ಪಂಜಾಬ್ ನ್ಯಾಷನಲ್ ಬ್ಯಾಂಕ್-ಗೆ 11400 ಕೋಟಿ ಪಂಗನಾಮ ಹಾಕಿದ ನಿರವ್ ಮೋದಿ ಲಂಡನ್-ನಲ್ಲಿ ಕಿಂಗ್..

0
321

ಲಂಡನ್ ನಲ್ಲಿ ಪತ್ರಕರ್ತನ ಕಣ್ಣಿಗೆ ಬಿದ್ದ ನೀರವ್ ಮೋದಿ;

Also read: ಕೇಂದ್ರ ಸರ್ಕಾರದಿಂದ ನೌಕರರ ವರ್ಗಕ್ಕೆ ಮತ್ತೊಂದು ಗಿಫ್ಟ್; ಗ್ರಾಚ್ಯುಟಿ ಮೇಲಿನ ಆದಾಯ ತೆರಿಗೆ ಮಿತಿ ಹೆಚ್ಚಳ..

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಸಂಬಂಧ 11400 ಕೋಟಿ ನಾಮ ಹಾಕಿ ದೇಶ ಬಿಟ್ಟು ಪರಾರಿ ಆದ ನಿರವ್ ಮೋದಿ ಮೋದಿ ಲಂಡನ್‌ನ ವೆಸ್ಟ್‌ಈಸ್ಟ್ ಪ್ರದೇಶದ ಸೊಹೊದಲ್ಲಿ ಹೊಸ ವಜ್ರ ಉದ್ಯಮವನ್ನು ಆರಂಭಿಸಿದ್ದಾನೆ ಎಂದು ಬ್ರಿಟನ್ ದಿನಪತ್ರಿಕೆ ವರದಿ ಮಾಡಿದೆ. ಇವರು ಲಂಡನ್‌ನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನೀರವ್‌ರನ್ನು ಪತ್ರಿಕೆಯ ವರದಿಗಾರ ಮಾತನಾಡಿಸಲು ಯತ್ನಿಸುತ್ತಿದ್ದ 2 ನಿಮಿಷಗಳ ವೀಡಿಯೊವನ್ನು ಶೇರ್ ಮಾಡಿದೆ.

ಹೌದು ಭಾರತಕ್ಕೆ ಬೇಕಾಗಿರುವ ಸುಮಾರು 1.5 ಶತಕೋಟಿ ರೂಪಾಯಿ ವಂಚನೆ ಪ್ರಕರಣದ ಉದ್ಯಮಿ ನೀರವ್ ಮೋದಿ ಮುಕ್ತವಾಗಿ ಲಂಡನ್ ನಲ್ಲಿ ವಾಸಿಸಿಕೊಂಡು ಓಡಾಡಿಕೊಂಡಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಭಾರತದಲ್ಲಿರುವ ಬ್ಯಾಂಕ್‌ಗಳಿಗೆ ವಂಚನೆಗೈದಿರುವ ಪ್ರಕರಣದಲ್ಲಿ ನೀರವ್ ಮೋದಿ ‘ವಾಂಟೆಡ್’ಲಿಸ್ಟ್‌ನಲ್ಲಿದ್ದಾನೆ ಲಂಡನ್‌ನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನೀರವ್‌ರನ್ನು ಪತ್ರಿಕೆಯ ವರದಿಗಾರ ಮಾತನಾಡಿಸಲು ಯತ್ನಿಸುತ್ತಿದ್ದ ವರದಿಗಾರರಿಗೆ ಭಾರತ ಕಂಡ ವಂಚಕ ಮಹಾನ್ ಕಳ್ಳ ನಿರವ್ ಮೋದಿ ಉತ್ತರಿಸಿದ್ದು ಹೀಗೆ.

ನಿರವ್ ಮೋದಿಯ ಸಂದರ್ಶನ;

ವರದಿಗಾರ; ನೀವು ಲಂಡನ್-ನಲ್ಲಿ ಎಷ್ಟು ಸಮಯ ನೆಲೆಸಲು ಯೋಜನೆ ಹಾಕಿಕೊಂಡಿದ್ದೀರಿ,ಎಷ್ಟು ಹಣ ನೀವು ನೀಡಬೇಕಾಗಿದೆ? ಕೇಳಿದಾಗ ಹಲವು ಪ್ರಶ್ನೆಗೆ ‘ನೋ ಕಮೆಂಟ್ಸ್’ ಎಂದು ಮೋದಿ ಉತ್ತರಿಸಿದ್ದಾನೆ. ನೀವು ರಾಜಕೀಯ ಆಶ್ರಯ ಪಡೆದಿದ್ದೀರಾ? ಎಂಬ ವರದಿಗಾರನ ಪ್ರಶ್ನೆಗೂ, ‘ಕ್ಷಮಿಸಿ, ಉತ್ತರಿಸಲಾರೆ’ ಎಂದ ಮೋದಿ ರಸ್ತೆಯನ್ನು ದಾಟಿ ಮುನ್ನಡೆದ. ಗುಲಾಬಿಬಣ್ಣದ ಅಂಗಿ ಹಾಗೂ ಅದರ ಮೇಲೆ ದುಬಾರಿ ಬೆಲೆಯ ಜಾಕೆಟನ್ನು ಧರಿಸಿದ್ದ ಮೋದಿ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದು ರಸ್ತೆ ಬದಿ ಕ್ಯಾಬ್‌ಗಾಗಿ ಕಾಯುತ್ತಿದ್ದ. ಕ್ಯಾಬ್ ಲಭಿಸಿದ ತಕ್ಷಣ ಮಾರ್ಕೆಟ್‌ಗೆ ಹೋಗಿದ್ದಾನೆ. ಅದರಂತೆ ಮೋದಿ ಲಂಡನ್‌ನ ವೆಸ್ಟ್‌ಈಸ್ಟ್ ಪ್ರದೇಶದ ಸೊಹೊದಲ್ಲಿ ಹೊಸ ವಜ್ರ ಉದ್ಯಮವನ್ನು ಆರಂಭಿಸಿದ್ದಾನೆ ಎಂದು ಬ್ರಿಟನ್ ಮಾದ್ಯಮಗಳು ತಿಳಿಸಿವೆ.

