whatsapp ಅಲ್ಲಿ ವೈರಲ್ ಆಗಿ ಗೊಂದಲಕ್ಕೆ ಕಾರಣವಾದ; ಚಾಲೆಂಜ್ ವೋಟ್’ ಟೆಂಡರ್ ವೋಟ್ ಬಗ್ಗೆ ಸರಿಯಾದ ಮಾಹಿತಿ ಇಲ್ಲಿದೆ..

0
479

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ಮತದಾನ ಮಾಡುವುದು ಹೇಗೆ..?

Also read: 2019ರ ಲೋಕಸಭಾ ಚುನಾವಣೆಗೆ ಏನೆಲ್ಲ ಹೊಸ ವಿಧಾನಗಳಿವೆ? ಚುನಾವಣೆಗೆ ಆಯೋಗ ಏನೆಲ್ಲ ಸಿದ್ಧತೆ ಮಾಡಿಕೊಂಡಿದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಲವು ಗೊಂದಲಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸಂದೇಶಗಳಿಂದ ಮತದಾರರಿಗೆ ಇರುವ ಇತರೆ
ಅವಕಾಶಗಳ ಬಗ್ಗೆ ಗೊಂದಲಗಳು ಎದ್ದು ಕಾಣುತ್ತಿದ್ದು. ಹಲವು ದಿನಗಳ ಹಿಂದೆ ಸುದ್ದಿಯಾಗಿದ್ದ ಚಾಲೆಂಜ್ ವೋಟ್ ಬಗ್ಗೆ ವಾಟ್ಸ್ಆ್ಯಪ್ ಸಂದೇಶವೊಂದು ಬಾರಿ ವೈರಲ್ ಆಗಿ ಸುದ್ದಿ ಮಾಡಿತ್ತು. ಇದರ ಪ್ರಕಾರ ಒಂದು ವೇಳೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ನೀವು ಚಾಲೆಂಜ್ ವೋಟ್ ಮಾಡಬಹುದು’ ಎಂಬ ಸಂದೇಶ ಇದಾಗಿತ್ತು.
ಹೌದು ಚಾಲೆಂಜ್ ವೋಟ್ ಬಗ್ಗೆ ವೈರಲ್ ಆದ ವಿಷಯ ಸುಳ್ಳು, ಅದನ್ನು ತಪ್ಪಾಗಿ ವೈರಲ್ ಮಾಡಲಾಗಿದೆ. ಮತ್ತು ಟೆಂಡರ್ ವೋಟ್ ಬಗ್ಗೆಯೂ ಹೇಳಲಾಗಿದೆ. ಇವೆಲ್ಲ ವಿಷಯಗಳು ಎಷ್ಟೊಂದು ಸುಳ್ಳು ಎಷ್ಟೊಂದು ಸತ್ಯ ಎನ್ನುವುದು ಬೂಮ್‍ಲೈವ್ ಫ್ಯಾಕ್ಟ್‌ಚೆಕ್ ಮಾಡಿ ಸತ್ಯಾಂಶ ಹೊರಹಾಕಿದ್ದು ಫ್ಯಾಕ್ಟ್‌ಚೆಕ್ ಮೂಲಕ ತಿಳಿಸಿದ ವಿಷಯ ಹೀಗಿದೆ.

ಬೂಮ್‍ಲೈವ್ ಫ್ಯಾಕ್ಟ್ ಚೆಕ್ ಹೇಳುವ ಹಾಗೆ:

ಈ ಎಲ್ಲ ಗೊಂದಲದ ವಿಷಯಗಳ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್‍ಲೈವ್ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದಕ್ಕಾಗಿ ವಿ ಸಿಟಿಜನ್ ಆ್ಯಕ್ಷನ್ ನೆಟ್ವರ್ಕ್ (VCAN)ನ್ನು ಸಂಪರ್ಕಿಸಿದೆ. VCAN ಭಾರತದ ಚುನಾವಣಾ ಆಯೋಗದ (ECI) ನಾಗರಿಕ ಸಮಾಜ ಸಂಸ್ಥೆಯ ಅಂಗವಾಗಿದೆ. ಈ ಸಂಸ್ಥೆ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಿ ಈ ವೈರಲ್ ಸಂದೇಶದಲ್ಲಿರುವ ಸತ್ಯಾಂಶವನ್ನು ತಿಳಿಸಿದ್ದು.

