ಇದು ದೇಶದ ಅತಿ ದೊಡ್ಡ ತೇಲುವ ಸೌರ ವಿದ್ಯುತ್ ತಯಾರಕ ಘಟಕ, ಮೋದಿಯವರ ಸೌರ ವಿದ್ಯುತ್ ಕನಸಿಗೆ ಮತ್ತೊಂದು ಗರಿ!!

0
885

ಭಾರತದಲ್ಲಿ ಹಾಗೂ ಕೆಲವು ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ ಹೇರಳವಾಗಿದೆ. ಇದಕ್ಕೆ ಪರಿಹಾರ ಕಂಡು ಕೊಳ್ಳಲು ಆಯಾ ರಾಜ್ಯಗಳು ಹಗಲಿರುಳು ಶ್ರಮಿಸುತ್ತಿವೆ. ಇದಕ್ಕೆ ಪೂರಕ ಎಂಬಂತೆ ಕೇರಳದಲ್ಲಿ ಒಂದು ಸೋಲಾರ ಸ್ಥಾವರ ಕಾರ್ಯ ಸದ್ದಿಲ್ಲದೆ ನಡೆದಿದ್ದು, ಇದೇ ತಿಂಗಳ ಅಂತ್ಯದಲ್ಲಿ ವಿದ್ಯುತ್ ಬರ ನೀಗಿಸಲು ಈ ಸ್ಥಾಪರ ಸಹ ತನ್ನ ಕಾಣಿಕೆ ನೀಡಲಿದೆ.

ಕೇರಳದ ವೈನಾಡಿನ ಬನಸುರ ಸಾಗಾರದಲ್ಲಿ ಸೋಲಾರ ಸ್ಥಾವರ ಕಾರ್ಯ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈ ಬಗ್ಗೆ ಕೇರಳ ರಾಜ್ಯ ವಿದ್ಯುತ್ ನಿಗಮದ (KSEB) ಅಧಿಕಾರಿ ಮಾಹಿತಿ ನೀಡಿದ್ದು, ಸ್ಥಾವರದ ಕಾರ್ಯ ಸಂಪೂರ್ಣ ಪೂರ್ಣ ಗೊಂಡಿದ್ದು, ಉದ್ಘಾಟನೆ ಶೀಘ್ರದಲ್ಲಿ ನೆರವೇರಲಿದೆ ಎಂದು ತಿಳಿಸಿದ್ದಾರೆ.

KSEB ಕನಸಿನ ಯೋಜನೆ ಇದಾಗಿದೆ. ಇದಕ್ಕಾಗಿ 9.25 ಕೋಟಿ ಹಣವನ್ನು ವ್ಯಯಮಾಡಲಾಗಿದೆ. ಇನ್ನು 6 ಸಾವಿರ ಸ್ಕ್ವೇರ್​ ಮೀಟರ್​​ ವ್ಯಾಪ್ತಿಯಲ್ಲಿ, 500 ಕಿಲೊ ವ್ಯಾಟ್​ ವಿದ್ಯುತ ಉತ್ಪಾದಿಸುವ ಯೋಜನೆಯನ್ನು ಹೊಂದಲಾಗಿದೆ. ಈ ಸಂಬಂಧ ಮಾರ್ಚ್​​ 2016ರಲ್ಲೇ ಕೆಲಸ ಆರಂಭವಾಗಿದೆ. KSEB ಮೂಲಗಳ ಪ್ರಕಾರ ಕೇರಳಾ ಸಿಎಂ, ಸಮಯವನ್ನು ಕೇಳಿದ್ದು, ಮುಂದಿನ ತಿಂಗಳಲ್ಲಿ ಈ ಸ್ಥಾವರ ಲೋಕಾರ್ಪಣೆ ಆಗುವ ಸಾಧ್ಯತೆ ಇದೆ. ಇನ್ನು ಈ ಸ್ಥಾವರದಲ್ಲಿ ವರ್ಷಕ್ಕೆ ಸುಮಾರು 7.5 ಲಕ್ಷ ಯುನಿಟ್​ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.

ಇನ್ನು ಈ ಯೋಜನೆಗಾಗಿ ಉತ್ತಮ ಸೋಲಾರ ಪ್ಯಾನಲ್ಸ್​​ಗಳನ್ನು ಬಳಸಲಾಗಿದೆ. ಅಲ್ಲದೆ ಎಲ್ಲ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡೆ ಕೆಲಸ ಮಾಡಲಾಗಿದೆ. ಇನ್ನು ಇಲ್ಲಿ ಉತ್ಪತ್ತಿಯಾಗು ವಿದ್ಯುತ್ ನಿಂದ ಕೇರಳಕ್ಕೆ 24×7 ವಿದ್ಯುತ್​ ನೀಡುವ ಗುರಿ ನಮ್ಮದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕನಸಿನ ಕೂಸು ಮೇಕ್​ ಇನ್​ ಇಂಡಿಯಾ ಯೋಜನೆಗೆ ಕೈ ಜೋಡಿಸಿರುವ ಹಲವು ಕಂಪನಿಗಳು, ಈ ನಿಟ್ಟಿನಲ್ಲಿ ತಮ್ಮ ಕಾರ್ಯವನ್ನು ಮಾಡುತ್ತಿವೆ.