ಗರ್ಭಿಣಿ ಹೊಟ್ಟೆಯಲ್ಲಿ 4.5 ಕೆಜಿ ತೂಕದ ಮಗು ಇದಿದ್ದಕ್ಕೆ ಗರ್ಭಿಣಿಯ ಅಜ್ಜಿಯ ಮೇಲೆ ನರ್ಸ್-ಗಳಿಂದ ಹಲ್ಲೆ!!

0
282

ಗರ್ಭಿಣಿಯರಿಗೆ ಸರಿಯಾಗಿ ಊಟ ಉಪಚಾರ ಮಾಡಿದರೆ ಹುಟ್ಟುವ ಮಗು ಅರೋಗ್ಯವಾಗಿ ಹುಟ್ಟುತ್ತದೆ ಎಂದು ಎಲ್ಲರು ಪ್ರೀತಿಯಿಂದ ಗರ್ಭಿಣಿಯರಿಗೆ ಹೆಚ್ಚಿನ ಆಹಾರ ತಿನಿಸುತ್ತಾರೆ. ಇಲ್ಲದಿಂದರೆ ಹುಟ್ಟುವ ಮಗುವಿನ ತೂಕ ಕಡಿಮೆಯಾಗಿ ಹಲವು ತೊಂದರೆಗಳು ಬರುತ್ತೇವೆ. ಹೀಗೆ ಮೊಮ್ಮಗಳು ಗರ್ಭಿಣಿಯಾದ ಸಂತೋಷದಲ್ಲಿ ಅಜ್ಜಿಯೊಬ್ಬಳು ಹೆಚ್ಚಿನ ಆಹಾರ ತಿನಿಸಿದಕ್ಕೆ, ಮಗು ಹೊಟ್ಟೆಯಲ್ಲಿ ದಪ್ಪವಿದೆ ಎಂದು ನರ್ಸ್-ಗಳಿಂದ ಅಜ್ಜಿ ಗೋಸಾ ಸಿಕ್ಕಿದ ಘಟನೆ ನಡೆದು ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಂಧರ್ಬಿಕ ಚಿತ್ರ

Also read: ಕಾಗೆ’ಗಳಿಗೂ ಬಂತು ಡಿಮ್ಯಾಂಡ್; ಉತ್ತರಕ್ರಿಯೆ ಕಾಗೆ ನೀಡುವ ಬ್ಯುಸಿನೆಸ್-ಗೆ ಭಾರಿ ಬೇಡಿಕೆ..

ಹೌದು ಮೊಮ್ಮಗಳಿಗೆ ಹುಟ್ಟುವ ಮಗು ದಪ್ಪವಾಗಿ ಆರೋಗ್ಯದಿಂದ ಹುಟ್ಟಲಿ ಎನ್ನುವ ಕಾರಣದಿಂದ ಹೆಚ್ಚು ಆಹಾರ ಕೊಟ್ಟಿದ್ದಾಳೆ ಉತ್ತಮ ಪೋಷಕಾಂಶ ಸೇವಿಸಿದ ಗರ್ಭಿಣಿಯೊಬ್ಬಳು 4.5 ಕೆಜಿ ತೂಕದ ಮಗು ಹೆತ್ತು, ನರ್ಸ್​ ಕೈಯಿಂದ ಪೆಟ್ಟು ತಿಂದಿದ್ದಾಳೆ. ಇದು ಕೇಳಲು ಆಶ್ಚರ್ಯ ಆದರೂ ಅಸಲಿಗೆ ಸತ್ಯವಾಗಿದೆ. ಇಂತಹ ಚಿತ್ರವಿಚಿತ್ರ ಘಟನೆ ಸದ್ಯ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದ್ದು, ಗರ್ಭಿಣಿಗೆ ಪ್ರಸವ ನೋವು ಕಾಣಿಸಿಕೊಂಡಿದೆ. ಈ ವೇಳೆ ಹೆರಿಗೆಗೆಂದು ಆಕೆಯನ್ನು ಆಸ್ಪತ್ರೆಗೆ ಕರೆತಂದಾಗ ಗರ್ಭಿಣಿಯ ಪರೀಕ್ಷೆ ನಡೆಸಿದ ನರ್ಸ್​ವೊಬ್ಬರು ಆಕೆಯ ಅಜ್ಜಿ ಕೆನ್ನೆಗೆ ಬಾರಿಸಿದ್ದಾರೆ.

