ನಿಮಗೆ ಇಷ್ಟವಾಗಿರೋ ಪದಾರ್ಥಗಳನ್ನ ತಿನ್ಲಿಕ್ಕೆ ಅಜೀರ್ಣ ಬಿಡ್ತಾ ಇಲ್ವಾ?? ಯೋಚ್ನೆ ಮಾಡ್ಬೇಡಿ ಈ ಕೆಳಗಿನ ಮನೆಮದ್ದುಗಳನ್ನು ಪಾಲಿಸಿ ಅಜೀರ್ಣವನ್ನು ತಡೆಗಟ್ಟಿ ಹಾಗೂ ಅದರಿಂದ ಮುಕ್ತಿ ಹೊಂದಿ..

0
1392

ಅಜೀರ್ಣ ನಿವಾರಣೆಗೆ ಮನೆಮದ್ದುಗಳು:

೧) ಅನ್ನದ ಗಂಜಿಗೆ ಉಪ್ಪು ಬೆರೆಸಿ ಕುಡಿಯಬೇಕು.
೨) ಸಿಹಿ ಮಜ್ಜಿಗೆಗೆ ಉಪ್ಪು ಮತ್ತು ಹಿಂಗು ಬೆರೆಸಿ ಕುಡಿದ್ದಲ್ಲಿ ಅಜೀರ್ಣ ಕಡಿಮೆಯಾಗುವುದು.
೩)ಪರಂಗೀ ಹಣ್ಣು ಅಥವಾ ಬಾಳೆಹಣ್ಣನ್ನು ಊಟದ ನಂತರ ತಿನ್ನಬೇಕು.
೪) ಓಮು ಕಾಳನ್ನು ಊಟದ ಬಳಿಕ ಚೆನ್ನಾಗಿ ಜಗಿದು ತಿನ್ನಬೇಕು.

Suuuuuuuuuuuurrrrrrrreeeee

೫) ಪುದಿನಾ ಸೊಪ್ಪಿನ ಚಟ್ನಿ,ಚಹಾ ಅಜೀರ್ಣವನ್ನು ಬಡಿದೋಡಿಸುತ್ತದೆ.
೫) ಹಸಿ ಸೌತೆಕಾಯಿಯನ್ನು ಕಾಳುಮೆಣಸು ಮತ್ತು ಉಪ್ಪಿನ ಜೊತೆ ತಿಂದರೆ ಅಜೀರ್ಣ ತಗ್ಗುತ್ತದೆ.
೬) ಊಟದ ಜೊತೆ ಹಸಿ ಮೂಲಂಗಿಯನ್ನು ಉಪಯೋಗಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.
೭)ಲವಂಗದ ಕಷಾಯವನ್ನು ದಿನಕ್ಕೆ ಮೂರು ಸಲ ಕುಡಿಯಬೇಕು.
೮) ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಹೆಚ್ಚಾಗಿ ಬಳಸಬೇಕು.
೯) ತುಳಸಿ ರಸವನ್ನು ದಿನವೂ ಒಂದೆರಡು ಸ್ಪೂನ್ ಗಳಷ್ಟು ಸೇವಿಸುವುದು.

೧೦) ಸ್ವಲ್ಪ ಉಪ್ಪು ಬೆರೆಸಿದ ಕುದಿಸಿ ಆರಿಸಿದ ನೀರಿಗೆ ನಿಂಬೆರಸ ಬೆರೆಸಿ ದಿನ್ನಕ್ಕೆರಡು ಬಾರಿಯಾದರೂ ಕುಡಿಯಬೇಕು.
೧೧)ಸೇಬು ಹಣ್ಣು ಜೀರ್ಣಶಕ್ತಿಗೆ ಅತ್ಯುತ್ತಮ.
೧೨) ಜೀರಿಗೆ ಕಾಳನ್ನು ಊಟದ ಮೊದಲು ಅಗೆದು ತಿನ್ನುವುದರಿಂದ ಅಜೀರ್ಣ ಉಂಟಾಗುವುದಿಲ್ಲ.
೧೩) ಅನಾನಸ್ ಹಣ್ಣು ಅಜೀರ್ಣವನ್ನು ದೂರ ಮಾಡುತ್ತದೆ.

೧೪) ಕೆಸುವಿನ ದಂಟಿನಿಂದ ಮಾಡಿದ ಆಹಾರ ಜೀರ್ಣಶಕ್ತಿಗೆ ಪೂರಕವಾಗಿರುವುದು.
೧೫) ಊಟದ ಬಳಿಕ ಒಂದು ಚಿಕ್ಕ ಚೂರು ಶುಂಠಿಯನ್ನು ತಿನ್ನುವುದರಿಂದ ಅಜೀರ್ಣವನ್ನು ತಡೆಗಟ್ಟಬಹುದು

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840