ನಿರಾವ್ ಗೆಟಪ್ ಚೇಂಜ್?

ಲಂಡನ್ ನ ಐಷಾರಾಮಿ ಆಕ್ಸ್ ಫರ್ಡ್ ಸ್ಟ್ರೀಟ್ ನಲ್ಲಿ ಫ್ಲಾಟ್ ವೊಂದರಲ್ಲಿ ವಾಸಿಸುತ್ತಿರುವ ನೀರವ್ ಮೋದಿಯ ಈಗಿನ ಗೆಟಪ್ ಬದಲಾಗಿದ್ದು ದಪ್ಪ ಮೀಸೆ ಬೆಳೆಸಿಕೊಂಡಿದ್ದಾನೆ. ಗಡೀಪಾರಿನಿಂದ ತಪ್ಪಿಸಿಕೊಳ್ಳಲು ನೀರವ್ ಮೋದಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ತನ್ನ ನೋಟವನ್ನು ಬದಲಿಸಿಕೊಂಡಿರಬಹುದು ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿದ್ದವು. ಲಂಡನ್ ನ ಐಷಾರಾಮಿ ಟೊಟ್ಟೆನ್ ಹಾಮ್ ಕೋರ್ಟ್ ರಸ್ತೆಯಲ್ಲಿ ಮೂರು ಬೆಡ್ ರೂಂಗಳ ವರ್ಷಕ್ಕೆ ಸುಮಾರು 8 ಮಿಲಿಯನ್ ಬಾಡಿಗೆಯ ಅಪಾರ್ಟ್ ಮೆಂಟ್ ನಲ್ಲಿ ನೀರವ್ ಮೋದಿ ನೆಲೆಸಿದ್ದಾನೆ, ಅಲ್ಲಿ ಹೊಸ ವಜ್ರದ ಉದ್ಯಮ ಆರಂಭಿಸಿದ್ದು ಅದರ ಕಚೇರಿ ಅಪಾರ್ಟ್ ಮೆಂಟ್ ಗೆ ಹೊಂದಿಕೊಂಡಂತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಈ ಉದ್ಯಮ ಆರಂಭಿಸಿದ್ದಾನೆ.

Also read: ಹುಚ್ಚು ಹುಚ್ಚು ಟ್ರೆಂಡ್-ಗಳ ಸಾಲಿಗೆ ಸೇರುತ್ತೆ ಬೆರಳಿಗೆ ರಿಂಗ್ ಚುಚ್ಚುಕೊಳ್ಳುವುದು, ಈಥರ ಟ್ರೆಂಡ್ ಯುವಜನೆತೆಗೆ ಒಳ್ಳೆದಾ?

ಮೋದಿ ಪ್ರತಿ ದಿನ ನಾಯಿಮರಿಯ ಜೊತೆಗೆ ತನ್ನ ಅಪಾರ್ಟ್‌ಮೆಂಟ್ ಹಾಗೂ ಸೊಹೊದಲ್ಲಿರುವ ತನ್ನ ಡೈಮಂಡ್ ಕಂಪೆನಿ ಕಚೇರಿಗೆ ಓಡಾಡುತ್ತಿರುತ್ತಾನೆ. ಬ್ರಿಟನ್‌ನಲ್ಲಿ ಕಾನೂನುಬದ್ಧವಾಗಿ ಉದ್ಯಮ ನಡೆಸಲು ಅಗತ್ಯವಿರುವ ರಾಷ್ಟ್ರೀಯ ಇನ್ಸೂರೆನ್ಸ್ ನಂಬರ್‌ನ್ನು ನೀಡಿದ್ದಾನೆ. ಭಾರತಕ್ಕೆ ಬೇಕಾಗಿರುವ ಈತ ಬ್ಯಾಂಕ್ ಖಾತೆಗಳನ್ನು ಆನ್‌ಲೈನ್‌ನಲ್ಲಿ ಕಾರ್ಯಾಚರಿಸುತ್ತಿದ್ದಾನೆ” ಇಂಗ್ಲೆಂಡ್ ಸರ್ಕಾರ ನೀರವ್ ಮೋದಿಗೆ ರಾಷ್ಟ್ರೀಯ ವಿಮಾ ಸಂಖ್ಯೆಯನ್ನು ಹೇಗೆ ಮತ್ತು ಏಕೆ ನೀಡಿತು ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ ಭಾರತ ಸರ್ಕಾರದ ಇಂಟರ್ ಪೋಲ್ ರೆಡ್ ನೊಟೀಸ್ ಗೆ ಇನ್ನೂ ಇಂಗ್ಲೆಂಡ್ ಸರ್ಕಾರ ಉತ್ತರಿಸಿಲ್ಲ. ಇಂಗ್ಲೆಂಡಿನಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಬೇಕೆಂದರೆ ಅಥವಾ ಉದ್ಯಮ ನಡೆಸಬೇಕೆಂದರೆ ರಾಷ್ಟ್ರೀಯ ವಿಮಾ ಸಂಖ್ಯೆ ಹೊಂದಿರಬೇಕಾಗುತ್ತದೆ. ಎಂದು ಪತ್ರಿಕೆ ವರದಿ ಮಾಡಿದೆ.