ಸಂಶೋಧನೆ ವೇಳೆ ಅವಘಡ ಸಂಭವಿಸಿ ದೃಷ್ಟಿದೋಷಕ್ಕೀಡಾದ ಶಿಕ್ಷಕಿಯೊಬ್ಬರು ನೂರಾರು ಬುದ್ಧಿಮಾಂದ್ಯ ಮಕ್ಕಳಿಗೆ ದಾರಿದೀಪವಾದ ಕತೆ ಹೇಗೆ ಇದೆ ನೋಡಿ..

0
301

ಕೆಲವರಿಗೆ ಏನೇ ಇದ್ದರು ಏನೋ ಸಾಧನೆ ಮಾಡುವ ಮನಸ್ಸು ಇರುವುದಿಲ್ಲ. ಇನ್ನೂ ಕೆಲವರಂತೂ ತಾವು ಹುಟ್ಟಿದು ಸಹಾಯಕ್ಕೆ ಎಂದು ಬದುಕುತ್ತಾರೆ. ಇಂತಹ ಧಾರಾಳ ಮನಸ್ಸು ಹೊಂದಿರುವ ಜನರು ತಮ್ಮ ಖಾಸಗಿ ಜೀವನವನ್ನೇ ಬಿಟ್ಟು ಸೇವೆಯಲ್ಲಿ ತೊಡಗುತ್ತಾರೆ. ಅದರಲ್ಲಿ ಸರಿಯಾಗಿದ್ದ ಮನುಷ್ಯ ಜೀವನದಲ್ಲಿ ಯಾವುದಾದರು ತೊಂದರೆಗೆ ಒಳಗಾಗಿ ತನ್ನ ಜೀವನ ಮಾಡಿಕೊಳುವುದು ತನಗೆ ಕಷ್ಟ ವಾಗುವ ಸ್ಥಿತಿ ತಿಳಿದರೆ ಸಾಕು, ಜೀವನವೇ ಇಲ್ಲಿಗೆ ನಿಂತಿತು, ಜೀವನ ಪೂರ್ತಿಯಾಗಿ ಬೇರೆಯವರ ಹಂಗಿನಲ್ಲಿ ಬದುಕು ಸಾಗಿಸಬೇಕು ಎನ್ನುತ್ತಾ ನರಳಾಟದಲ್ಲಿ ಬದುಕು ನಡೆಸುತ್ತಾರೆ.

Also read: ಆಂಬುಲೆನ್ಸ್ ಅಲ್ಲ, ಅಂಬಾಸಿಡರ್ ಕಾರೇ ಅಂಬುಲೆನ್ಸ್ ಮಾಡಿಕೊಂಡು 45 ವರ್ಷಗಳಿಂದ ಉಚಿತವಾಗಿ, ಸಾವಿರಾರು ಜನರ ಪ್ರಾಣ ಉಳಿಸಿದ ವ್ಯಕ್ತಿಗೆ ಏನ್ ಅಂತ ಕರೆಯಬೇಕು??

ಆದರೆ ನಿಜವಾದ ಸಾಧನೆ ಮಾಡುವ ಹಠವಿರುವ ವ್ಯಕ್ತಿ ತನ್ನ ತನ್ನ ಸಾಧನೆಯಲ್ಲಿ ಏನಾದರು ದೊಡ್ಡ ಆಪತ್ತೆ ಒದಗಿದರು ಅದನ್ನೇ ಒಂದು ಚಾಲೆಂಜ್ ಮಾಡಿಕೊಂಡು ಬದುಕಿ ಸಮಾಜದಲ್ಲಿ ಹೆಸರು ಮಾಡುತ್ತಾರೆ. ಇಂತವರ ಸಾಲಿನಲ್ಲಿ ಬರುವ 65 ವರ್ಷದ “ಅಮೃತವಲ್ಲಿ” ಎನ್ನುವ ಗಟ್ಟಿ ಮನಸ್ಸಿನ ಮಹಿಳೆ ಮಾಡುವ ಕೆಲಸ ಅವರು ಮತ್ತು ಅವರು ಬಂದಿರುವ ದಾರಿ ಕೇಳಿದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ.

ಏನಿದು ಅಮೃತವಲ್ಲಿ ಟೀಚರ್ ಕತೆ?

ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ನಿವಾಸಿಯಾಗಿರೋ ಅಮೃತವಲ್ಲಿ ಎನ್ನುವ 65 ವರ್ಷದ ಟೀಚರ್ ಒಬ್ಬರು ಇಷ್ಟೊಂದು ಇಳಿವಯಸ್ಸಿನಲ್ಲೂ ಬುದ್ಧಿಮಾಂದ್ಯ ಮಕ್ಕಳ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಹಾಗೆಯೇ ಅದೆಷ್ಟೋ ಬುದ್ಧಿಮಾಂದ್ಯ ಮಕ್ಕಳನ್ನು ಸರಿಮಾಡಿ ಒಳ್ಳೆಯ ಕ್ಷೆತ್ರದಲ್ಲಿ ಉದ್ಯೋಗ ಸಿಗುವ ಹಾಗೆ ಮಾಡಿದ್ದಾರೆ. ಇವರು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ. ಜೀವನದ ಗುರಿಯನ್ನು ಬೆನ್ನುಹತ್ತಿದ ಇವರು ಸಂಶೋಧನೆ ಮಾಡತ್ತಿರುವ ವೇಳೆ ಅವಘಡ ಸಂಭವಿಸಿ ದೃಷ್ಟಿದೋಷಕ್ಕೀಡಾಗಿದರು. ಈ ವೇಳೆ ನನ್ನ ಜೀವನ ಹೇಗೆ ಎನ್ನುವ ಯೋಚನೆ ಬರುವುದು ಸಾಮಾನ್ಯ ಆದರೆ ಅಮೃತವಲ್ಲಿ ಟೀಚರ್ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ. ತಮ್ಮ ವಿಚಾರವನ್ನು ತಳ್ಳಿಹಾಕಿ ಮದುವೆಯನ್ನು ತ್ಯಜಿಸಿದರು.

Also read: ಸಾಧಿಸುವ ಛಲವಿದ್ದರೆ ಎಲ್ಲವೂ ಸಾಧ್ಯ ಅನ್ನೋದಕ್ಕೆ ಇದೇ ಸಾಕ್ಷಿ, ಈತನಿಗೆ ಜೈಲಿನಲ್ಲಿದ್ದಾಗ ಬರೆದ ಕೃತಿಗೆ ಪ್ರಶಸ್ತಿ ಜೊತೆಗೆ 50 ಲಕ್ಷ ರುಪಾಯಿ ಬಹುಮಾನ ಬಂದಿದೆ!!

ನಂತರ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ 2 ದಶಕಗಳ ಕಾಲ ವಿಜ್ಞಾನ, ಇಂಗ್ಲೀಷ್ ಬೋಧಿಸಿದರು. ಇಷ್ಟಾದರೂ ಅವರಿಗೆ ವಿಧಿಯ ಆಟ ನಿಲ್ಲದೆ, ದೃಷ್ಟಿ ದೋಷದಲ್ಲಿ ಏರುಪೇರು ಹೆಚ್ಚಾಗಿ ಹೋಯಿತು. ನಂತರ ಶಾಲೆಗೆ ಹೋಗಲು ಸಾಧ್ಯವಾಗದ ಸ್ಥಿತಿ ಬಂದಿತು. ಮತ್ತೆ ಜೀವನದಲ್ಲಿ ಚಾಲೆಂಜ್-ನ್ನು ತಿರುವು ಪಡೆದು ಶಿಕ್ಷಕ ವೃತ್ತಿ ಬಿಟ್ಟು ಮನೆಯಲ್ಲೇ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಆರಂಭಿಸಿದ್ರು. ಬಿಡುವಿನ ವೇಳೆ ಆತ್ಮವಿಕಸನ ಅನ್ನೋ ಯೋಗ ತರಬೇತಿಗೆ ಸೇರಿದ್ರು. ಆಚಾರ್ಯ ವಿನಯ್ ಗೂರೂಜಿಗಳ ಮಾತಿನಿಂದ ಪ್ರೇರಣೆಯಾಗಿ ಬುದ್ಧಿಮಾಂದ್ಯ ಮಕ್ಕಳ ಸೇವೆ ಮಾಡಲು ಯೋಚನೆಯನ್ನು ಮಾಡಿದರು ಇದಕ್ಕೆ ತಮ್ಮ ಬಳಿ ಹಣವಿಲ್ಲದ ಕಾರಣ ಗಾಡವಾದ ಯೋಚನೆಯಲ್ಲಿ ತೊಡಗಿದರು.