ತಪ್ಪು ಮತ್ತು ಸರಿ ವಿಷಯಗಳು:

ಮೊದಲು ವಾಟ್ಸ್ಆ್ಯಪ್ ಸಂದೇಶದಲ್ಲಿರುವ ವಿಷಯ 1:  ನೀವು ಮತದಾನ ಮಾಡಲು ಮತಗಟ್ಟೆಗೆ ಹೋದಾಗ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ನಿಮ್ಮ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ತೋರಿಸಿ ಸೆಕ್ಷನ್ 49A ಅಡಿಯಲ್ಲಿ ಚಾಲೆಂಜ್ ವೋಟ್ ಮೂಲಕ ನೀವು ಮತ ಚಲಾಯಿಸಬಹುದು. ಆದರೆ ಇದು ಸುಳ್ಳು.

ನಿಜಾಂಶ ಏನು?

Also read: ಬ್ಯಾಂಕ್-ಗಳು ಹೆಚ್ಚುವರಿ ಸೇವೆ ನೀಡುತ್ತೇವೆ ಅಂತ ನಿಮ್ಮ ಖಾತೆಯಿಂದ ಎಷ್ಟು ದುಡ್ಡು ಕಡಿತ ಮಾಡ್ತಿದ್ದಾರೆ ಗೊತ್ತಾ??

ಮುಖ್ಯಚುನಾವಣಾ ಅಧಿಕಾರಿಯವರಿಂದ VCANಗೆ ಸಿಕ್ಕಿದ ಉತ್ತರದ ಪ್ರಕಾರ, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಯಾರೊಬ್ಬರಿಗೂ ಮತದಾನ ಮಾಡಲು ಸಾಧ್ಯವಿಲ್ಲ. ಫೆಬ್ರುವರಿ 2019ರಲ್ಲಿ ಚುನಾವಣಾ ಆಯೋಗವು ಪೋಲಿಂಗ್ ಏಜೆಂಟ್‍ಗಳಿಗೆ ನೀಡಿದ ಕೈಪಿಡಿಯನ್ನು ಓದಿದರೆ ಅದರಲ್ಲಿ ಈ ರೀತಿ ಇದೆ. ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರನ್ನು ಮತಗಟ್ಟೆಯ ಅಧಿಕಾರಿ (ಪೋಲಿಂಗ್ ಆಫೀಸರ್) ಗುರುತು ಹಿಡಿಯಬೇಕು.  ಮತ್ತು ಚುನಾವಣಾ ನಿಯಮಗಳ ಸಂಹಿತೆ 1961ರ ಪ್ರಕಾರ,  ಸೆಕ್ಷನ್ 49Aಯಲ್ಲಿ ವಿದ್ಯುನ್ಮಾನ ಮತಯಂತ್ರದ ವಿನ್ಯಾಸ ಎಂಬ ಶೀರ್ಷಿಕೆ ಇದೆ.  ವೈರಲ್ ಸಂದೇಶದಲ್ಲಿ ಹೇಳಿದಂತೆ ಈ ಸೆಕ್ಷನ್ 49A  ಚಾಲೆಂಜ್ ವೋಟ್ ಬಗ್ಗೆ ಅಲ್ಲ. ಈ ಸೆಕ್ಷನ್‍ನಲ್ಲಿ ಹೇಳಿರುವುದೇನೆಂದರೆ  ಎಲ್ಲ ವಿದ್ಯುನ್ಮಾನ ಮತಯಂತ್ರಗಳಿಗೆ ಕಂಟ್ರೋಲ್ ಯುನಿಟ್ ಮತ್ತು ಬ್ಯಾಲೆಂಟಿಗ್ ಯುನಿಟ್ ಇರಬೇಕು. ಇಂಥಾ ವಿನ್ಯಾಸಗಳು ಚುನಾವಣಾ ಆಯೋಗದಿಂದ ಅಂಗೀಕರಿಸಿರಬೇಕು. ಎಂದು ಹೇಳಿದೆ.

