ಇಂದಿರಾ ಕ್ಯಾಂಟೀನ್ ಗೆ ಬರುವ ಊಟ ಅರಮನೆ ಮೈದಾನದ ಮದುವೆ ಮಂಟಪದ್ದು ಅಂದ್ರೆ ನಂಬತೀರಾ..!

0
845

ರಾಜ್ಯ ಸರ್ಕಾರದ ಮಹತ್ವದ ಯೋಜನೆ ಅಂತಾನೆ ಹೇಳುತ್ತಿರುವ ಇಂದಿರಾ ಕ್ಯಾಂಟೀನ್ ಪ್ರಾಂಭವಾಗಿದೆ ಆದರೆ ಅದಕ್ಕೆ ಯಾವುದೇ ದುರದೃಷ್ಟಿಕೋನ ಇಟ್ಟುಕೊಂಡು ಯೋಜನೆ ಮಾಡಲಾಗಿಲ್ಲ ಅನ್ನೋದು ಹಲವರ ಅಭಿಪ್ರಾಯವಾಗಿತ್ತು ಅದೇ ರೀತಿಯಲ್ಲಿ ಈ ಯೋಜನೆಯ ಊಟದ ವ್ಯವಸ್ಥೆಯನ್ನು ಯಾವುದೇ ಟೆಂಡರ್ ನೀಡದೆ ಅಡುಗೆ ತಯಾರಿಸಲಾಗುತ್ತಿದೆ.

ಇತ್ತೀಚೆಗಷ್ಟೇ ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ಉದ್ದೇಶದಿಂದ `ಇಂದಿರಾ ಕ್ಯಾಂಟೀನ್’ ಯೋಜನೆಗೆ ಚಾಲನೆ ನೀಡಿದ್ದು, ಇದರ ಊಟದ ಬಣ್ಣವನ್ನು ಒಂದು ಖಾಸಗಿ ವಾಹಿನಿ ತನ್ನ ರಿಯಾಲಿಟಿ ಚೆಕ್ ಮೂಲಕ ಸರ್ಕಾರದ ಬಣ್ಣ ಬಯಲು ಮಾಡಿದೆ.

ಇಂದಿರಾ ಕ್ಯಾಂಟೀನ್ ನಲ್ಲಿ ಜನ ತಿನ್ನುವ ಅನ್ನ, ಸಾಂಬಾರು, ಬೆಳಗ್ಗಿನ ಪಲಾವ್, ಖಾರಬಾತ್ ಇವೆಲ್ಲವನ್ನೂ ಮದುವೆ ಮನೆಯಲ್ಲಿ ತಯಾರಿಸಲಾಗುತ್ತಿದೆ ಎಂಬ ಅಂಶವೊಂದು ಬೆಳಕಿಗೆ ಬಂದಿದೆ. ಇಂದಿರಾ ಕ್ಯಾಂಟೀನ್ ಊಟ ಅರಮನೆ ಮೈದಾನದಲ್ಲಿ ತಯಾರಾಗುತ್ತಿದೆ. ಯಾವುದೇ ಗುಣಮಟ್ಟ ಪರೀಕ್ಷೆ ಮಾಡದೆ ಬಿಬಿಎಂಪಿ ಅಡುಗೆ ಮಾಡಿಸುತ್ತಿದೆ.

ಅರಮನೆ ಮೈದಾನದ ವೈಟ್ ಪೆಟಲ್ ಅಡುಗೆ ಮನೆಯಲ್ಲಿ ಊಟ ತಯಾರಿ ಮಾಡುತ್ತಿರುವ ಕುರಿತು ರಿಯಾಲಿಟಿ ಚೆಕ್ ಮಾಡೋಕೆ ಹೋದ ಖಾಸಗಿ ವಾಹಿನಿಯ ಸಿಬ್ಬಂದಿ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ಮಧು ಗೌಡ ಎಂಬವರು ವರದಿಗಾರರ ಮೊಬೈಲ್ ಕಸಿದುಕೊಂಡು ಗೂಂಡಾ ವರ್ತನೆ ತೋರಿದ್ದಾರೆ. ಅಲ್ಲದೇ ಟೆಂಡರ್ ಪಡೆಯದೇ ಅಡುಗೆ ಬೇಯಿಸುತ್ತಿರೋ ಸೋಮಣ್ಣ ಅಂಡ್ ಮಧುಗೌಡಾ ಟೀಮ್ ದೌರ್ಜನ್ಯವೆಸಗಿದ್ದಾರೆ ಎಂದು ವರದಿಯಾಗಿದೆ.

ಇದುವರೆಗೂ ಯಾವುದೇ ರೀತಿಯಲ್ಲಿ ಇಂದಿರಾ ಕ್ಯಾಂಟೀನ್ ಊಟ ತಯಾರುಮಾಡುವ ಅಡುಗೆ ಕೋಣೆಗಳನ್ನು ನಿರ್ಮಿಸಿಲ್ಲ.
ಮತ್ತು ಅರಮನೆ ಮೈದಾನದಲ್ಲಿ ಬಿಬಿಎಂಪಿ ಕಮೀಷನರ್ ಮನವಿ ಮೇರೆಗೆ ಶಾಮ್ ಅನ್ನೋರ ಆರ್ಡರ್ ಮೇರೆಗೆ ಈ ಊಟ ತಯಾರಾಗ್ತಿದೆ.