ಭಾರತ-ಪಾಕ್ ಗಡಿಯಲ್ಲಿ ಭಾರತ-ಚೀನಿ ಸೈನಿಕರು ಅಣ್ತಮ್ಮ

0
945

ಭಾರತದಿಂದ ಪಾಕ್ ಗಡಿಯಲ್ಲಿ ನಿರ್ದಿಷ್ಟ ದಾಳಿ.. ಪಾಕಿಸ್ತಾನ-ರಷ್ಯಾ ಭಾರತದ ಗಡಿಯಲ್ಲಿ ಸೇನಾ ಪ್ರದರ್ಶನ… ಭಯೋತ್ಪಾದನೆ ಪಾಕ್‌ನ ಮುದ್ದಿನ ಕೂಸು ಎಂಬ ಮೋದಿ ಆರೋಪ.. ಅಮೆರಿಕ, ಚೀನಾ ಈ ಆರೋಪಕ್ಕೆ ಆಕ್ಷೇಪ.. ಭಾರತ- ಚೀನಾ ಸಂಬಂಧ ಅಷ್ಟಕಷ್ಟೆ. ರಷ್ಯಾದಿಂದ ಭಾರತ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಗೆ ಭಾರತ ಅಪಾರ ಹಣ ವೆಚ್ಚ…
ಈ ಎಲ್ಲಾ ಬೆಳವಣಿಗೆಗಳು ದಿನಕ್ಕೊಂದರಂತೆ ನಡೆದು ಭಾರತ-ಪಾಕಿಸ್ತಾನ ನಡುವೆ ಬಿಗುವಿನ ವಾತಾವರಣಕ್ಕೆ ಕಾರಣವಾಗಿರುವ ಬೆನ್ನಲ್ಲೇ ಅತ್ಯಂತ ಮಹತ್ವದ ಬೆಳವಣಿಗೆ ಎನ್ನಲಾದ ಭಾರತ ಮತ್ತು ಚೀನಾ ಅತ್ಯಂತ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿರುವ ಜಮ್ಮು-ಕಾಶ್ಮೀರದಲ್ಲಿ ಜಂಟಿ ಸಮರಾಭ್ಯಾಸ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ಎಲ್ಲರ ಹುಬ್ಬೇರಲು ಕಾರಣವಾಗಿದೆ.

ಲಾಡಖ್‌ನಲ್ಲಿ ಭಾರತ- ಚೀನಾದ ಬುಧವಾರ ಜಂಟಿ ಸಮರಾಭ್ಯಾಸ ನಡೆಸಿವೆ. ಎರಡೂ ದೇಶಗಳು ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು ಹೇಳಿಕೊಂಡಿವೆ. ಇದರಿಂದ ಎರಡೂ ದೇಶಗಳ ನಡುವಣ ಬಾಂಧವ್ಯ ಉತ್ತಮಗೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಬೆಳವಣಿಗೆಯಿಂದ ಅತ್ಯಂತ ದೀರ್ಘ ಸ್ನೇಹಿ ಪಾಕ್‌ನಿಂದ ಚೀನಾ ಎಷ್ಟು ದೂರ ಆಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಗಡಿ ಭಾಗದಲ್ಲಿ ಎರಡೂ ಸೇನಾಪಡೆಗಳು ಭೂಕಂಪನ, ಪ್ರಕೃತಿ ವಿಕೋಪ ಮುಂತಾದ ದುರಂತ ಸಂದರ್ಭದಲ್ಲಿ ಹೇಗೆ ನೆರವಾಗಬಹುದು ಎಂದು ಪ್ರಾಯೋಗಿಕವಾಗಿ ಅಭ್ಯಾಸ ನಡೆಸಿದವು.

ಇದರ ಮುಂದುವರಿದ ಭಾಗವಾಗಿ ಭಾರತ ಫೆಬ್ರವರಿಯಲ್ಲಿ ಚೀನಾದಲ್ಲಿ ಜಂಟಿ ಸಮರಾಭ್ಯಾಸ ನಡೆಸಲಿದೆ. ಭಾರತದ ಪಡೆಯನ್ನು ಬ್ರಿಗೇಡಿಯರ್ ಆರ್.ಎಸ್. ರಾಮನ್ ನೇತೃತ್ವ ವಹಿಸಿದರೆ, ಚೀನಾ ಪರ ಸರ್ ಕರ್ನಲ್ ಫಾನ್ ಜೂನ್ ಇದ್ದರು.