ಸ್ಪೂರ್ತಿದಾಯಕ ಕಥೆ: ಬದುಕಿಗೆ ಬೆಳಕಾದ ಗಿರಣಿ

0
1052

ಹಾವೇರಿ ಜಿಲ್ಲೆಯ ಹಾನಗಲ್ಲನಲ್ಲಿರುವ ಇಂದಿರಾ ನಗರಕ್ಕೆ ಬರುವವರ ಕಿವಿಗೆ ಹಿಟ್ಟಿನ ಗಿರಣಿಯ ಸದ್ದು ಕೇಳಿಸುತ್ತದೆ. ಹಾಗೇ ಗಿರಣಿ ಯೊಳಗೆ ಕಣ್ಣಾಡಿಸಿದಾಗ ಗಿರಣಿ ನಡೆಸುತ್ತಿರುವ ಮಹಿಳೆಯೋರ್ವಳು ಕಂಡು ಬರುತ್ತಾಳೆ. ಆಕೆಯೇ ಆ ಗಿರಣಿ ಯ ಒಡತಿ ಸಾವಿತ್ರಮ್ಮ ಗೊಂದಿ. ಗಂಡುಮೆಟ್ಟಿನ ನೆಲದವಳು ಸಾವಿತ್ರಮ್ಮನವರ ತೌರೂರು ಗಂಡುಮೆಟ್ಟಿನ ನೆಲ ಧಾರವಾಡ. ತೀರಾ ಬಡ ಕುಟುಂಬ. ಸಾವಿತ್ರಿ ಅವರನ್ನು ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯ ಈರಣ್ಣ ಗೊಂದಿ ಅವರಿಗೆ ಮದುವೆ ಮಾಡಿಕೊಟ್ಟಿದ್ದರು. ಈರಣ್ಣನಿಗೆ ರೈಸ್‍ಮಿಲ್ಲನಲ್ಲಿ ಕೆಲಸ. ಅಲ್ಪ ಸ್ವಲ್ಪ ಕರೆಂಟ್ ರಿಪೇರಿ ಕೆಲಸ ಬಿಟ್ಟರೆ ಬೇರೆನೂ ಗೊತ್ತಿರಲಿಲ್ಲ.

ಕ್ರಮೇಣ ಈರಣ್ಣ ಹಾನಗಲ್ಲಿನಲ್ಲಿ ಒಂದು ಗಿರಣಿ ಆರಂಭಿಸಿದರು. ಮಕ್ಕಳ ಚಿಂತೆ ಹದಿನಾಲ್ಕು ವರ್ಷ ಗಂಡನೊಂದಿಗೆ ತುಂಬು ಸಂಸಾರ ನಡೆಸಿದ ಸಾವಿತ್ರಮ್ಮ ಗಂಡನೊಂದಿಗೆ ಗಿರಣಿ ಕೆಲಸಕ್ಕೂ ಹೆಗಲು ನೀಡುತ್ತಿದ್ದರು. ಆದರೆ ದುರ್ದೈವಶಾತ್ ಈರಣ್ಣ 2014 ರಲ್ಲಿ ಅನಾರೋಗ್ಯದಿಂದ ಮಡದಿ ಮಕ್ಕಳನ್ನು ಅಗಲಿ ಇಹಲೋಕ ಯಾತ್ರೆ ಮುಗಿಸಿದಾಗ ಗಂಡ ಸತ್ತ ಚಿಂತೆಗಿಂತ ಮಕ್ಕಳನ್ನು ಸಾಕುವುದು ಹೇಗೆಂಬ ಚಿಂತೆ ಸಾವಿತ್ರಮ್ಮನವರಿಗೆ ಕಾಡಲಾರಂಭಿಸಿತ್ತು.