ಚಾಲೆಂಜ್ ವೋಟ್ ಎಂದರೇನು?

ಮಾಹಿತಿಯಂತೆ ಚಾಲೆಂಜ್ ವೋಟ್ ಎಂದು ತಿಳಿಸುವುದು ತಪ್ಪಾಗುತ್ತದೆ. ಅದು ಚಾಲೆಂಜ್ಡ್ ವೋಟ್. ಸೆಕ್ಷನ್ 49J ಪ್ರಕಾರ ಮತದಾರರನ್ನು ಗುರುತು ಹಿಡಿಯುವಲ್ಲಿ ಪೊಲೀಂಗ್ ಏಜೆಂಟ್‍ಗೆ ಸಂದೇಹ ಬಂದರೆ, ಆ ವೋಟ್‍ನ್ನು ಚಾಲೆಂಜ್ ಮಾಡಿ ಚುನಾವಣೆಯ ಮತಗಟ್ಟೆ ಅಧಿಕಾರಿ (presiding officer) ಬಳಿ ಕರೆದೊಯ್ಯಬೇಕು. ಅಲ್ಲಿ ಅವರು ಈ ಬಗ್ಗೆ ತನಿಖೆ ನಡೆಸುತ್ತಾರೆ. ಇಲ್ಲಿ ಪೋಲಿಂಗ್ ಏಜೆಂಟ್ ಮತದಾರರ ಗುರುತು ಬಗ್ಗೆ ಸಂದೇಹ ವ್ಯಕ್ತ ಪಡಿಸಿ, ಚಾಲೆಂಜ್ ಮಾಡಿದರೆ ಈ ಬಗ್ಗೆ ಚುನಾವಣೆಯ ಮತಗಟ್ಟೆ ಅಧಿಕಾರಿ ನಡೆಸುತ್ತಾರೆ. ಚಾಲೆಂಜ್ ವೋಟ್ ಮಾಡಿದ ಮತದಾರನ ಹೆಸರು ಮತ್ತು ವಿಳಾಸವನ್ನು Form 14ನಲ್ಲಿರುವ ಚಾಲೆಂಜ್ ಮತಗಳ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

Also read: ಆರ್‌ಬಿಐ ಮಹತ್ವದ ನಿರ್ಧಾರ; ಸ್ವಂತ ಮನೆ, ಕಾರು ಖರಿಧಿಸುವ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ..

ಟೆಂಡರ್ ವೋಟ್ ಬಗ್ಗೆ ಮಾಹಿತಿ:

ವೈರಲ್ ಸುದ್ದಿಯಂತೆ ನಿಮ್ಮ ಮತವನ್ನು ಬೇರೆಯವರು ಚಲಾಯಿಸಿದ್ದರೆ ಟೆಂಡರ್ ವೋಟ್ ಮಾಡಲು ಅವಕಾಶ ಕೇಳಿ ನೀವು ಮತದಾನ ಮಾಡಬಹುದು.  ಸಾಮಾಜಿಕ ಜಾಲತಾಣದಲ್ಲಿ ಹರಡಿದ ವಿಷಯ ಸರಿಯಾಗಿದ್ದು ಅದರ ಬಗ್ಗೆ ಸರಿಯಾದ ಮಾಹಿತಿ ಹೀಗಿದೆ.

ಇದರ ಪ್ರಕ್ರಿಯೆ ಹೇಗೆ?

