ದೇಶ ಕಂಡ ಅಪರೂಪದ ರಾಜಕಾರಣಿ ಅಜಾತ ಶತ್ರು ಮಾಜಿ ಪ್ರಧಾನಿ ವಾಜಪಾಯಿ ಇನ್ನಿಲ್ಲ!!

0
529

ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡಿದ ಏಕೈಕ ಭಾರತೀಯ ಅಜಾತಶತ್ರು, ಭಾರತರತ್ನ ಮಾಜಿ ಪ್ರಧಾನಿ, ಭಾರತೀಯ ಜನತಾ ಪಕ್ಷದ ಹಿರಿಯ ನೇತಾರ ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಜೂನ್ 11 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕಳೆದ 24 ಗಂಟೆಗಳಿಂದ ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ, ಆದಕಾರಣ ಭಾರತದ ನಕ್ಷತ್ರವೊಂದು ಮರೆಯಾಯಿತು ಎಂದು ಏಮ್ಸ್ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಅಟಲ್ ರವರು ಮಧುಮೇಹದಿಂದ ಬಳಲುತ್ತಿದ್ದರು, ಅವರ ಒಂದು ಮೂತ್ರಪಿಂಡ ಮಾತ್ರ ಕೆಲಸ ಮಾಡುತ್ತಿತ್ತು. 2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರು, ಯಾರನ್ನೂ ಗುರುತಿಸುವ ಸ್ಥಿತಿಯಲ್ಲಿರಲಿಲ್ಲ ಆದಕಾರಣ ಇಂದು ಸಂಜೆ 5:05 ಏಮ್ಸ್ ಆಸ್ಪತ್ರೆಗೆಯಲ್ಲಿ ಕೊನೆಯುಸಿರೆಳೆದರು..

ದೇಶ ಕಂಡ ಅಪರೂಪದ ರಾಜಕಾರಣಿ ಭಾರತದ  ಅವಿವಾಹಿತ ಪ್ರದಾನ ಮಂತ್ರಿ ದೇಶ ಕಂಡ ಅಪರೂಪದ ರಾಜಕಾರಣಿ ಎಂದರೆ ಅವರು ಅಟಲ್ ಬಿಹಾರಿ ವಾಜಪೇಯಿ. ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಪ್ರಧಾನ ಮಂತ್ರಿಯಾಗಿ ಅಟಲ್ ಜೀ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆದರ್ಶ ಹಾಗೂ ಪ್ರಾಮಾಣಿಕ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿ, ಅವರ ದೇಶ ಪ್ರೇಮ ಮತ್ತು ನಿಷ್ಕಳಂಕ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶ. ಸುಮಾರು ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಪ್ರಸಿದ್ದವಾದವರು. ಇನ್ನು ಅವರ

ವೈಯಕ್ತಿಕ ಜೀವನವನ್ನು ಕಂಡರೆ,  ಕೃಷ್ಣ ದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ, ಮಧ್ಯ ಪ್ರದೇಶದ ಗ್ವಾಲಿಯರ್  ಹತ್ತಿರದ  ಶಿಂದೆ ಕಿ ಚವ್ವಾಣಿ ಅನ್ನೋ ಹಳ್ಳಿಯಲ್ಲಿ, 1924 ರಂದು ಕ್ರಿಸ್ ಮಸ್ ಅಟಲ್ ಅವರು ಹುಟ್ಟಿದ್ದು ಇವರ ತಂದೆ ಒಬ್ಬ ಕವಿ ಹಾಗೆ ಸಾಮಾನ್ಯ ಶಾಲೆಯ ಮೇಷ್ಟ್ರು, ಅಟಲ್ ಅವರ ಪದವಿಯನ್ನ ವಿಕ್ಟೋರಿಯಾ ಕಾಲೇಜಿನಿಂದ ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್  ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ D.A.V ಕಾಲೇಜಿನಿಂದ ಪಡೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ RSS ಸೇರಿದರು. ವೀರ ಅರ್ಜುನ ಹಾಗೂ ಪಾಂಚಜನ್ಯ ಅನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು.