ನೊಗ ಹೊತ್ತ ಸಾವಿತ್ರಿರೈಸ್‍ಮಿಲ್ ಕೆಲಸಕ್ಕೆ ಪತಿ ಹೋದ ವೇಳೆ ಗಿರಣಿಯ ಉಸ್ತುವಾರಿಯನ್ನೂ ಸಾವಿತ್ರಮ್ಮ ನೋಡಿಕೊಳ್ಳುತ್ತಿ ದ್ದುದು ಈಗ ಉಪಯೋಗಕ್ಕೆ ಬಂದಂತಾಗಿತ್ತು. ಯಾರು ಏನೇ ಅನ್ನಲಿ ಮಕ್ಕಳನ್ನು ಉಪವಾಸ ಮಲಗಿಸುವುದಿಲ್ಲ ಎಂದುಕೊಂಡ ಸಾವಿತ್ರಮ್ಮ ತಾವೇ ಸ್ವತಃ ಗಿರಣಿಗೆ ಬಂದು ಅದರ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುವ ಮೂಲಕ ಬದುಕಿನ ನೊಗ ಹೊತ್ತರು. ಒಡೆಯನಿಲ್ಲದೇ ಬಿಕೋ ಎನ್ನುತ್ತಿದ್ದ ಗಿg Àಣಿಗೆ ಸಾವಿತ್ರಮ್ಮ ಮರುಜೀವ ನೀಡಿದರು. ಇದರಿಂದಾಗಿ ಇಂದು ಅವರು ಮತ್ತು ಅವರ ಮಕ್ಕಳು ಯಾರ ಬಳಿಯೂ ಕೈಚಾಚದೇ ಬದುಕಲು ಸಾಧ್ಯವಾಗಿದೆ.

ಸೂರ್ಯ ಹುಟ್ಟುವ ಮೊದಲೇ ಎದ್ದು ಗೃಹಕೃತ್ಯಗಳನ್ನೆಲ್ಲ ಮುಗಿಸಿ ಗಿರಣಿಗೆ ಬಂದು ಗ್ರಾಹಕರು ತರುವ ಗೋದಿ, ಜೋಳ, ಅಕ್ಕಿ, ರಾಗಿ, ಇನ್ನಿತರೆ ಮಾಲುಗಳನ್ನು ಶ್ರದ್ಧೆ ಯಿಂದ ಬೀಸಿಕೊಡುವ 37ರ ಸಾವಿತ್ರಿ ಅವರದು ಲವಲವಿಕೆ ತುಂಬಿದ ಹಸನ್ಮುಖ. ರಿಪೇರಿಗೂ ಸೈ ಎಲ್ಲಕ್ಕಿಂತ ವಿಶೇಷವೆಂದರೆ ಸಾವಿತ್ರಮ್ಮ ಕೇವಲ ಗ್ರಾಹಕರ ಕಾಳುಕಡಿಗಳನ್ನು ಗಿರಣಿಗೆ ಹಾಕಿ ಹಿಟ್ಟು ಮಾಡಿ ಕೊಡುವುದಿಲ್ಲ. ಬದಲಾಗಿ ಗಿರಣಿಯ ಯಾವುದೇ ಸಣ್ಣ ಪುಟ್ಟ ರಿಪೇರಿ ಇರಲಿ, ಕಲ್ಲು ಹೊಳೆ ಹೊಯ್ಯವುದಿರಲಿ ಯಾರನ್ನೂ ನೆಚ್ಚಿಕೊಳ್ಳದೇ, ಕಾಯದೇ ಸ್ವತಃ ತಾವೇ ಮಾಡಿಕೊಳ್ಳುತ್ತಾರೆ..!