ಮತದಾನದ ಸಂದರ್ಭದಲ್ಲಿ ನಿಮ್ಮ ವೋಟ್-ನ್ನು ನಿಮಗಿಂತ ಮುಂಚೆಯೇ ಬೇರೆ ಯಾರಾದರೂ ನಿಮ್ಮ ಮತ ಚಲಾವಣೆ ಮಾಡಿದ್ದರೆ, ಟೆಂಡರ್ ವೋಟ್‍ಗೆ ಅವಕಾಶ ಕೊಡಿ ಎಂದು ಕೇಳುವ ಮೂಲಕ ನೀವು ನಿಮ್ಮ ಮತ ಚಲಾವಣೆ ಮಾಡಬಹುದು.  ಚುನಾವಣಾ ಆಯೋಗದ ಕೈಪಿಡಿಯಲ್ಲಿಯೂ ಈ ವಿಷಯ ಇದೆ.ನಿಮ್ಮ ಮತವನ್ನು ನಿಮ್ಮದೇ ಹೆಸರಿನಲ್ಲಿ ಬೇರೊಬ್ಬ ವ್ಯಕ್ತಿ ನಿಮಗಿಂತ ಮುಂಚೆ ಮತ ಚಲಾವಣೆ ಮಾಡಿದ್ದರೆ  Presiding officer ನಿಮಗೆ ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಲು ಅವಕಾಶ ಕೊಡಬೇಕು.

ಮರುಮತದಾನ ಸತ್ಯವಾ?

ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿಯಂತೆ, ಯಾವುದೇ ಒಂದು ಮತಗಟ್ಟೆಯಲ್ಲಿ ಶೇ.14ರಷ್ಟು ಟೆಂಡರ್ ವೋಟ್ ಚಲಾವಣೆ ಆದರೆ ಆ ಮತಗಟ್ಟೆಯಲ್ಲಿ ಮರುಮತದಾನ ನಡೆಸಲಾಗುವುದು. ಎನ್ನುವ ವಿಚಾರ ತಪ್ಪು ಸಂದೇಶವಾಗಿದ್ದು, ಇದರ ನಿಜಾಂಶವಾಗಿ.  ಚಾಲೆಂಜ್ ವೋಟ್ ಇಷ್ಟಿದ್ದರೆ ಅಲ್ಲಿ ಮರುಮತದಾನ ನಡೆಸಬಹುದು ಎಂಬ ಯಾವುದೇ ಕಾನೂನು ಇಲ್ಲ. ಆದರೆ ಬಹಳಷ್ಟು ಟೆಂಡರ್ ವೋಟ್‍ಗಳು ಬರುವುದೇ ಅಪರೂಪ. ಒಂದೊಮ್ಮೆ ಬಂದರೂ, ಮರುಮತದಾನ ಏರ್ಪಡಿಸುವ ಯಾವುದೇ ಕಾನೂನು ಇಲ್ಲ.

ಸಂಧರ್ಬಿಕ ಚಿತ್ರ

Also read: ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಮುಂದಿದ್ದಾರೆ; ಚುನಾವಣೆ ಮುಗಿಯುವ ಒಳಗೆ ರಾಹುಲ್ ಗಾಂಧಿ ಮುಂದೆ ಬರಲು ಸಾಧ್ಯವಾ?

ಒಟ್ಟಾರೆಯಾಗಿ ಬೂಮ್ ಟೀಂ ಮಾಹಿತಿಯಂತೆ; ಚುನಾವಣಾ ಆಯೋಗದ ಅಧಿಕೃತ ವಕ್ತಾರೆ ಶೆಫಾಲಿ ಶರಣ್ ಅವರನ್ನು ಬೂಮ್ ಟೀಂ ವಿಚಾರಿಸಿದಾಗ. ವಾಟ್ಸ್ಆ್ಯಪ್ ಸಂದೇಶ ಸುಳ್ಳು ಎಂದಿದ್ದಾರೆ. ನಿಮ್ಮ ಮತವನ್ನು ಬೇರೆ ಯಾರದಾರೂ ಚಲಾವಣೆ ಮಾಡಿದ್ದರೆ ನೀವು ಟೆಂಡರ್ ವೋಟ್ ಮಾಡಬಹುದು. ಆದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ಮತದಾನ ಮಾಡಲು ಸಾಧ್ಯವಿಲ್ಲ ಎಂದು ಶೆಫಾಲಿ ತಿಳಿಸಿದ್ದಾರೆ. ಆದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಚುನಾವಣೆ ವಿಷಯಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಮತದಾನ ಮಾಡುವುದು ಒಳ್ಳೆಯದು.