ಚೀನಾವನ್ನು ಹಿಂದಿಕ್ಕಿ 7.2% ಜಿಡಿಪಿ ಪಡೆದ ಭಾರತ

0
503

Indias-7.2%-gdp-growth-overtakes-China| Kannada News

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಆರ್ಥಿಕ ಸುಧಾರಣೆಗಳನ್ನು ಮಾಡಿತ್ತು.. ಇದರ ಪರಿಣಾಮ ದೇಶದ ಜಿಡಿಪಿ ದರದಲ್ಲಿ ಕುಸಿತ ಕಂಡಿತ್ತು.. ಟೀಕಾಕಾರರ ಮಾತಿಗೆ ಗುರಿಯೂ ಕೂಡ ಆಗಿತ್ತು..‌

ಆದರೆ ಇದೀಗ ಮೂರನೇ ತ್ರೈಮಾಸಿಕದಲ್ಲಿ ತಾತ್ಕಾಲಿಕ ಕುಸಿತದಿಂದ ಹೊರ ಬಂದು ದೇಶದ ಆಂತರಿಕ ಉತ್ಪನ್ನ ದರ 7.2% ಜಿಡಿಪಿ ಪಡೆಯುವ ಮೂಲಕ ಚೀನಾವನ್ನು ಹಿಂದಿಕ್ಕಿದೆ..

ನೋಟು ರದ್ದತಿ ಮಾಡಿದ ಮೇಲೆ ಶೇ 1.3 ರಷ್ಟು ಜಿಡಿಪಿ ಪ್ರಗತಿ ಇಳಿಕೆ ಕಂಡಿತ್ತು.. ಕಳೆದ ವರ್ಷ ಏಪ್ರಿಲ್ ನಿಂದ ಜೂನ್ ವರೆಗಿನ ಜಿಡಿಪಿ ಅತ್ಯಂತ ಕನಿಷ್ಠ ಮಟ್ಟ 5.7% ದಾಖಲಾಗಿತ್ತು..

Also read: ಮೋದಿ ಸರ್ಕಾರ ಬಂದಾಗಿನಿಂದ ದೇಶದಲ್ಲಿ ನಿರುದ್ಯೋಗ ಜಾಸ್ತಿಯಾಗ್ತಿದೆ ಅನ್ನೋರಿಗೆ ಇದನ್ನು ತೋರಿಸಿ, 1.5 ಕೋಟಿ ಉದ್ಯೋಗಗಳು ಸೃಷ್ಟಿಯಾಗ್ತಿವೆ..

ಈಗಿನ ಆರ್ಥಿಕ ಬೆಳವಣಿಗೆಯನ್ನು ಗಮನಿಸಿ ಮುಂಬರುವ ವರ್ಷಗಳಲ್ಲಿ ದೇಶದ ಆಂತರಿಕ ಉತ್ಪನ್ನ ದರ ಇನ್ನೂ ಹೆಚ್ಚಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ ಆರ್ಥಿಕ ತಜ್ಞರು..

ಮುಂದಿನ ಆರ್ಥಿಕ ತ್ರೈಮಾಸಿಕದಲ್ಲಿ ಜಿಡಿಪಿ ಹೆಚ್ಚಳವಾಗುವ ಬಗ್ಗೆ ಅನೇಕರು ಒಂದೊಂದು ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ..

ಅರಿಹಂತ್ ಕ್ಯಾಪಿಟಲ್ ಮಾರ್ಕೆಟ್ ನ ನಿರ್ದೇಶಕರಾದ ಅನಿತಾ ಗಾಂಧಿ ರವರ ಪ್ರಕಾರ ಜಿಡಿಪಿ 7.6% ಕ್ಕೆ ಹೆಚ್ಚಳವಾಗಲಿದೆಯಂತೆ..

ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಪ್ರಕಾರ 2019 ರ ಭಾರತ ಆರ್ಥಿಕ ಪ್ರಗತಿ 7.8% ಗೆ ಹೆಚ್ಚಳವಾಗಲಿದೆಯಂತೆ..

IMF ರವರು ಹೇಳಿರುವಂತೆ 2018 ರಲ್ಲಿ ಚೀನಾದ ಜಿಡಿಪಿ ದರ 6.8% ಗೆ ಕುಸಿಯಲಿದ್ದು.. ಈ ಮೂಲಕ ಈ ವರ್ಷದ ಆಂತರಿಕ ಉತ್ಪನ್ನ ದರದಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಪ್ರಗತಿ ಪಥದತ್ತ ಸಾಗಲಿದೆ..

Also read: ಭಾರತೀಯ ಸೇನೆಗೆ ರಷ್ಯಾದ 4 ಯುದ್ಧ ನೌಕೆಗಳು ಸೇರ್ಪಡೆ.. ಬಲಿಷ್ಠವಾಗುತ್ತಿದೆ ನಮ್ಮ ಸೇನೆ