ಯಾವ್ಯಾವ ವಸ್ತುಗಳನ್ನು ಹೇಗೆ ಹೇಗೆ ಬೀಸಬೇಕು ಎಂಬುದನ್ನು ಪತಿ ಇರುವಾಗಲೇ ತಿಳಿದುಕೊಂಡಿದ್ದ ಸಾವಿತ್ರಮ್ಮ ಈಗ ಈ ವಿದ್ಯೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದರಿಂದ ಅವರ ಗಿರಣಿಯಲ್ಲಿ ತುಸು ಹೆಚ್ಚೇ ಎನಿಸುವಷ್ಟು ಗ್ರಾಹಕರಿರುತ್ತಾರೆ. ಜೋಳ, ಗೋಧಿ, ಅಕ್ಕಿ, ರಾಗಿ, ಖಾರದಪುಡಿ, ಮಸಾಲೆ ಸೇರಿ ದಂತೆ ಎಲ್ಲ ಧಾನ್ಯಗಳನ್ನೂ ಅಚ್ಚುಕಟ್ಟಾಗಿ ಬೀಸಿ ಕೊಡುವ ಸಾವಿತ್ರಮ್ಮ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಕೈಹಿಡಿದ ಸ್ವಸಹಾಯ ಸಂಘಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ನಿಸರ್ಗ ಸ್ವ ಸಹಾಯ ಸಂಘದ ಸದಸ್ಯರೂ ಆಗಿರುವ ಸಾವಿತ್ರಮ್ಮ ಈ ಸಂಘದಿಂದ ಆರ್ಥಿಕ ನೆರವು ಪಡೆದು ಗಿರಣಿ ಯನ್ನು ಅಭಿವೃದ್ಧಿಪಡಿಸಿದ್ದಾರೆ. ಈಗ ಪ್ರತಿನಿತ್ಯ ಏನಿಲ್ಲವೆಂದರೂ 700 ರಿಂದ 800 ರೂ. ಗಳಿಸುವ ಇವರ ತುತ್ತಿನ ಚೀಲ ತುಂಬಲು ಹಿಟ್ಟಿನ ಗಿರ ಣಿಯೇ ಆಸರೆ ಯಾಗಿದೆ.
ವ್ಯವಹಾರ ಚತುರೆ
ಶಾಲೆಯ ಮೆಟ್ಟಿ ಲನ್ನೂ ಹತ್ತದ ಸಾವಿ ತ್ರಮ್ಮ ವ್ಯವಹಾರ ಚತು ರರು. ಗಿರಣಿಗೆ ಬರುವ ಗ್ರಾಹಕ ರೊಡನೆ ನಗು ನಗುತ್ತಾ ವ್ಯವಹರಿಸುವ ಅವರು ಬಂದ ಆದಾಯದಲ್ಲೇ ಉಳಿತಾಯವನ್ನೂ ಮಾಡುತ್ತಾರೆ. ಹಣಕಾಸು ವ್ಯವಹಾರವನ್ನೂ ತುಂಬಾ ಸಲೀಸಾಗಿ ನಿರ್ವಹಿಸುತ್ತಾರೆ. ಜೊತೆಗೆ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂದು ಮೂವರೂ ಮಕ್ಕಳನ್ನೂ ಶಾಲೆಗೆ ಸೇರಿಸಿ ಅವರ ವಿದ್ಯಾಭ್ಯಾಸದ ಕಾಳಜಿಯನ್ನೂ ಮಾಡುತ್ತಾರೆ.

ಈಗ ಅವರ ಮಕ್ಕಳಾದ ಆರತಿ, ಕೀರ್ತಿ ಮತ್ತು ಕಾರ್ತಿಕ ಕುಮಾರೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದು, ಎಷ್ಟೇ ಕಷ್ಟವಾಗಲೀ ಮಕ್ಕಳನ್ನು ಓದಿಸುತ್ತೇನೆ. ಅವರು ಕಲಿತು ದೊಡ್ಡ ಹುದ್ದೆ ಪಡೆಯಬೇಕು. ನನ್ನ ಕಷ್ಟ ನನ್ನ ಮಕ್ಕಳಿಗೆ ಬರಬಾರದು ಎನ್ನುವ ಸಾವಿತ್ರಿ ಅವರ ಸಮಯಪ್ರಜ್ಞೆ, ಸಾಧನೆ, ವ್ಯವಹಾಹ ಕೌಶಲ್ಯ ಇತರ ಮಹಿಳೆಯರಿಗೆ ನಿಜಕ್ಕೂ ಮಾದರಿ ನಡೆ ಎಂದರೂ ತಪ್ಪಾಗ ಲಾರದು.

