಜಿಲ್ ಅಧ್ಯಕ್ಷರು ಮುಂದಾಗಿದ್ದಾರೆ.

Also read: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 24 ಘಂಟೆಯಲ್ಲಿ ರದ್ದು ಮಾಡಿದ ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಆಚರಣೆ ಮಾಡುತ್ತೇವೆ ಎಂದ ಬಿಜೆಪಿ ಅಭ್ಯರ್ಥಿ.!

ಅದರಂತೆ ಅತ್ಯಧಿಕ ಜನಸಂಖ್ಯೆ ಹೊಂದಿರುವ ಭಾರತ ಹಾಗೂ ಚೀನಾ ದೇಶಗಳ ಪ್ರವಾಸಿಗರನ್ನು ತಮ್ಮತ್ತ ಸೆಳೆಯುವುದು ಬ್ರೆಜಿಲ್ ಉದ್ದೇಶವಾಗಿದೆ. ಈ ಹಿಂದೆ ಮುಂದುವರೆದ ದೇಶಗಳ ಪಟ್ಟಿಯಲ್ಲಿರುವ ಹಲವು ರಾಷ್ಟ್ರಗಳ ಪ್ರಜೆಗಳಿಗೆ ವೀಸಾ ನಿಯಮ ಸಡಿಲಗೊಳಿಸಿತ್ತು. ಅಮೆರಿಕ, ಕೆನಡಾ, ಜಪಾನ್ ಹಾಗೂ ಆಸ್ಟ್ರೇಲಿಯಾದ ಪ್ರವಾಸಿಗರು ಹಾಗೂ ಉದ್ಯಮಿಗಳು ಬ್ರೆಜಿಲ್‌ಗೆ ಬರಲು ವೀಸಾ ಬೇಕಿಲ್ಲ ಎಂದು ನಿಯಮಾವಳಿ ಬದಲಾವಣೆ ಮಾಡಿತ್ತು. ಇದೀಗ ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ ಹಾಗೂ ಚೀನಾಗೂ ಇದೇ ನಿಯಮವನ್ನು ಅನ್ವಯಿಸಿದೆ.

ಈಗ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ಪ್ರವಾಸಿಗರಂತೆ ಭಾರತದ ಪ್ರವಾಸಿಗರಿಗೆ ಅವಕಾಶ ನೀಡಿದ್ದು, ಬ್ರೆಜಿಲ್‌ನ ರಿಯೋ ಡಿ ಜೆನೈರೋದಲ್ಲಿರುವ ವಿಶ್ವ ಪ್ರಸಿದ್ಧ ಕ್ರೈಸ್ಟ್‌ ದಿ ರಿಡೀಮರ್ ಪ್ರತಿಮೆ ನೋಡುವ ಹೆಬ್ಬಯಕೆ ಹೊಂದಿರುವ ಪ್ರವಾಸಿಗರಿಗೆ, ವೀಸಾ ರಹಿತ ಪ್ರವಾಸದ ಹೇಳಲಾರದಷ್ಟು ಸಂತಸ ತಂದಿದೆ.