ಅಟಲ್ ಅವರ ಮೊದಲ ರಾಜಕೀಯ ಜೀವನ ಶುರುವಾಗಿದ್ದು 1942 ರಲ್ಲಿ ಕ್ವಿಟ್ ಇಂಡಿಯ ಚಳುವಳಿಯಲ್ಲೀ ಭಾಗವಹಿಸುವ ಮೂಲಕ 23 ದಿನಗಳ ಕಾಲ ಜೈಲು ವಾಸ ಅನುಭವಿಸಿದರು. ನಂತರ ಅಟಲ್ ರವರಿಗೆ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪರಿಚಯವಾಯಿತು. 1951 ರಲ್ಲಿ ಭಾರತೀಯ ಜನ ಸಂಘ ಉದಯವಾಯಿತು. ಅಟಲ್ ಜಿ ಇದರ ಸಂಸ್ಥಾಪಕ ಸದಸ್ಯರಲ್ಲೊಬ್ಬರು. 1951 ರಲ್ಲಿ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ಅಟಲ್ ಜಿ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದರು. 1957ರ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಿಂದ ಸ್ಪರ್ಧಿಸಿದರು. ಮಥುರಾ ಮತ್ತು ಲಕ್ನೋ ಕ್ಷೇತ್ರಗಳಲ್ಲಿ ಸೋತ ಅಟಲ್ ರವರು ಬಲರಾಮ್ ಪುರ ಕ್ಷೇತ್ರದಲ್ಲಿ ವಿಜಯ ಸಾಧಿಸಿದರು. 1975 ರಲ್ಲಿ ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತು. ಆಗ ಅಟಲ್ ಜಿ ಇಂದಿರಾ ಗಾಂಧಿ ವಿರುದ್ದ ಹೋರಾಡಿ ಜೈಲು ಸೇರಿದರು. ಇಂದಿರಾ ಆಡಳಿತ ಕೊನೆಗೊಳ್ಳುವ ತನಕ ಜೈಲಿನಲ್ಲಿದ್ದರು. 1977 ರ ಚುನಾವಣೆ ಸಂಧರ್ಭದಲ್ಲಿ ಅಟಲ್ ಜಿ ತಮ್ಮ ಸಂಗಡಿಗರೊಂದಿಗೆ ಜನತಾ ಪಕ್ಷ ಸೇರಿದರು. 1977 ರಲ್ಲಿ  ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಆದಾಗ  ಅವರು ಅಮೆರಿಕ ದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿತ್ತು ಆ ಸಂಧರ್ಬದಲ್ಲಿ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡಿದ ಏಕೈಕ ಭಾರತೀಯ.

ನಂತರ 1995 ರಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಮೊದಲ ಬಾರಿಗೆ ಅಧಿಕಾರವನ್ನ ವಹಿಸುವ ಅವಕಾಶ ಬಿ ಜೆ ಪಿ ಗೆ ಒಲಿದು ಬಂತು ನಂತರ ಮಹಾರಾಷ್ಟ್ರದಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಮಾನ್ಯ ಅಟಲ್ ಜಿ ಅವರ ಹೆಸರನ್ನ ಗೋಷಿಸಿದರು ಅದರಿಂದಾಗಿ 1996 ರಲ್ಲಿ ಕೇಂದ್ರದಲ್ಲಿ ಮೊದಲ BJP ಯ ಸರ್ಕಾರ ರಚನೆಯಾಯಿತು. ಅಟಲ್ 12 ದಿನಗಳಿಗಾಗಿ ಪ್ರದಾನಿಯಾಗಿದ್ದರು ನಂತರ ಬಹುಮತ ಸಾಭೀತು ಪಡಿಸುವ ಸೋಲೋಪ್ಪಬೇಕಾಯಿತು
1998- 99 ರಲ್ಲಿ ಎನ್ ಡಿ ಎ ಅನ್ನುವ ಸಂಘಟನೆಯಡಿ ಪಕ್ಷಗಳನ್ನ ಒಂದು ಗೂಡಿಸಿ ಮತ್ತೆ ಬಿ ಜೆ ಪಿ ಅಧಿಕಾರಕ್ಕೆ ಬಂತು ಅಟಲ್ ಪ್ರಧಾನಿಯಾದರು. ಜಯಲಲಿತ ಬೆಂಬಲವನ್ನ ಹಿಂಪಡೆದರು ಅದರಿಂದಾಗಿ  ಬಹುಮತ ಸಾಬೀತು ಮಾಡುವಲ್ಲಿ 1 ವೋಟಿನಿಂದ ಅಟಲ್ ಸರ್ಕಾರ ಮತ್ತೆ ಬಿದ್ದು ಹೋಯಿತು
ಮೂರನೇ ಭಾರಿಗೆ ಪ್ರದಾನಿಯಾಗಿದ್ದು 1999 ರಿಂದ 2004 ರ ವರೆಗೆ, ಆ ಸಂದರ್ಭದಲ್ಲಿ ನೆಡೆದ ಭಾರತೀಯ ವಿಮಾನ ಅಪಹರಣ  ಕೂಡ ಸುಖಾಂತ್ಯ ಕಾಣುವಲ್ಲಿ ಅಟಲ್ ಹಾಗೂ ಜಸವಂತ್ ಸಿಂಗರ ಕೊಡುಗೆ ಅಪಾರವಾಗಿದೆ. ಮತ್ತೆ ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ಅಟಲ್ ಮಾಡಿದ ಮಹತ್ತರ ಸಾಧನೆಗಳಲ್ಲಿ ಪ್ರದಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಲಕ್ಷಾಂತರ ಹಳ್ಳಿಗಳು ಡಂಬಾರಿನ ರಸ್ತೆಗಳನ್ನ ಮಾಡಿ ನಂತರ ಅಟಲ್ 2005 ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿ ಕೊಂಡವರು, ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆಗಿದ್ದರು ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.