ಸರ್ಕಾರಿ ಸೌಲಭ್ಯವೂ ಇಲ್ಲಬಡವರಿಗಾಗಿ ಸರಕಾರ ಸಾಕಷ್ಟು ಯೋಜನೆ ಗಳನ್ನು ರೂಪಿಸಿದೆ. ಆದರೆ ಅವು ತಮ್ಮಂಥವರಿಗೆ ದೊರಕುವುದಿಲ್ಲ ಎಂದು ನೇರ ಮತ್ತು ನಿಷ್ಠೂರ ವಾಗಿ ಹೇಳುವ ಸಾವಿತ್ರಮ್ಮ ಈ ಯೋಜನೆಗಳ ಲಾಭ ಪಡೆಯಬೇಕೆಂದರೆ ವಶೀಲಿಬಾಜಿ ಬೇಕು. ಬಾಯಿ ಜೋರಿರಬೇಕು. ಎಲ್ಲಕ್ಕಿಂತ ಮೊದಲು ಕೆಲಸಬೊಗಸೆ ಬಿಟ್ಟು ಯೋಜನೆ ದೊರಕಿಸಿ ಕೊಳ್ಳಲು ಕಚೇರಿ ಅಡ್ಡಾಡಬೇಕು. ಅದಕ್ಕೆ ಇದೆಲ್ಲಾ ಬೇಡವೇ ಬೇಡ ಎಂದು ಸ್ವತಂತ್ರವಾಗಿ ಪುರು ಷರೂ ನಾಚುವಂತೆ ಮನೆ ಮತ್ತು ಗಿರಣಿ ನಡೆಸಿಕೊಂಡು ಹೋಗುವ ಮೂಲಕ ಎಲ್ಲರಿಗೂ ಸ್ವಾವಲಂಬನೆಯ ಪಾಠ ಕಲಿಸಿದ್ದಾರೆ ಸಾವಿತ್ರಿ. ಕೊನೆಹನಿಇಂದು ಮಹಿಳೆಯರು ಪಿ.ಎಸ್.ಐ, ಕಂಡಕ್ಟರ್, ಪೈಲಟ್, ರಾಜಕಾರಣಿ,

ಅಟೋಚಾಲಕಿಯರಾಗಿ ವಿವಿಧ ಉದ್ಯೋಗಗಳಲ್ಲಿ vಚಿÉೂಡಗಿಸಿಕೊಂಡಿದ್ದಾರೆ. ಆದರೆ ಸಾವಿತ್ರಮ್ಮ ಅವರು ಪುರುಷರಿಗಷ್ಟೇ ಮೀಸಲು ಎನಿಸಿದ ಗಿರಣಿಯನ್ನು ಯಾರೊಬ್ಬರ ಸಹಾಯವೂ ಇಲ್ಲದೇ ನಡೆಸುತ್ತಿರುವುದು ಸ್ತ್ರೀಸಂಕುಲಕ್ಕೆ ಹೆಮ್ಮೆಯ ವಿಷಯ. ಮಹಿಳೆ ಮನಸ್ಸು ಮಾಡಿದರೆ ಯಾವುದೇ ಉದ್ಯೋಗ ವಿರಲಿ ನಿರ್ವಹಿಸಬಲ್ಲಳು ಎಂಬುದಕ್ಕೆ ಸಾವಿತ್ರ ಅವರು ಜೀವಂತ ಉದಾಹರಣೆಯಾಗಿ ನಿಲ್ಲುತ್ತಾರೆ.