ಏನಿದು ಘಟನೆ?

ಇಂದೋರ್​ ನಿವಾಸಿ ನೇಹಾ ಸರ್ದಾಗೆ ಗುರುವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ, ಈ ವೇಳೆ ಕುಟುಂಬಸ್ಥರು ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ನರ್ಸ್​ಗಳೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಗರ್ಭಿಣಿ ನೋವಿನಿಂದ ನರಳಾಡುತ್ತಿದ್ದರಿಂದ 16 ಇಂಜೆಕ್ಷನ್​ ನೀಡಿದ್ದಾರೆ. ಆದರೆ ಮಗುವಿನ ತೂಕ ಹೆಚ್ಚಿದ್ದರಿಂದ ಆಕೆಗೆ ಹೆರಿಗೆ ತಡವಾಗಿದೆ. ಇದಕ್ಕೆ ಕಾರಣ ಮಗುವಿನ ತೂಕ. ತಾಯಿಯ ಗರ್ಭದಲ್ಲಿದ್ದ ಮಗು ಅತಿ ತೂಕವುಳ್ಳದ್ದಾಗಿದ್ದು, ಹೆರಿಗೆ ಮಾಡಿಸಲು ಕಷ್ಟವಾಗಿದೆ. ಇದರಿಂದ ಸಿಟ್ಟಾದ ನರ್ಸ್​ ಈ ರೀತಿಯಲ್ಲಿ ಹಲ್ಲೆಗೆ ಮುಂದಾಗಿದ್ದಾಳೆ.

ಸಂಧರ್ಬಿಕ ಚಿತ್ರ

Also read: ಜೈಲೂಟ, ಸಹ ಕೈದಿಗಳ ಸ್ನೇಹಕ್ಕೋಸ್ಕರ, ಬಿಡುಗಡೆಯಾದರು ಪುನಃ ಅಪರಾಧ ಮಾಡಿ ಜೈಲು ಸೇರಿತ್ತಿರುವ ವಿಚಿತ್ರ ವ್ಯಕ್ತಿಗೆ ಜೈಲೇ ಸ್ವರ್ಗವಂತೆ!!

ಹೆರಿಗೆ ಮಾಡಿಸಿದ ಬಳಿಕ ಬಂದ ನರ್ಸ್​ ಗರ್ಭಿಣಿಯ ಪತಿಗೆ ಮಗುವಿನ ತೂಕ ಹೆಚ್ಚಳದ ಕುರಿತು ಕ್ಲಾಸ್​ ತೆಗೆದುಕೊಂಡಿದ್ದಾರೆ. ಅಲ್ಲದೇ ಮಗು ಹೃದಯ ಬಡಿಯುತ್ತಿದೆ. ಆದರೆ, ಕೈ, ಕಾಲು ಆಡಿಸುತ್ತಿಲ್ಲ. ಅಳುತ್ತಿಲ್ಲ ಎಂದಿದ್ದಾರೆ. ಆಗ ತಕ್ಷಣಕ್ಕೆ ಕುಟುಂಬಸ್ಥರು ತಾಯಿ,ಮಗುವನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆರಿಗೆ ಸಮಯದಲ್ಲಿ ಆದ ನಿರ್ಲಕ್ಷ್ಯದಿಂದ ಮಗುವು ಬದುಕುಳಿಯಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸಧ್ಯ ಅಜ್ಜಿ ಮೇಲೆ ಹಲ್ಲೆ ಮಾಡಲಾದ ನರ್ಸ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಈ ಕುರಿತು ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಹೇರಿಗೆ ಮಾಡಿಸಲು ಆಗದ ನರ್ಸ್-ಗಳು ಗರ್ಭಿಣಿಯ ಪ್ರಾಣದ ಜೊತೆಗೆ ಚಲ್ಲಾಟವಾಡಿ ಮಗುವಿನ ಪ್ರಾಣವನ್ನು ಬಲಿ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಗು ದಪ್ಪವಿದೆ ಎಂದು ಮನೆಯವರಿಗೆ ಮನಬಂದಂತೆ ಬೈದಿದ್ದಾರೆ. ಮತ್ತು ಗರ್ಭಿಣಿಯ ಅಜ್ಜಿಯ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.