ನಂತರ ಹಣವಿರುವರ ಹತ್ತಿರ ಸಹಾಯ ಕೇಳಿ 2006ರಲ್ಲಿ ಬುದ್ದಿಮಾಂದ್ಯ ಮಕ್ಕಳಿಗೆ ಶಾಲೆ ಆರಂಭಿಸುವ ಯೋಚನೆ ಬಂದಾಗ ಯೋಗ ತರಬೇತಿಗೆ ಮದ್ದಿರೆಡ್ಡಿ, ಬಾಬುರೆಡ್ಡಿ, ರಾಜಶೇಖರರೆಡ್ಡಿ ಸಾಥ್ ನೀಡಿದ್ರು. `ವಿ ಫೀಲ್’ ಅನ್ನೋ ಟ್ರಸ್ಟ್ ಸ್ಥಾಪಿಸಿ, ಟ್ರಸ್ಟ್ ಸದಸ್ಯರೊಬ್ಬರ ರೇಷ್ಮೆ ನೂಲು ಕಾರ್ಖಾನೆಯಲ್ಲಿ `ಆಧಾರ’ ಶಾಲೆ ಆರಂಭಿಸಿದ್ರು. ಪ್ರಾರಂಭದಲ್ಲಿ 10-12 ಇದ್ದ ವಿಶೇಷಚೇತನ ಹಾಗೂ ಬುದ್ಧಿಮಾಂದ್ಯರು. ಹೆಚ್ಚಾಗ ತೊಡಗಿದರು ಪಾಲಕರಿಗೆ ಹೊರೆಯಾದ ಮಕ್ಕಳು ಇವರಲ್ಲಿ ಜೀವನ ಕಲ್ಪಿಸಲು ಮುಂದಾದರು.

Also read: ಈ ವ್ಯಕ್ತಿಯ ಸಮಾಜ ಸೇವೆ ಕೇಳಿದರೆ ಇವರಿಗೆ ಎಷ್ಟೇ ಅಭಿನಂದನೆ ಸಲ್ಲಿಸಿದರು ಕಡಿಮೆ ಅನಿಸುತ್ತೆ; ಏಕೆ ಅಂತ ಈ ಸ್ಟೋರಿ ಓದಿ..

ವಿಶೇಷ ಎಂದರೆ ಈ ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಎಲ್ಲ ತರಬೇತಿ ನೀಡುತ್ತಾರೆ. ಇದರಿಂದ ಬಹಳಷ್ಟು ಜನರು ಬೇರೆಯವರ ಸಹಾಯವಿಲ್ಲದೆ ಓದು ಬರಹ ಕಲಿತು ಜೀವನ ಮಾಡುತ್ತಿದ್ದಾರೆ. ಮತ್ತೆ ಹಲವರು ವಿವಿಧ ಕ್ಷೆತ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಜೀವನ ಮಾಡುತ್ತಿದ್ದಾರೆ. ಸಾರ್ವಜನಿಕರಿಂದ ದೇಣಿಗೆ ಪಡೆದು ಸದ್ಯ ಸ್ವಂತ ಕಟ್ಟಡ ತಲೆ ಎತ್ತಿದೆ. ಶಾಲೆಯಲ್ಲಿ 35 ರಿಂದ 40 ಬುದ್ಧಿಮಾಂದ್ಯ ಮಕ್ಕಳಿಗೆ ಯೋಗ, ನೃತ್ಯ, ಹಾಡು, ಕ್ರೀಡೆ ಸೇರಿದಂತೆ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಹೊಸ ಪ್ರಪಂಚವನ್ನ ಪರಿಚಯಿಸುತ್ತಿದ್ದಾರೆ. ಈ ಸಾಧನೆಯ ಬಗ್ಗೆ ಮಾತನಾಡಿದ ಅಮೃತವಲ್ಲಿ’ ನನಗೆ ಈ ಸೇವೆ ಸಂತೋಷ ತಂದಿದೆ ನನ್ನ ಜೀವನಕ್ಕೆ ಅರ್ಥ ಬಂದಿದೆ ಎಂದು ಹೇಳಿದ್ದಾರೆ.